ಲೋಕದರ್ಶನ ವರದಿ
ಬಳ್ಳಾರಿ 28: ರಾಜ್ಯದಲ್ಲಿ ಆನ್ಲೈನ್ ಪ್ರಕ್ರಿಯೆ ಮಾರಾಡ ಜೋರಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಿ ವ್ಯಾಪಾರಿಗಳ ನಿಗಮ ಸ್ಥಾಪಿಸಬೇಕು ದೇಶಾದ್ಯಂತ ಒಂದು ದೇಶ ಒಂದು ಬೆಲೆ ಕನೂನುನ್ನು ಜಾರಿಗೆ ತರಬೇಕು ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಬೃಹತ್ ಪ್ರತಿಭಟನೆಯನ್ನು ವಿತರಕರು ನಡೆಸಿದರು. ಮೀನಾಕ್ಷಿ ವೃತ್ತದಿಂದ ಆರಂಭವಾದ ಪ್ರತಿಭಟನೆ ನಗರದ ಪ್ರಮುಖ ಬೀದಿಗಳ ಮೂಲಕ ಒಂದು ದೇಶ ಒಂದು ಬೆಲೆ ಎಂಬ ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿಗಳ ಕಛೇರಿಗೆ ತರಳಿದರು. ನಂತರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಮನವಿ ಪತ್ರದಲ್ಲಿ ತಿಳಿಸಿರುವಂತೆ ದೇಶಾದ್ಯಂದ ಆನ್ಲೈನ್ ಮೂಲಕ ವ್ಯವಹಾರ ನೆಡೆತ್ತಿದ್ದು, ಇಲ್ಲಿಯ ವರ್ತಕರು ಸಂಕಷ್ಟಕ್ಕೆ ಸಿಲುಕಿಕೊಂಡ್ಡಿದ್ದೇವೆ. ಸುಮಾರು 500ಕ್ಕೂ ಹೆಚ್ಚು ವಿತರಕರ ಬದುಕು ಬೀದಿಗೆ ಬಂದಿದೆ ಆನ್ಲೈನ್ ಮೂಲಕ ವ್ಯವಹಾರ ಮಾಡುವುದರಿಂದ ಸಕರ್ಾರಕ್ಕೆ ತೆರಗೆ ವಂಚನೆ ಆಗುತ್ತಿದೆ, ಏಕಸ್ವಾಮ್ಯ ವ್ಯಾಪಾರ ಮಾಡುವ ಹುನ್ನಾರು ನಡೆದಿದೆ. ವಿತರಕ ಬಳಿ ಕೆಲಸ ಮಾಡುವ ಯುವಕರು ನಿರೋದ್ಯಗ ಸಮಸ್ಯೆಗೆ ಒಳಗಾಗಿದ್ದಾರೆ. ಬಹಳಷ್ಟು ಗ್ರಾಹಕರು ಆನ್ಲೈನ್ನಿಂದ ಮೋಸ ಹೋಗಿದ್ದಾರೆ.
ನಾವು ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ನೀಡಿದರೂ ಸಾಕಷ್ಟು ಗ್ರಾಹಕರು ಆನ್ಲೈನ್ ಮೂಲಕ ವಸ್ತುಗಳನ್ನು ತರಿಸಿ ಮೋಸ ಹೋಗಿದ್ದಾರದೆ. ಇದನ್ನು ಜನ ಅರ್ಥಮಾಡಿಕೊಳ್ಳದೇ ಕಾರಣ ಆಣ್ಲೈನ್ ದಂಧೆ ದೊಡ್ಡ ಮಟ್ಟದ ದಂಧೆಯಾಗಿ ಹೋಗಿದೆ ಕಾರಣ ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸಕರ್ಾರಗಳು ತಕ್ಷಣ ಕಡಿವಾಣ ಹಾಕಬೇಕಾಗಿದೆ ಎಂದು ಮನವಿ ಪತ್ರದಲ್ಲಿ ವಿವರಿಸಿದ್ದಾರೆ.
ಅಂತೆಯೇ ನಗರದಲ್ಲಿ ವಿತರಕರು ಸ್ವಯಂಪ್ರೇರಿತ ಬಂದ್ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇವರಿಗೆ ಹಲವಾರು ಬೇರೆ ಬೇರೆ ಬಗೆಯ ಹಂಚಿಕೆಯ ವಿತರಕರು ಸಹಕಾರ ನೀಡಿದ್ದು ಕಂಡು ಬಂದು.