ಲೋಕದರ್ಶನ ವರದಿ
ಬಳ್ಳಾರಿ 14: ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ನ ಹಿಟ್ ಅಂಡ್ ರನ್ ಪ್ರಕರಣದಲ್ಲಿ ದಕ್ಷತೆ ಮೆರೆದಿದ್ದ ಪೊಲೀಸರು ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಸಚಿವ ಆರ್.ಅಶೋಕ್ ಮಗ ವರುಣ್ನನ್ನು ರಕ್ಷಿಸಲು ಮುಂದಾಗುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ, ಮಾಧ್ಯಮ ಸಂಯೋಜಕ ವೆಂಕಟೇಶ್ ಹೆಗಡೆ ಆರೋಪಿಸಿದ್ದಾರೆ.
ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ಕಳೆದ ಫೆ.10 ರಂದು ರಸ್ತೆ ಅಪಘಾತವಾಗಿದ್ದು, ಸ್ಥಳೀಯ ಪಾದಚಾರಿ ರವಿನಾಯ್ಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದ ಸಚಿನ್ ಎಂಬ ಯುವಕ ಸಹ ಮೃತಪಟ್ಟಿದ್ದಾನೆ. ಆದರೆ, ಕಾರಿನಲ್ಲಿದ್ದ ಐವರ ಪೈಕಿ ಸಚಿವ ಆರ್.ಅಶೋಕ್ ಪುತ್ರ ವರುಣ್ ಸಹ ಇದ್ದನು ಎನ್ನಲಾಗುತ್ತಿದೆ. ಈ ಕುರಿತು ಮಾಧ್ಯಮಗಳಲ್ಲೂ ಸುದ್ದಿ ಬಿತ್ತರವಾಗುತ್ತಿದೆ. ಮಸರ್ಿಡೀಜ್ ಬೆಂಚ್ ಕಾರಿನಿಂದ ಅಪಘಾತವಾದರೆ, ಪೊಲೀಸರು ಎಫ್ಐಆರ್ನಲ್ಲಿ ಆಡಿ ಕಾರ್ ಎಂದು ನಮೂದಿಸಿದ್ದಾರೆ. ಪ್ರಕರಣದಲ್ಲಿ ಸಚಿವ ಆರ್.ಅಶೋಕ್ ಪುತ್ರ ಇದ್ದಾನೆಂಬ ಸುದ್ದಿ ಹರಿದಾಡುತ್ತಿದ್ದು, ಕಾರಿನಲ್ಲಿದ್ದರೂ ಅವರ ಹೆಸರನ್ನು ಕೈಬಿಟ್ಟು ಅವರ ರಕ್ಷಣೆಗೆ ನಿಂತಿರುವುದು ಖಂಡನೀಯವಾಗಿದ್ದು, ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಏನಾಗಬಹುದು ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ. ಮೃತನ ಕುಟುಂಬಕ್ಕೆ ಪರಿಹಾರ ನೀಡಬೇಕು. ಘಟನೆಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.