ಬಳ್ಳಾರಿ: ಜಿಲ್ಲಾಮಟ್ಟದ ಸಾರ್ವಜನಿಕ ಸಂವಾದ

ಲೋಕದರ್ಶನ ವರದಿ

ಬಳ್ಳಾರಿ 18: ಮಹಿಳೆ ಮತ್ತು ಮಕ್ಕಳ ಸಾಗಾಣಿಕೆಯಲ್ಲಿ(ಮಾನವ ಕಳ್ಳ ಸಾಗಾಣಿಕೆ) ಪ್ರಪಂಚದ 2ನೇ ದೊಡ್ಡ ಉದ್ಯಮವಾಗಿದೆ. ಅಪಾರ ಪ್ರಮಾಣದ ಹಣ ಈ ಉದ್ಯಮದಲ್ಲಿ ಹೂಡಿಕೆ ಮಾಡಲಾಗುತ್ತಿದ್ದು, 8ಲಕ್ಷ ಜನರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸ್ಪಂದನಾ ಸಂಸ್ಥೆಯ ನಿರ್ದೇಶಕಿ ವಿ.ಸುಶೀಲಾ ಹೇಳಿದರು.

ರೀಡ್ಸ್ ಸಂಸ್ಥೆ, ಸ್ಪಂದನಾ ಬೆಳಗಾವಿ,ಕೈಲಾಸ್ ಸತ್ಯಾಥರ್ಿ ಚಿಲ್ಡ್ರನ್ಸ್ ಫೌಂಡೇಶನ್ ನವದೆಹಲಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ನಗರದ ಜಿಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ಕುರಿತ ಜಿಲ್ಲಾಮಟ್ಟದ ಸಂವಾದ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಬಡತನ,ಶಿಕ್ಷಣ,ನಿರುದ್ಯೋಗ ಸೇರಿದಂತೆ ನಾನಾ ಕಾರಣಗಳಿಂದ ಮಾನವ ಕಳ್ಳ ಸಾಗಾಣಿಕೆ ನಡೆಯುತ್ತಿದೆ. ಈ ಸಾಗಾಣಿಕೆಯ ಆಳ-ಅಗಲ ಎಷ್ಟಿದೆ ಎಂಬುದು ಇಂದಿಗೂ ತಿಳಿಯುತ್ತಿಲ್ಲ ಎಂದು ವಿವರಿಸಿ  ಒಟ್ಟಾರೆ ನಡೆಯುವ ಸಾಗಾಣಿಕೆಯಲ್ಲಿ ದೇಶದೊಳಗೆ ಶೇ.70ರಷ್ಟು ಮತ್ತು ಹೊರಗಡೆ ಶೇ.30ರಷ್ಟು ನಡೆಯುತ್ತಿದೆ ಎಂದರು.

ಶೇ.46ರಷ್ಟು ಪ್ರಮಾಣದಲ್ಲಿ ವೆಶ್ಯಾವಾಟಿಕೆ ಕಾರಣಕ್ಕೆ, ಶೇ.26ರಷ್ಟು ಬಾಲಕಾಮರ್ಿಕ ಪದ್ದತಿ, ಶೇ.26ರಷ್ಟು ಭೀಕ್ಷಾಟನೆ ಸೇರಿದಂತೆ ಇನ್ನೀತರ ಕಾರಣಗಳಿಗಾಗಿ ಮಾನವ ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಗೆ ಸಂಬಂಧಿಸಿದಂತೆ ಯಾವ ಸವಾಲುಗಳಿವೆ?,ಸಮಸ್ಯೆಗಳನ್ನೆದುರಿಸಲಿಕ್ಕೆ ಕಾನೂನುಗಳ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಸೂಕ್ತ ಸಲಹೆ ಸೂಚನೆಗಳ ಪಡೆಯುವ ನಿಟ್ಟಿನಲ್ಲಿ ಈ ಸಂವಾದ ಏರ್ಪಡಿಸಲಾಗಿದೆ ಎಂದು ಅವರು ವಿವರಿಸಿದರು.

ಮಕ್ಕಳ ಸಾಗಾಣಿಕೆ ಮತ್ತು ಲೈಂಗಿಕ ಶೋಷಣೆ ದೇಶದಲ್ಲಿ ಯಾವ ರೀತಿ ನಡಿತಾ ಇದೆ ಎಂಬುದಕ್ಕೆ ಸಂಬಂಧಿಸಿದಂತೆ ಕೈಲಾಸ್ ಸತ್ಯಾರ್ಥ  ಚಿಲ್ಡ್ರನ್ಸ್ ಫೌಂಡೇಶನ್ ಅಧ್ಯಯನದ ಪ್ರಯತ್ನಕ್ಕೆ ಕೈಹಾಕಿದ್ದು, ರಾಜ್ಯದಲ್ಲಿ ನಮ್ಮ ಸ್ಪಂದನಾ ಸಂಸ್ಥೆಯನ್ನು ನೋಡಲ್ ಸಂಸ್ಥೆಯನ್ನಾಗಿ ನಿಯೋಜಿಸಿದೆ. ಈಗಾಗಲೇ ರಾಜ್ಯದಲ್ಲಿ 5 ಕಡೆ ಈ ರೀತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. 

ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿ ಮಕ್ಕಳಿಗೆ ಒಳ್ಳೆಯದು ಮತ್ತು ಕೆಟ್ಟದು ಯಾವುದು ಎಂಬುದನ್ನು ತಿಳಿಸಿಕೊಡುವುದು ಅಗತ್ಯವಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಅವರು ಮಾತನಾಡಿದರು.

ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದಶರ್ಿಗಳಾದ ಅರ್ಜುನ್ ಎಸ್.ಮಲ್ಲೂರ ಅವರು ತೀರ್ಪುಗಾರರಾಗಿ ಭಾಗವಹಿಸಿದ್ದರು.

ನಂತರ ಮಕ್ಕಳ ಸಾಗಾಣಿಕೆ ಹಾಗೂ ಲೈಂಗಿಕ ಶೋಷಣೆ ಕುರಿತು ಸಾರ್ವಜನಿಕ ಸಂವಾದ ನಡೆಯಿತು. 

ಕಾರ್ಯಕ್ರಮದಲ್ಲಿ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ, ಕಾಡರ್್ ಸಂಸ್ಥೆ ಅಧ್ಯಕ್ಷ ಬಿ.ಡಿ.ಗೌಡ, ರೀಡ್ಸ್ ಸಂಸ್ಥೆಯ ಮಂಡಳಿ ಸದಸ್ಯ ಹನುಮಂತರೆಡ್ಡಿ, ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು,ಶಿಕ್ಷಕರು ಮತ್ತು ವಿವಿಧ ಶಾಲೆಗಳ ಮಕ್ಕಳು ಇದ್ದರು.