ಲೋಕದರ್ಶನ ವರದಿ
ಬಳ್ಳಾರಿ 11: ಆರೋಗ್ಯ ಸಮಸ್ಯೆಗಳನ್ನು ಪತ್ತೆ ಹಚ್ಚಿ ಸಮಸ್ಯೆಗಳಿಗೆ ಪರಿಹಾರ ಕ್ರಮಗಳನ್ನು ಅನುಷ್ಠಾನಗೊಳಿಸುವ ಕ್ರಮದಲ್ಲಿ ಗರ್ಭಿಣಿ ಆರೈಕೆ ಮತ್ತು ಸುರಕ್ಷಿತ ತಾಯ್ತನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಹಮ್ಮದ್ ರಫಿ ಪಿ.ಜಿ.ಡಿ.ಹೆಚ್.ಪಿ.ಇ ವಿದ್ಯಾಥರ್ಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಬೆಂಗಳೂರು ನೆಡೆಸಿ ಕೊಟ್ಟರು.
ಜಿಲ್ಲೆಯ ಗುಡುದೂರು ಗ್ರಾಮದಲ್ಲಿ ಇವರು ಕಳೆದ ಒಂದುವರೆ ತಿಂಗಳಿಂದ ಕೈಗೊಂಡ ಮನೆ ಮನೆ ಸಮೀಕ್ಷೆಯ ವೇಳೆಯಲ್ಲಿ ಕಂಡುಬಂದ ಮನೆ ಹೆರಿಗೆ ಮತ್ತು ಗಭರ್ಿಣಿ ಆರೈಕೆಯ ಸಮಸ್ಯೆಯ ಬಗ್ಗೆ ಕಂಡುಬಂದಿತು.
ಈ ಸಮಸ್ಯೆಯ ಬಗ್ಗೆ ಜಾಗೃತಿ ಜಾಥ ಮತ್ತು ಹಾಗೂ ಮನೆ ಮನೆ ಶೌಚ್ಚಾಲಯದ ಬಗ್ಗೆ ಗ್ರಾಮದ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ, ಬೆಂಗಳೂರು ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ಬಳ್ಳಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಕೊರ್ಲಗುಂದಿ, ಗ್ರಾಮ ಪಂಚಾಯತಿ ಹಂದಿಹಾಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡುದೂರು, ಇವರ ಸಂಯುಕ್ತಾಶ್ರಯದಲ್ಲಿ ಗುಡುದೂರು ಗ್ರಾಮದ ಶಾಲಾ ಆವರಣದಲ್ಲಿ ಹಮ್ಮಿಕೊಂಡರು.
ಜಾಗೃತಿ ಜಾಥ:
ಜಾಗೃತಿ ಜಾಥಕ್ಕೆ ಗುಡುದೂರು ಗ್ರಾಮದ ಸಕರ್ಾರಿ ಸಾಲೆಯ ಮುಖ್ಯ ಉಪಾಧ್ಯಾಯರಾದ ಏಚ್. ಶಾಂತಮ್ಮ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಜಾಥಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಗರ್ಭಿಣಿ ಆರೈಕೆ ಮತ್ತು ಶೌಚಾಲಯ ಬಳಕೆಯ ಜಾಗೃತಿ ಜಾಥವನ್ನು ಶಾಲೆಯಿಂದ ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಶೀಮತಿ: ಶಾಂತಮ್ಮ ಅಧ್ಯಕ್ಷರು, ಗ್ರಾ.ಪಂ ಹಂದಿಹಾಳು. ಪ್ರಭಾವತಿ, ಉಪಾಧ್ಯಕ್ಷರು, ಗ್ರಾ.ಪಂ ಹಂದಿಹಾಳು. ಸದಸ್ಯ ಸೋಮಶೇಕರ ರೆಡ್ಡಿ, ಜಿ.ರಾಘವೇಂದ್ರ ರೆಡ್ಡಿ, ವಿ.ಶ್ರೀನಿವಾಸ್, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಈಶ್ವರ್ ದಾಸಪ್ಪನವರ್, ಪಿ.ಡಿ.ಓ,ಪರವಾಗಿ ಮಲ್ಲಿಕಾರ್ಜುನ ಗ್ರಾ.ಪಂ.ಕಾರ್ಯದರ್ಶಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಶಾಂತಮ್ಮ ಹೆಚ್, ಪಿ.ಜಿ.ಡಿ.ಹೆಚ್.ಪಿ.ಇ. ಯ ಎಸ್.ಎಫ್.ಟಿ ಮಾರ್ಗದರ್ಶಕ ಶಿವಪ್ಪ.ಕೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ತೋರಣಗಲ್ಲು, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಸಿಬ್ಬಂದಿ. ಪ್ರಾನ್ಸಿಸ್. ಕಿರಿಯ ಆರೋಗ್ಯ ಸಹಾಯಕರಾದ ನೀಲಕಂಠಪ್ಪ, ಸುವರ್ಣ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿ, ಮರಿಯಮ್ಮ, ಆಶಾ ಕಾರ್ಯಕರ್ತೆಯರಾದ ನಾಗರತ್ನ ಮತ್ತು ವಿರುಪಾಕ್ಷಿ ಹಿರಿಯ ಆರೋಗ್ಯ ಸಹಾಯಕ ನಿರುಪಣೆಗಾರರಾಗಿ ಭಾಗವಹಿಸಿದ್ದರು.