ಬಳ್ಳಾರಿ: ಪ್ಲಾಸ್ಟಿಕ್ ಮುಕ್ತ ಜಿಲ್ಲೆ: ಅಂಗಡಿಗಳ ಮೇಲೆ ದಾಳಿ

ಲೋಕದರ್ಶನ ವರದಿ

ಬಳ್ಳಾರಿ 22: ನಗರದಲ್ಲಿನ ಪರಿಸರ ಸಂರಕ್ಷಣೆಗೆ ಮಾರಕವಾದ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟದ ವಿರುದ್ದ ನಗರ ಪಾಲಿಕೆ ಆಯುಕ್ತರು ಮತ್ತು ಅಧಿಕಾರಿಗಳು ಮತ್ತೆ ದಾಳಿ ನಡೆಸಿದ್ದಾರೆ. ಪಾಲಿಕೆಗೆ ಹೊಸದಾಗಿ ಆಯುಕ್ತರಾಗಿ ಬಂದ ದಿನದಲ್ಲಿ ನಗರದ ಕೈಗಾರಿಕಾ ಪ್ರದೇಶದಲ್ಲಿನ ಪ್ಲಾಸ್ಟಿಕ್ ಚೀಲಗಳನ್ನು ಉತ್ಪಾದಿಸುವ ಘಟಕ ಮತ್ತು ಕೆಲ ಅಂಗಡಿ, ಮನೆಗಳ ಮೇಲೆ ದಾಳಿ ಮಾಡಿ ಪ್ಲಾಸ್ಟಿಕ್ ಸಾಮಗ್ರಿಗಳ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ಕ್ರಮ ಕೈಗೊಂಡ ಮಹಾನಗರ ಪಾಲಿಕೆಯ ಆಯುಕ್ತೆ ತುಷರಮಣಿ ನಂತರ ಸುಮ್ಮನಾಗಿದ್ದರು. 

ಆದರೆ ಬುಧವಾರ ಮತ್ತೆ ನಗರದ ಜುಮ್ಮಾ ಮಸೀದಿ ಬೀದಿಯಲ್ಲಿನ ಪ್ಲಾಸ್ಟಿಕ್ ಚೀಲ, ಕಪ್ಪು, ತಟ್ಟೆ, ಹಾಳೆ ಮೊದಲಾದ ಪ್ಲಾಸ್ಟಿಕ್ ಸಾಮಗ್ರಿಗಳ ಮಾರಾಟ ಮಾಡುವ ಅಂಗಡಿಗಳ ಮೇಲೆ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. 

ನಗರ ಪಾಲಿಕೆ ಆಯುಕ್ತರಾಗಿ ಬಂದ ಬಹುತೇಕ ಅಧಿಕಾರಿಗಳು ತಮ್ಮ ಹೊಸದಲ್ಲಿ ಈ ರೀತಿ ದಾಳಿ ಮಾಡುವುದು ಸಹಜ ನಂತರ ಸುಮ್ಮನಾಗಿ ಬಿಡುತ್ತಾರೆ. ಅದರಂತೆ ಇವರು ಸಹ ಆಗೆ ಮಾಡುತ್ತಾರೆಂದು ತಿಳಿದುಕೊಂಡಿದ್ದ ಅಂಗಡಿ ಮಾಲಿಕರು ಸುಮ್ಮನೆ ವ್ಯಾಪಾರ ಮಾಡುತ್ತಿದ್ದರು. ಆದರೆ ಪಾಲಿಕೆಯ ಆಯುಕ್ತೆ ತುಷರಮಣಿ ಅವರು ಪಾಸ್ಟಿಕ್ ಮುಕ್ತ ಬಳ್ಳಾರಯನ್ನಾಗಿ ಮಾಡಲು ಪನತೊಟ್ಟಿದ್ದು ಯಾವಾಗ ಬೇಕಾದರೂ ದಾಳಿ ಮಾಡಬಹುದು ಎಂದು ಸಮಯ ಬಿಟ್ಟು ಸಮಯದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. 

ಈ ರೀತಿ ವ್ಯಾಪಾರ ಮಾಡುವ ಮಾರಾಟಗಾರರಿಗೆ ಕಾನೂನು ರೀತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿದಿಸಿ ಜೈಲಿಗೆ ಕಳುಹಿಸುವಂತೆ ದೂರುಗಳನ್ನು ದಾಖಲಿಸಿರುವುದು ಉದ್ದೇಮೆ ವ್ಯಾಪಾರಕ್ಕೆ ನೀಡಿದ ಪರವಾಣಗಿ ರದ್ದು ಮಾಡುವ ಕಾರ್ಯ ಆಗಬೇಕೆಂದು ಅವರು ಇಂತಹ ದಾಳಿಗಳನ್ನು ಮೇಲಿಂದ ಮೇಲೆ ಸಮಯ ಬಿಟ್ಟು ಸಮಯದಲ್ಲಿ ದಾಳಿ ನಡೆಸಿದ್ದಾರೆ. ಹಲವಾರು ಅಂಗಡಿಗಳ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.