ಬಳ್ಳಾರಿ: ಪೋಷಕರ ಪತ್ತೆಗಾಗಿ ಮನವಿ

ಬಳ್ಳಾರಿ 21: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀನದ ಬಾಲಕರ ಬಾಲಮಂದಿರ ಆವರಣದಲ್ಲಿರುವ ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ಆ.14 ರಂದು 10 ದಿನದ ನವಜಾತ ಹೆಣ್ಣು ಮಗು ದಾಖಲಾಗಿದೆ ಎಂದು ಸಂಸ್ಥೆಯ ಅಧೀಕ್ಷಕರು ತಿಳಿಸಿದ್ದಾರೆ. 

ಈ ನವಜಾತ ಶಿಶುವು ಬಳ್ಳಾರಿ ನಗರದ ರೈಲ್ವೇ ಸ್ಟೇಷಸ್ ಫ್ಲಾಟ್ ಫಾರಂ ಬಳಿ ಪತ್ತೆಯಾಗಿದೆ. ದುಂಡು ಮುಖ, ಕಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲ ಇರುತ್ತದೆ. ಈ ಮಗುವಿಗೆ ಸಂಸ್ಥೆಯವರು ನಿಶ್ಚಿತಾ ಎಂದು ಹೆಸರು ಇಟ್ಟಿರುತ್ತಾರೆ. ಈ ಮಗುವಿನ ಪೋಷಕರು, ಪಾಲಕರು ಅಥವಾ ವಾರಸುದಾರರು ಇದ್ದಲ್ಲಿ ಕೂಡಲೇ ಅಮೂಲ್ಯ ವಿಶೇಷ ದತ್ತು ಸಂಸ್ಥೆ, ಸಕರ್ಾರಿ ಬಾಲಕರ ಬಾಲಮಂದಿರ ಆವರಣ, ಕಂಟೋನ್ಮೆಂಟ್ ಹತ್ತಿರ, ಬಳ್ಳಾರಿ ಕಚೇರಿಗೆ ಅಥವಾ ದೂ.ಸಂ.08392-297101ಗೆ ಸಂಪಕರ್ಿಸಬಹುದು