ಬಳ್ಳಾರಿ: ಅಕ್ರಮ ನೇಮಕಾತಿ ವಿದ್ಯಾರ್ಥಿಗಳಿಂದ ಆಕ್ರೋಶ

ಲೋಕದರ್ಶನ ವರದಿ

ಬಳ್ಳಾರಿ 03: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಎ.ಬಿ.ವಿ.ಪಿ. ಹಲವಾರು ದಿನಗಳಿಂದ ಹೋರಾಟ ನಡೆಯುತ್ತಿದೆ. ಇಂದು ಹಾಲಿ ಮತ್ತು ಮಾಜಿ ಸಿಂಡಿಕೇಟ್ ಸದಸ್ಯರು ಮತ್ತು ಹೋರಾಟಗಾರರ ನಿಯೋಗವು ಬಳ್ಳಾರಿ ನಗರದ ಮಾನ್ಯ ಶಾಸಕ ಜಿ.ಸೋಮಶೇಖರ ರೆಡ್ಡಿ ರವರನ್ನು ಭೇಟಿ ಮಾಡಿ, ನೇಮಕಾತಿಯಲ್ಲಿನ ನಿಯಮಗಳ ಉಲ್ಲಂಘನೆ ಮತ್ತು ಕುಲಪತಿಗಳ ವರ್ತನೆ, ಏಕಪಕ್ಷೀಯನಿರ್ಧಾರಗಳ ಕುರಿತಂತೆ ಮಾನ್ಯ ಶಾಸಕರ ಗಮನಕ್ಕೆ ತರಲಾಯಿತು. 

ಈ ಕುರಿತಂತೆ ಮಾತನಾಡಿದ ಮಾನ್ಯ ಶಾಸಕರು ಕುಲಪತಿಗಳ ನಡೆ, ಒಟ್ಟಾರೆ ಬೆಳವಣಿಗೆಗಳನ್ನು ಗಮನಿಸುತ್ತಿದ್ದು, ಕುಲಪತಿಗಳು ತಕ್ಷಣ ಬೋಧಕ ನೇಮಕಾತಿಯನ್ನು ಹಿಂಪಡೆಯಬೇಕು ಹಾಗೂ ಬೋಧಕೇತರ ನೇಮಕಾತಿಯ ಪ್ರಕ್ರಿಯೆಯನ್ನು ರದ್ದಗೊಳಿಸಿ ಪರೀಕ್ಷೆಯನ್ನು ಮುಂದೂಡಬೇಕಾಗಿ ಆಗ್ರಹಿಸುತ್ತೇವೆ. ಮಾಧ್ಯಮಗಳಲ್ಲಿ ಸಾರ್ವಜನಿಕರಲ್ಲಿ ನೇಮಕಾತಿ ಕುರಿತು ಗೊಂದಗಳಿರುವಾಗ ತಮ್ಮ ಅವಧಿಯಲ್ಲಿಯೇ ನೇಮಕಾತಿ ಮುಗಿಸಬೇಕೆನ್ನುವ ನಿರ್ಣಯಗಳನ್ನು ಏಕಪಕ್ಷೀಯ ನಿರ್ಧಾರಗಳು  ಸರಿಯಲ್ಲ. ಕುಲಪತಿಗಳು ವಿ.ವಿ.ಯನ್ನು ತನ್ನ ಸ್ವತ್ತಿನಂತೆ ಅಧಿಕಾರ ಚಲಾಯಿಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಘನವೆತ್ತ ರಾಜ್ಯಪಾಲರ ಗಮನಕ್ಕೆ ತಂದು ನೇಮಕಾತಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸುತ್ತೇನೆಂದು ಬಳ್ಳಾರಿ ನಗರ ವಿಧಾನಸಭಾ ಶಾಸಕರಾದ ಸೋಮಶೇಖರೆಡ್ಡಿ ರವರು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಸಿಂಡಿಕೇಟ್ ಸದಸ್ಯರುಗಳಾದ ಪ್ರೊ. ಬಿ.ದೊಡ್ಡಬಸವನಗೌಡ, ಮಾಜಿ ಸಿಂಡಿಕೇಟ್ ಸದಸ್ಯರಾದ ಕೆ.ಆರ್. ವಿಜಯಲಕ್ಷ್ಮಿ, ಕೆ.ಹೆಚ್.ಹರಿಕುಮಾರ್, ಹೋರಾಟಗಾರರಾದ  ಮಲ್ಲಿಕಾರ್ಜುನ, ಕೆ.ಆರ್. ಮಲ್ಲೇಶ್ ಕುಮಾರ್, ಅಡವಿಸ್ವಾಮಿ, ಯುವರಾಜ, ಕೌಶಿಕ್, ರುದ್ರಪ್ಪ, ಪ್ರಭುದೇವ ಉಪಸ್ಥಿತರಿದ್ದರು.