ಬಳ್ಳಾರಿ: ವೇದಾವತಿ ನದಿ ಸೇತುವೆ ನಿಮರ್ಾಣಕ್ಕಾಗಿ ಪ್ರತಿಭಟನಾ ರ್ಯಾಲಿ

ಲೋಕದರ್ಶನ ವರದಿ

ಬಳ್ಳಾರಿ 14: ಬಳ್ಳಾರಿ ತಾಲೂಕಿನಲ್ಲಿರುವ ಬಸರಕೋಡು ಗ್ರಾಮವು ಆಂಧ್ರ-ಕನರ್ಾಟಕ ಗಡಿಭಾಗದಲ್ಲಿದೆ. ಬಸರಕೋಡಿನ ಪಕ್ಕದಲ್ಲಿ ಇರುವ ಗೂಳ್ಯಂ ಗ್ರಾಮವು ಆಂಧ್ರ ಪ್ರದೇಶದ ಕಾನ್ಪುರ್  ಜಿಲ್ಲೆಯಲ್ಲಿ ಇದೆ. ಈ ಗ್ರಾಮಗಳ ಮದ್ಯ ವೇದಾವತಿ ನದಿಯು ಹಾದು ಹೋಗುತ್ತದೆ. ಬಸರಕೋಡಿನಿಂದ ಗೂಳ್ಯಂ ಗ್ರಾಮಕ್ಕೆ ಸಂಚರಿಸುವ ವಾಹನಗಳಾಗಲೀ ಪಾದಾಚಾರಿಗಳಾಗಲೀ, ಈ ನದಿಯ ನೀರಿನಲ್ಲಿ ಒಂದು ಕಿ.ಮೀ ಅಂತರವನ್ನು ಕ್ರಮಿಸಬೇಕಾಗುತ್ತದೆ. 

ನದಿಯು ಉಸುಕಿನಿಂದ ಕೂಡಿರುವುದರಿಂದ, ಹಾದು ಹೋಗುವ ವಾಹನಗಳು ಉಸುಕಿನಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ಕಾಲ್ನಡಿಗೆಯಿಂದ ಹೋಗುವವರಿಗೂ ಉಸುಕಿನಲ್ಲಿ ಕಾಲು ಸಿಕ್ಕಿ ಹಾಕಿಕೊಳ್ಳುವುದರಿಂದ ಈ ಒಂದು ಕಿ.ಮೀ ದಾರಿ ಕ್ರಮಿಸಲು ಹರಸಾಹಸ ಮಾಡಬೇಕಾಗಿದೆ. ವೃದ್ಧರು, ಮಕ್ಕಳು, ಮಹಿಳೆಯರು ಈ ಒಂದು ಕಿ.ಮೀ ದಾರಿ ಕ್ರಮಿಸಲು ಸುಸ್ತಾಗಿ ಹೋಗುತ್ತಾರೆ. ಪ್ರಸ್ತುತ ಎರಡೂ ಭಾಗದ ಜನರು ಈ ದಾರಿಯನ್ನೇ ಅವಲಂಬಿತರಾಗಿದ್ದು, ಬಂಡಿ, ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನಗಳು ಕೂಡ ಉಸುಕಿನಲ್ಲಿ ಸಿಕ್ಕಿಬಿದ್ದು, ಹೊರಬರಲು ಪ್ರಯಾಸಪಟ್ಟು ನದಿ ದಾಟಬೇಕಾಗಿದೆ. ಈ ಎರಡು ಗ್ರಾಮಗಳ ಆಂಧ್ರ-ಕರ್ನಾಟಕದ ಗಡಿ ಭಾಗಗಳಾಗಿರುವುದರಿಂದ ವ್ಯಾಪಾರ-ವಹಿವಾಟು, ಹಾಗೂ ಜನರಲ್ಲಿ ಪರಸ್ಪರ ಕೌಟುಂಬಿಕ ಸಂಬಂಧಗಳಿರುವುದರಿಂದ ದಿನನಿತ್ಯ ನೂರಾರು ಜನ ನದಿಯ ಮುಖಾಂತರವೇ ಸಾಗಬೇಕಾಗಿದೆ. 

ಆಂಧ್ರದ ಕನರ್ೂಲ್ ಜಿಲ್ಲೆಯಿಂದ ಗೂಳ್ಯಂ ಮಾರ್ಗವಾಗಿ ಬಳ್ಳಾರಿಗೆ ಬರುವ ಅನೇಕ ಬಡ ಜನರು ಸರ್ಕಾರಿ  ಆಸ್ಪತ್ರೆ ಹಾಗೂ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಈ ಮಾರ್ಗದಲ್ಲಿಯೇ ಬರಬೇಕಾಗಿದೆ. ಹಾಗೂ ಈ ಎರಡು ಭಾಗಗಳ ಜನತೆಗೆ ಗೂಳ್ಯಂ ಪುಣ್ಯ ಕ್ಷೇತ್ರವಾಗಿರುವುದರಿಂದ ವರ್ಷಕ್ಕೊಮ್ಮೆ ನಡೆಯುವ ಗಾದಿಲಿಂಗಪ್ಪ ತಾತನವರ ಜಾತ್ರಾ ಸಂದರ್ಭದಲ್ಲಿ ಸಾವಿರಾರು ಜನರು ಈ ನದಿಯನ್ನು ದಾಟಿಕೊಂಡು ಹೋಗಬೇಕಾಗುತ್ತದೆ. 

ಆದ್ದರಿಂದ ಈ ನದಿಗೆ ಅಡ್ಡವಾಗಿ ಒಂದು ಸೇತುವೆಯನ್ನು ನಿಮರ್ಾಣ ಮಾಡಬೇಕೆಂದು ಈ ಭಾಗದ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದೆ. ಅನೇಕ ವರ್ಷಗಳ ಹಿಂದೆ ಈ ಸೇತುವೆ ನಿರ್ಮಾಣಕ್ಕೆ ಯೋಜನೆ ಮಾಡಿದ್ದರೂ ಅದು ನೆನೆಗುದಿಗೆ ಬಿದ್ದಿದೆ. ಈ ಯೋಜನೆಯನ್ನು ಜಾರಿಗೊಳಿಸಿ ವೇದಾವತಿ (ಹಗರಿ) ನದಿಗೆ ಶಾಶ್ವತ ಸೇತುವೆಯನ್ನು ನಿರ್ಮಾಣ  ಮಾಡುವುದರ ಮೂಲಕ ಈ ಸಮಸ್ಯೆಗೆ ಅಂತ್ಯ ಹಾಡಬೇಕೆಂದು ಈ ಭಾಗದ ಜನರ ಬೇಡಿಕೆಯಾಗಿದೆ. 

ಶಾಶ್ವತ ಸೇತುವೆ ನಿರ್ಮಾಣವಾಗುವವರೆಗೆ ತಾತ್ಕಾಲಿಕ ರಸ್ತೆ ಮಾಡುವುದರಿಂದ ಇಡೀ ಬಳ್ಳಾರಿ, ಕಂಪ್ಲಿ, ಸಿರುಗುಪ್ಪ, ಕುರುಗೋಡು ತಾಲೂಕುಗಳ ಲಕ್ಷಾಂತರ ಜನರಿಗೆ ಉಪಯೋಗವಾಗುತ್ತದೆ ಹಾಗೂ ಗಡಿಭಾಗದ ಆಂಧ್ರ ಪ್ರದೇಶದ ಹಳ್ಳಿಗಳ ಜನತೆಗೆ ಅನುಕೂಲವಾಗುತ್ತದೆ. ಆದ್ದರಿಂದ ಜಿಲ್ಲಾಡಳಿತ ಈ ಗಡಿಭಾಗದ ಜನತೆಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು. ಮತ್ತು ಈ ಸೇತುವೆ ನಿರ್ಮಿಸಲು  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೆ ಅಗತ್ಯ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಈ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆದುಕೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು. ಈ ಸಭೆಯನ್ನು ಸಂಚಾಲಕರಾದ ಈ. ಹನುಮಂತಪ್ಪ ವಹಿಸಿದ್ದರು. 

ಪ್ರತಿಭಟನಾ ರ್ಯಾಲಿಯ ನೇತೃತ್ವವನ್ನು ಶಂಭುಲಿಂಗ ಸಾಮಿಗಳು ಜೆ.ಹೊಸಳ್ಳಿ, ಶಿವಪ್ಪ ಪೂಜಾರಿ, ದೊಡ್ಡಬಸಪ್ಪ, ಗಾದಿಲಿಂಗಪ್ಪ, ಎರ್ರೆಪ್ಪ, ಬುಡ್ಡಪ್ಪ, ಕೆ.ಸಿದ್ದಪ್ಪ, ಮೇಟಿಮಲ್ಲಿಕಾರ್ಜುನ, ಮೋಕ ಫಕ್ರುದ್ದೀನ್, ರಾಘವೇಂದ್ರ, ಕಪಿಲ್ ಮುನಿಸ್ವಾಮಿ, ಶೇಖರ ಗೌಡ ಮುಂತಾದವರು ಪಾಲ್ಗೊಂಡಿದ್ದರು. ಮನವಿ ಸ್ವೀಕರಿಸಿದ ತಹಸಿಲ್ದಾರರಾದ ಮೆಹತಾ, ಜಿಲ್ಲಾಧಿಗಳೊಂದಿಗೆ ಕೂಡಲೆ ಸಭೆಯನ್ನು ಕರೆಯುವುದಾಗಿ ಭರವಸೆ ನೀಡಿದರು.