ಬಳ್ಳಾರಿ 01: ರೈತರಿಗೆ ಸಹಕಾರಿಯಾಗುವಂತೆ ಜಾರಿಗೆ ತಂದಿದ್ದ 2014ರ ಭೂಸ್ವಾದಿನ ಖಾಯ್ದೆಯನ್ನು ತಿದ್ದುಪಡಿ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲು ಹೊರಟಿರುವ ಮೈತ್ರಿ ಸರಕಾರದ ವಿರುದ್ದ ಈ ತಿಂಗಳ 10 ರಂದು ತುಂಗಭದ್ರ ಜಲಾಶಯದ ಬಳಿ ರಾಷ್ಟ್ರೀಯ ಹೆದ್ದಾರಿ 13ನ್ನು ಬಂದ್ ಬೆಳಿಗ್ಗೆ 10ರಿಂದ ಸಂಜೆ 6 ರವರೆಗೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ರಾಜ್ಯ ರೈತಸಂಘ ಕೊಡಿಹಳ್ಳಿ ಚಂದ್ರಶೇಖರರ ಬಣದ ಜಿಲ್ಲಾಧ್ಯಕ್ಷ ಜೆ.ಕಾತರ್ಿಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಈ ಮೊದಲಿದ್ದ ಖಾಯ್ದೆ ಅಡಿ ರೈತರ ಅನುಮತಿ ಪಡೆದು ಮತ್ತು ಮಾರುಕಟ್ಟೆಯ ನಾಲ್ಕೂಪಟ್ಟು ಬೆಲೆ ನೀಡಿ ಕೈಗಾರಿಕೆಗಳಿಗೆ ವಶಪಡಿಸಿಕೊಳ್ಳಬೇಕಿತ್ತು. ಆದರೆ ಖಾಯ್ದೆ ತಿದ್ದುಪಡಿಯಿಂದ ಈಗ ರೈತರಿಗೆ ಸಂಕಷ್ಟ ತರಲಿದೆ. ಅದಕ್ಕಾಗಿ ಅದನ್ನು ಕೈಬಿಡಬೇಕು. ತುಂಗಭದ್ರ ಬಲದಂಡೆ ಕೆಲ ಮಟ್ಟದ (ಎಲ್.ಎಲ್.ಸಿ) ಕಾಲುವೆಯನ್ನು ಮೂರರಿಂದ ನಾಲ್ಕು ಅಡಿ ಹಗಲಿಕರಣ ಮಾಡಿ ಲೈನಿಂಗ್ ಮಾಡಲಾಗುತ್ತಿದೆ. ಇದರಿಂದ ನಮ್ಮ ಭಾಗದ ಜಮಿನುಗಳ ಡಿಸ್ಟಿಬ್ಯೂಟರ್ಗಳಿಗೆ ಅಗತ್ಯ ನೀರು ಹರಿಯುವುದು ಕಡಿಮೆಯಾಗುತ್ತಿದೆ. ಅದಕ್ಕಾಗಿ ಪ್ರತೀ ಡಿಸ್ಟಿಬ್ಯೂಟರ್ ಬಳಿ ಬೆಡ್ಕಾಂಕ್ರಿಟ್ ಹಾಕಿ ಕಾಲುವೆಗಳಿಗೆ ನಿಗದಿನ ನೀರು ಹರಿಯುವಂತೆ ಮಾಡಬೇಕು. ಅಲ್ಲದೇ ಈಗಾಗಲೇ ಸುದ್ದಿಯಲ್ಲಿರುವ ಜಿಂದಾಲ್ ಉಕ್ಕು ಕಾಖರ್ಾನೆ ಸ್ಥಾಪಿಸಲು ನೀಡಿರುವ ಜಮೀನನ್ನು ಸರಕಾರ ಲೀಜ್ನಲ್ಲಿ ಮುಂದುವರೆಸಬೇಕೆ ಹೊರತು ಮಾರಾಟ ಮಾಡಬಾರದೆಂದರು.
ದೇಶದಲ್ಲಿ ಅತೀ ಹೆಚ್ಚು ಬರಗಾಲ ಎದುರಿಸುತ್ತಿರುವ ಎರಡನೇ ರಾಜ್ಯ ಕನರ್ಾಟಕವಾಗಿದೆ. ಇಲ್ಲಿ ನೀರಿಗಾಗಿ ಆಹಾಕಾರವಿದ್ದು ಈಗಾಗಲೇ ಶೇ.30ರಷ್ಟು ಜನ ಗುಳೆಹೋಗಿದ್ದಾರೆ. ಹೀಗೆ ಮುಂದುವರೆದರೆ ಶೇ.80ರಷ್ಟು ಜನ ಗುಳೆ ಹೋಗುವುದು ಖಚಿತ ಎಂದರು. ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ಮುಂದಾಗುವ ಪರಿಸ್ಥಿತಿಯನ್ನು ಹತೊಟಿಗೆ ತರಬಹುದು ಎಂದರು.
ಆದರೆ ಸರಕಾರ ಎಚ್ಚೆತ್ತುಕೊಂಡಿಲ್ಲ. ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ಜೂನ್ 10ರಂದು ರಾಷ್ಟ್ರೀಯ ಹೆದ್ದಾರೆ ಬಂದ್ ಮಾಡಿ ಉಗ್ರಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಸುದ್ದಿಗೋಷ್ಟಿಯಲ್ಲಿ ಕಾಸಿಮ್ ಸಾಬ್, ದೇವಿರೆಡ್ಡಿ, ಟಿ.ನಾರಾಯಣರೆಡ್ಡಿ, ಜಡಿಯಪ್ಪ, ಡಿ.ವಿ ಗೌಡ, ಎಲ್.ಎಸ್.ಉಗ್ರಪ್ಪ, ಕಾಗೆ ಈರಣ್ಣ, ಚಂದ್ರಪ್ಪ, ಸುರೇಶ, ನಾಗೇಶ, ಮಂಜುನಾಥ, ಚಂದ್ರಪ್ಪ ಸೇರಿದಂತೆ ಇನ್ನೂ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.