ಬಳ್ಳಾರಿ: ಜೂ.23ರಿಂದ 27ರವರೆಗೆ ಮಹಾವರುಣಯಾಗ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 20: ನಗರದ ರಾಘವೇಂದ್ರ ಕಾಲೋಣಿಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಜೂ.23ರಿಂದ 27ರವರೆಗೆ ಲೋಕಲ್ಯಾರ್ಥವಾಗಿ ವರುನ ಯಜ್ಞವನ್ನು ಹಮ್ಮಿಕೊಳ್ಳಲಾಗಿದೆ. 

ಈ ಕುರಿತು ವೆಂಕಟವರದಾಚಾರ್ಯ ಸೇವಾ ಸಮಿತಿಯ ಟ್ರಷ್ಟ್ನ ಅಧ್ಯಕ್ಷ ಕಲ್ಲುರು ವೆಂಕಟೇಶಲು ಮತ್ತಿತರರು ಪತ್ರಕಾಗೋಷ್ಟಿ ನಡೆಸಿ ಮಾತನಾಡಿ ಶ್ರಿಂಗೆರಿಯ ಭಾರತಿತೀರ್ಥ ಶ್ರೀಗಳು, ಜಗದ್ಗೂರು ವಿದುಶೇಖರ ಭಾರತಿ ಶ್ರೀಗಳು, ಮಂತ್ರಾಲಯ ಮಠದ ಸುಗುದೇಂದ್ರ ತೀರ್ಥರು, ಅವರ ಸನ್ಮಾರ್ಗದಲ್ಲಿ ಜೂ.23ರಂದು ಬಳಿಗ್ಗೆ 7 ಗಂಟೆಗೆ ವಿಧಾನ ಪರಿಷತ್ ಮಾಜಿ ಅಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ  ಮತ್ತು ನಗರ ಶಾಸಕರಾದ ಗಾಲಿ ಸೋಮಶೇಖರರೆಡ್ಡಿ ಈ ಯಜ್ಞವನ್ನು ಉದ್ಘಾಟಿಸಲಿದ್ದಾರೆ. ಸಂಸದ ವೈ.ದೇವೇಂದ್ರಪ್ಪ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಅಯ್ಯಪ್ಪಸ್ವಾಮಿ ಟ್ರಷ್ಟ್ನ ಅಧ್ಯಕ್ಷ ಜಯಪ್ರಕಾಶ್ ಜೆ.ಗುಪ್ತಾ, ಕನರ್ಾಟಕ ಆರ್ಯವೈಶ್ಯ ಮಹಾಮಂಡಳಿಯ ಅಧ್ಯಕ್ಷ ಆರ್.ಪಿ.ರವಿಶಂಕರ್ ಮೊದಲಾದವರು ಭಾಗವಹಿಸಲಿದ್ದಾರೆಂದು ತಿಳಿಸಿದರು. 

ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 1 ಗಂಟೆಗೆ ಮತ್ತು ಸಂಜೆ 5 ರಿಂದ 8 ರವರೆಗೆ ಯಜ್ಞದ ಕಾರ್ಯಕ್ರಮಗಳು ನಡೆಯಲಿದ್ದು ಭ್ರಹ್ಮಶ್ರೀ ಗುಂಡುವೇಣಗೋಪಾಲ ಶಾಸ್ತ್ರಿ (ಬೆಳ್ಡೋಣ ಸ್ವಾಮಿ) ನೇತೃತ್ವದಲ್ಲಿ ನಡೆಯಲಿದೆ. ನಗರದಲ್ಲಿ ಕಳೆದ 5 ವರ್ಷಗಳಿಂದ ಮಳೆ ಅಭಾವದ ಹಿನ್ನಲೆಯಲ್ಲಿ ಸುತ್ತು-ಮುತ್ತಲ ಹತ್ತಾರು ಕಿ.ಮೀ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಅವುಗಳನ್ನು ಜನರ ಸಹಕಾರದಿಂದ ಬೆಳಸಿದ್ದು 4 ಸಾವಿರಕ್ಕೂ ಹೆಚ್ಚು ಗಿಡಗಳು ಬೆಳೆದು ಇಂದು ಮರಗಳಾಗಿವೆ ಎಂದರು. ಸಾಪ್ರಾದಾಯಕ ರೀತಿಯಲ್ಲಿ ವರುಣ ಯಜ್ಞ ಮಾಡಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇದೆ. ಜನರ ಸಹಕಾರದಿಂದ ಇಂತಹ ಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.  

ಕೊನೆಯ ದಿನ ಗಿರಿಜಾಕಲ್ಯಾಣ ಮಹೋತ್ಸವವನ್ನು ಸಹ ಆಯೋಜಿಸಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವರುಣಯಜ್ಞ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು. ಸುದ್ದಿಗೋಷ್ಟಿಯಲ್ಲಿ ಕುಮಾರಸ್ವಾಮಿ, ತಲ್ಲಂ ರಮೇಶ, ನಾಗೇಂದ್ರಕುಮಾರ್, ಸೇರಿದಂತೆ ಇನ್ನು ಹಲವಾರು ಸದಸ್ಯರುಗಳು ಉಪಸ್ಥಿತರಿದ್ದರು.