ಬಳ್ಳಾರಿ: ಶಾಲಾ ಲಸಿಕಾ ಅಭಿಯಾನ

ಬಳ್ಳಾರಿ 12: ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ನಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಇವರ ವತಿಯಿಂದ ಡಿ.ಪಿ.ಟಿ/ ಟಿ.ಡಿ. ಲಸಿಕಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಲಸಿಕೆಯನ್ನು ಶಾಲೆಯ ಸುಮಾರು 1890 ವಿಧ್ಯಾಥರ್ಿಗಳಿಗೆ ಹಾಕಲಾಯಿತು. 

ಕಾರ್ಯಕ್ರಮವನ್ನು ನಡೆಸಿಕೊಟ್ಟ ಜಿಲ್ಲಾ ಆಡಳಿತಕ್ಕೂ ಹಾಗೂ ಭಾಗವಹಿಸಿದ ಎಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿಯವರಿಗೂ ಶಾಲೆಯ ಪೋಷಕರ ಪರವಾಗಿ ಹಾಗೂ ಶಿಕ್ಷಕರ ಪರವಾಗಿ, ಶಾಲೆಯ ಅಧ್ಯಕ್ಷರಾದ ಡಾ.ಎಸ್.ಜೆ.ವಿ. ಮಹಿಪಾಲ್, ಪ್ರಾಂಶುಪಾಲ ಜೆ.ಅನೀಲ್ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.