ಬಳ್ಳಾರಿ: ಪಿ.ಯು ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯವಿಲ್ಲ: ಕೆ.ತಿಮ್ಮಪ್ಪ

ಬಳ್ಳಾರಿ 19: ಪಿ.ಯು ಕಾಲೇಜುಗಳಲ್ಲಿ ಈ ಇಂದಿನಿಂದ ಸಮವಸ್ತ್ರ ಪದ್ದತಿಯನ್ನು ಅನುಸರಿಸಿಕೊಂಡು ಬಂದಿತ್ತು. ಆದರೆ ಶಿಕ್ಷಣ ಇಲಾಖೆ ಸಮವಸ್ತ್ರ ಕಡ್ಡಾಯವಿಲ್ಲ ಎಂದು ಹೇಳಿದೆ. ನಗರದ ಸರಕಾರಿ ಪದವಿಪೂರ್ವ ಕಾಲೇಜುಗಳು ಸೇರಿದಂತೆ ಅನುದಾನಿತ ಖಾಸಗಿ ಮತ್ತು ಅನುದಾನರಹಿತ ಖಾಸಗಿ ಕಾಲೇಜುಗಳಿಗೂ ಸಹ ಸಮವಸ್ತ್ರವನ್ನು ಕಡ್ಡಾಯವಾಗಿ ಮಾಡಿದೆ. ಸಮವಸ್ತ್ರ ಇದ್ದರೇ ಒಂದು ರೀತಿಯ ಶಿಸ್ತಿಗೆ ಸಹಕಾರಿಯಾಗುತ್ತದೆ ಎಂಬ ವಾದ ಉಪನ್ಯಾಷಕರದ್ದು. ಸಮವಸ್ತ್ರ ಇಲ್ಲದಿದ್ದರೇ ವಸ್ತ್ರ ತೊಡುವುದರಲ್ಲಿ ಮಕ್ಕಳು ಶ್ರೀಮಂತ, ಬಡವ ಎನ್ನುವ ಪ್ರತಿನಿದಿಸಲು ನೆರವಾಗುತ್ತದೆ. ಅದಕ್ಕಾಗಿ ಸಮವಸ್ತ್ರ ಬೇಕೆಂಬ ಮಾತೇ ಹೆಚ್ಚಾಗಿದೆ. 

ಆದರೆ ಸರಕಾರ ಮಾತ್ರ ಸಮವಸ್ತ್ರ ಕಡ್ಡಾಯವಿಲ್ಲ ಎಂದು ಹೇಳುತ್ತಿದೆ. ಕಡ್ಡಾಯವಲ್ಲ ಅನ್ನುವ ಬದಲಿಗೆ ಸಮವಸ್ತ್ರ ಬೇಕಿಲ್ಲ ಎಂದು ಹೇಳುತ್ತಿಲ್ಲ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಕಾಲೇಜುಗಳು ಬಣ್ಣ-ಬಣ್ಣದ ವಿವಿದ ಶೈಲಿಯ ಸಮವಸ್ತ್ರಗಳನ್ನು ನಿಗದಿಪಡಿಸಿ ಸ್ವತಹ ತಾವೇ ಇಲ್ಲವೇ ನಿಗದಿತ ಶೋರುಂಗಳಲ್ಲಿ ಖರೀದಿಗೆ ಸೂಚಿಸುತ್ತಿರುವುದನ್ನು ಕಮಿಷನ್ ದಂದೆಗೆ ಮತ್ತೊಂದು ಮುಖವಾಡವಾಗಿದೆ. ಮಕ್ಕಳಲ್ಲಿ ಸಮಾನತೆ ಕಾಣಲು ಸಮವಸ್ತ್ರ ಬೇಕೆನ್ನುವ ವಾದಕ್ಕೆ ಸರಕಾರಿ ಕಾಲೇಜುಗಳಂತೆ ಬಿಳಿ, ಖಾಕಿ ಸೇರಿದಂತೆ ಪ್ಲೇನ್ ಕಲರ್ನಲ್ಲಿ ಅಂದರೆ ಒಂದೇ ಬಣ್ಣದ ಅಂಗಿ, ಪ್ಯಾಂಟ್ ನಿಗದಿಪಡಿಸಿದ್ದರೆ ತಮಗೆ ಇಷ್ಟ ಬಂದಲ್ಲಿ ಖರೀದಿಸಿಕೊಂಡು ಹೋಗಬಹುದು. 

ಆದರೆ ಖಾಸಗಿ ಕಾಲೇಜಿನವರು ವಿವಿದ ಬಣ್ಣದ ಗೆರೆಸ್ವರೂಪ ಸಮವಸ್ತ್ರ ಮಾಡಿ ಆ ವಸ್ತ್ರಗಳು ಬೇರೆಕಡೆ ಸಿಗದೇ ತಮ್ಮಲ್ಲೇ ಬಂದು ಖರೀದಿಸುವ ಪದ್ದತಿಯೂ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಲು ಸರಕಾರ ಈ ನಿಯಮವನ್ನು ಸಡಿಲಗೊಳಿಸಿದೆ. ಬೇಕು-ಬೇಡ ಎನ್ನುವ ಸಂಸೆಯವನ್ನು ವಿದ್ಯಾಥರ್ಿಗಳಲ್ಲಿ ಮೂಡಿಸಿದೆ. ಒಂದು ನಿರ್ದಿಷ್ಟವಾದ ನಿಯಮವನ್ನು ಜಾರಿಗೆ ತಂದಿಲ್ಲಿ ಎಲ್ಲಾ ಕಾಲೇಜಿನ ವಿದ್ಯಾರ್ಥಿಗಳಲ್ಲೂ  ಬೇಕು, ಬೇಡ ಎನ್ನುವ ಪದಕ್ಕೆ ಒಂದು ಇತಿಶ್ರೀ ಹಾಡಿದ ಆಗೆ ಆಗುತ್ತದೆ. ಈಗ ಕಾಲೇಜುಗಳು ಪ್ರಾರಂಭವಾಗುವ ದಿನಗಳಾದ್ದರಿಂದ ವಿದ್ಯಾರ್ಥಿಗಳ ಪೋಷಕರಿಗೆ ಬೇಕು, ಬೇಡ ಎನ್ನುವ ಸ್ಥಿತಿ ಉಂಟಾಗಿದೆ ಎಂದು ಹಲವು ಕಾಲೇಜಿ ಪೋಷಕರು ತಮ್ಮ ಅಳಲನ್ನು ತೋಡಿಕೊಂಡರು. 

ಈ ಕುರಿತು ಬಳ್ಳಾರಿ ಪಿಯು ಉಪನಿಧರ್ೇಶಕ ಮಂಡಳಿಯ ಕೆ.ತಿಮ್ಮಪ್ಪ ಅವರನ್ನು ದೂರವಾಣಿಯ ಮುಖಾಂತರ ಮಾತನಾಡಿ ಸಮವಸ್ತ್ರ ಕಡ್ಡಾಯ ಮಾಡುವಂತಿಲ್ಲ. ಮತ್ತು ನೀಟ್ ಮತ್ತು ಸಿಇಟಿ ಕೋಚಿಂಗ್ ಎಂದು ವಿಶೇಷ ಶುಲ್ಕ ಪಡೆಯುವಂತಿಲ್ಲ ಎಂದು ಎಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರ ಸಭೆ ಕರೆದು ಕಠಿಣವಾದ ಎಚ್ಚರಿಕೆ ನೀಡಿದೆ. ಇದನ್ನು ಉಲ್ಲಂಘಿಸಿ ಕೋಚಿಂಗ್ ಗೆ ಹೆಚ್ಚಿನ ಶುಲ್ಕ ಕೇಳಿದರೇ ವಿದ್ಯಾಥರ್ಿಗಳು ಇಲ್ಲ ಪೋಷಕರು ದೂರು ನೀಡಿದರೆ ಅಂತಹ ಕಾಲೇಜುಗಳ ವಿರುದ್ದ ಕಠಿಣಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.