ಬಳ್ಳಾರಿ: ರಾಷ್ಟ್ರ ಸೇವಿಕಾ ಸಮಿತಿ: ಗುರುಪೌರ್ಣಿಮೆ ಆಚರಣೆ

ಲೋಕದರ್ಶನ ವರದಿ

ಬಳ್ಳಾರಿ 22: ಜೀವನದಲ್ಲಿ ಇಟ್ಟುಕೊಂಡ ಗುರಿಯನ್ನು ತಲುಪಲು ಗುರುವಿನ ಸಹಾಯಬೇಕು. ಗುರುವೆಂದರೆ ಕತ್ತಲಿನಿಂದ ಬೆಳಕಿನ ಕಡೆಗೆ ಕೊಂಡೊಯ್ಯುವವನು ಎಂದು ಇತಿಹಾಸದ ಸತ್ಯ ಘಟನೆಯನ್ನು ಶ್ರೀಮತಿ ಕೊಟ್ರಬಸಮ್ಮ ಅವರು ನೆನಪಿಸಿದರು. ಅವರು ಭಾನುವಾರ ಸಂಜೆ ನೆಹರೂ ಕಾಲನಿಯ ಜ್ಯೋತಿ ಅವರ ಮನೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ವತಿಯಿಂದ ಹಮ್ಮಿಕೊಂಡ ಗುರುಪೌರ್ಣಮಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. 

ಮುಖ್ಯ ವಕ್ತಾರರಾಗಿ ಆಗಮಿಸಿದ್ದ್ ಬಸವನಗೌಡ್ರು ಮಾತನಾಡುತ್ತಾ ಭಾರತದ ಇತಿಹಾಸ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ನೆನಪಿಸಿ, ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ. ಹಾಗೇ ಪ್ರತಿಯೊಬ್ಬ ಮನುಷ್ಯರು ತನ್ನ ಜೀವನದಲ್ಲಿ ಸಮಾಜದ ಏಳಿಗೆಗಾಗಿ ಸ್ವಲ್ಪ ಸಮಯವನ್ನಾದರೂ ಮೀಸಲಿಡಬೇಕು. ಅಂದರೆ ಮಾತ್ರ ತೇಜಸ್ವಿ  ಹಿಂದೂ ರಾಷ್ಟ್ರ ಪುನರ್ ನಿರ್ಮಾಣದ ಕನಸು ನನಸಾಗುವುದು ಎಂದರು. 

ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಮಾತೆಯರು ಹಾಗೂ ಮಕ್ಕಳು ಭಾಗವಹಿಸಿದ್ದು ಸಮಿತಿಯ ಕಾರ್ಯಕತರ್ೆಯರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.