ಲೋಕದರ್ಶನ ವರದಿ
ಬಳ್ಳಾರಿ 26: ನಗರದ ಸತ್ಯನಾರಾಯಣಪೇಟೆಯ 1ನೇ ಕ್ರಾಸ್ನಿಂದ 5ನೇ ಕ್ರಾಸ್ವರೆಗೆ ಯುಜಿಡಿ ಕಾಮಗಾರಿ ಹಲವಾರು ದಿನಗಳಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಬಡಾವಣೆಯ ನಿವಾಸಿಗಳಿಗೆ ಒಳಚರಂಡಿಯ ನೀರು ಮೇಲೆ ಹರಿದು ಬರುತ್ತಿರುವುದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಹಲವಾರು ಬಾರಿ ಆಯಕ್ತರಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಅದಕ್ಕಾಗಿ ಬುಧವಾರ ನಗರದ 2ನೇ ಕ್ರಾಸ್ ಬಳಿ ಕರ್ನಾಟಕ ಜನಸೈನ್ಯ ವೇದಿಕೆಯಿಂದ ಪ್ರತಿಭಟನೆ ನಡೆಸಿದರು.
ಇದರ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಕೆ.ಎನ್.ಅಶೊಕ್ ಹಾಗೂ ಸಂಸ್ಥಾಪಕ ಅಧ್ಯಕ್ಷ ಯರಿಸ್ವಾಮಿ ಇವರ ನೇತೃತ್ವದಲ್ಲಿ ನೂರಾರು ಸಂಘಟನೆಯ ಕಾರ್ಯಕರ್ತರು, ಹಿರಿಯ ಮುಖಂಡರು ಮತ್ತು ಮಹಿಳೆಯರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ವಿಳಂಭನೀತಿ ತೋರದೇ ತಕ್ಷಣ ಕಾಮಗಾರಿಯನ್ನು ಆರಂಭಿಸುವವರೆಗೆ ಈ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು. ಸತ್ಯನಾರಾಯಣ ಪೇಟೆಯ ಕೆಳಸೆತುವೆಯಲ್ಲಿ ದಿನನಿತ್ಯ ಪಾದಾಚಾರಿಗಳು, ವಾಹನ ಸವಾರರು ಮಾಲಿನ್ಯದಿಂದ ಕೂಡಿದ ನೀರಿನಲ್ಲೇ ಓಡಾಡುತ್ತ ಜಿಲ್ಲಾಡಳಿತಕ್ಕೆ ಶಾಪ ಹಾಕುತ್ತಿದ್ದಾರೆ. ಇದರ ಮೆಲು ಸೇತುವೆ ಕಾಮಗಾರಿ ಪೂರ್ಣಗೊಳ್ಳದೆ ಹಲವಾರು ವರ್ಷ ಕಳೆದರೂ ವಿಳಂಭ ಮಾಡುತ್ತಿರುವುದು ಕಾರಣ ತಿಳಿದುಬಂದಿಲ್ಲ ಎಂದರು.
ಒಟ್ಟಾರೆ ಈ ಸತ್ಯನಾರಾಯಣ ಪೇಟೆಯ ಹಲವಾರು ಸಮಸ್ಯಗಳನ್ನು ಜನರು ಅನುಭವಿಸುತ್ತಿದ್ದು ಕ್ಷಯರೋಗ, ಅಸ್ಥಮ, ಹಾಗೂ ಇನ್ನಿತರ ಸಾಂಕ್ರಾಮಿಕ ರೋಗಗಳಿಗೆ ಜಿಲ್ಲಾಡಳಿತ ಎಡೆ ಮಾಡಿಕೊಟ್ಟಿದೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯೆಕ್ತ ಪಡಿಸಿದರು.
ಈಗಲಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಯುಜಿಡಿ ಕಾಮಗಾರಿ, ಕೆಳಸೇತುವೆ ಮತ್ತು ಮೇಲು ಸೇತುವೆ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸದಿದ್ದರೆ ಮುಂದಿನ ದಿನ ಉಗ್ರಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕನರ್ಾಟಕ ಜನಸೈನ್ಯದ ಜಿಲ್ಲಾಧ್ಯಕ್ಷ ಅಶೋಕ್ ತಿಳಿಸಿದರು. ಈ ಪ್ರತಿಭಟನೆಯಲ್ಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ಆಗಮಿಸಿ ಸಮಸ್ಯೆಯನ್ನು ಆಲಿಸಿದರು.
ನಂತರ ಸಂಬಂದ ಪಟ್ಟ ಇಲಾಖೆಯ ಎಲ್ಲಾ ಅಧಿಕಾರಿಗಳು, ಗುತ್ತಿಗೆದಾರರು ಧರಣಿಸ್ಥಳಕ್ಕೆ ಭೇಟಿ ನೀಡಿ ಸೂಕ್ತವಾದ ಬರವಸೆಯನ್ನು ನೀಡಿ ಅತೀ ಶೀಗ್ರದಲ್ಲೆ ಈ ಎಲ್ಲಾ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇವೆ ಎಂದರು.
ನಂತರ ಮಾತನಾಡಿದ ಸಂಸ್ಥಾಪಕ, ಅಧ್ಯಕ್ಷ ಯರಿಸ್ವಾಮಿ ಇದನ್ನು ನೀವು ಶೀಗ್ರವಾಗಿ ಬಗೆಹರಿಸದಿದ್ದಲ್ಲಿ ಆಯುಕ್ತರ ಕಛೇರಿಗೆ ಮುತ್ತಿಗೆ ಹಾಕುವ ಪ್ರಕ್ರೀಯೆಗೆ ಚಾಲನೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಉಪಾಧ್ಯಕ್ಷ ಬಿ.ಹೊನ್ನುರಪ್ಪ, ಜಿಲ್ಲಾಧ್ಯಕ್ಷ ಕೆ.ಎನ್.ಅಶೋಕ್ ಕುಮಾರ, ರಾಜ್ಯ ಸಲಹಾ ಸಮಿತಿಯ ಅಧ್ಯಕ್ಷ ಚೆಂಚಯ್ಯ.ಎಂ, ನಗರ ಅಧ್ಯಕ್ಷ ಉಂಡೆಕರ್ ರಮೇಶ, ಬಿ.ಎಸ್.ಪ್ರಭುಕುಮಾರ, ಗಿರಿಶ್, ಗಿರಿ, ವಾಸುದೇವ, ಅಮರನಾಥ, ರಾಕೇಶ್, ಕೇಣಿಬಸವರಾಜ್, ಜಿ.ಶ್ರೀನಿವಾಸ, ಸೇರಿದಂತೆ ಬಡಾವಣೆಯ ಹಿರಿಯ ನಾಗರಿಕರು, ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.