ಬಳ್ಳಾರಿ 11: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ 597ನೇ ಜಯಂತಿಯ ಅಂಗವಾಗಿ ಬಳ್ಳಾರಿ ತಾಲೂಕಿನ ವೇಣಿವೀರಾಪುರ ಬಳಿ ಇರುವ ವೇಮನಪೀಠ ರೆಡ್ಡಿ ಸಂಸ್ಥಾನದಲ್ಲಿರುವ ಹೇಮರೆಡ್ಡಿ ಮಲ್ಲಮ್ಮ ವಿಘ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪೀಠದ ಅಧ್ಯಕ್ಷ ಗಣಪಾಲ ಐನಾತ್ ರೆಡ್ಡಿ, ಸಮುದಾಯದ ಮುಖಂಡರುಗಳಾದ ಡಾ.ಎಸ್.ಜೆ.ಮಹಿಪಾಲ್, ನೇಪಾಕ್ಷಪ್ಪ, ಎನ್.ಅಯ್ಯಪ್ಪ, ಆರ್.ಮಾದವರೆಡ್ಡಿ, ಪಾಂಡುರಂಗರೆಡ್ಡಿ, ಹನುಮಂತರೆಡ್ಡಿ, ಬಾಲಾರೆಡ್ಡಿ, ಕೆ.ವಿ.ಹನುಮಂತರೆಡ್ಡಿ, ವಿ.ರಾಮಿರೆಡ್ಡಿ, ಕೇಶವರೆಡ್ಡಿ, ಸಿತಮನಹಳ್ಳಿ ತಿಮ್ಮಾರೆಡ್ಡಿ, ಗೋಪಾಲರೆಡ್ಡಿ, ಸುದಾಕರರೆಡ್ಡಿ, ಸೇರಿದಂತೆ ಇನ್ನೂ ಹಲವಾರು ರೆಡ್ಡಿ ಸಮೂದಾಯದ ಮುಖಂಡರುಗಳು ವೇಮನ ಪೀಠದಲ್ಲಿ ನಡೆದ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.