ಲೋಕದರ್ಶನ ವರದಿ
ಬಳ್ಳಾರಿ 08: ಜಮೀನು ಮಾರಾಟ ವಿವಾದ ಹಾಗೂ ಎಲ್ಲಾ ವಿಷಯದಲ್ಲಿ ಜಿಂದಾಲ್ ಸಂಸ್ಥೆ ಕಾನೂನು ಪ್ರಕಾರ ಕಾರ್ಯ ನಿರ್ವಹಿಸುತ್ತಿದೆ. ಸರಕಾರ ನಿಯಮದಂತೆ ಜಮೀನು ಮಾರಾಟ ಮಾಡುತ್ತಿದೆ. ಯಾರೋ ಒಬ್ಬರು ಈ ಬಗ್ಗೆ ಆಕ್ಷೇಪ ಮಾಡುತ್ತಿರುವ ಬಗ್ಗೆ ಉತ್ತರಿಸಲು ಇಷ್ಟ ಪಡುವುದಿಲ್ಲ ಎಂದು ಜಿಂದಾಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಸಜ್ಜನ್ ಜಿಂದಾಲ್ ತಿಳಿಸಿದರು.
ಜಿಂದಾಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಜಮೀನು ಮಾರಾಟ ಮಾಡುತ್ತಿರುವ ಸರಕಾರದ ವಿಷಯದ ಬಗ್ಗೆ ಚಚರ್ೆ ಮಾಡಲು ಇಷ್ಟ ಇಲ್ಲ. ನಾವು ಅಕ್ರಮವಾಗಿ ಜಮೀನು ಪಡೆದಿಲ್ಲ. ಪಡಿಯೋ ಕೆಲಸವನ್ನು ಮಾಡುವುದಿಲ್ಲ. ಇದರಲ್ಲಿ ರಾಜಕೀಯ ಮಾಡುವುದು ಸಂಸ್ಥೆಗೆ ಅಗತ್ಯವಿಲ್ಲ ಎಂದರು. ಮಾಜಿ ಸಚಿವ ಹೆಚ್.ಕೆ.ಪಾಟಿಲ್ ಆಕ್ಷೇಪದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಯಾರೆಂದು ನನಗೆ ಗೊತ್ತಿಲ್ಲ. ಕೆಲವರು ಮಾತ್ರ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಜಾಪ್ರಬುತ್ವ ವ್ಯೆವೆಸ್ಥೆ ಎಲ್ಲರಿಗೂ ಮಾತನಾಡುವ ಹಕ್ಕು ಇದೆ. ಮಾತನಾಡಲಿ ಬಿಡಿ ಎಂದರು. ಎಂ.ಎಂ.ಎಲ್.ಗೆ ಪಾವತಿಸಬೇಕಾಗಿರುವ ಬಾಕಿಯ ಬಗ್ಗೆ ಉತ್ತರಿಸುತ್ತಾ ಈ ವಿಚಾರ ಕೊರ್ಟನಲ್ಲಿದೆ. ಆದ್ದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ ಎಂದರು.
ವಾಣಿಜ್ಯೋದ್ಯಮ ಸಂಘದ ಕಾರ್ಯಕ್ರಮಕ್ಕೆ ನಾನು ಬಂದಿದ್ದೇನೆ. ಇದೊಂದು ಒಳ್ಳೆಯ ಕಾರ್ಯಕ್ರಮ. ರಾಜಕೀಯ ಒಂದು ಭಾಗ. ಉದ್ದೆಮ ಮತ್ತು ರಾಜಕೀಯ ಎರಡೂ ಬೇರೆ-ಬೇರೆ. ಟಿಆರ್ಪಿಗಾಗಿ ಕೆಲವರು ವಿರುದ್ದವಾಗಿ ಮಾತನಾಡುವುದನ್ನು ಆರಂಭಿಸಿದ್ದಾರೆ ಎಂದರು. ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸುಧಾಕರಶೆಟ್ಟಿ ಜಿಂದಾಲ್ ಸಂಸ್ಥೆಗೆ ಸರಕಾರ ಕೊಟ್ಟ ಮಾತಿನಂತೆ ಜಮೀನು ಮಾರಾಟ ಮಾಡಬೇಕು. ಇಲ್ಲದಿದ್ದರೇ ರಾಜ್ಯಕ್ಕೆ ಇತರೆ ಉದ್ದೆಮಿಗಳನ್ನು ಸ್ಥಾಪನೆ ಮಾಡಲು ಮುಂದೆ ಬರುವುದು ಹೇಗೆ. ಅದಕ್ಕಾಗಿ ಸರಕಾರ ಒಪ್ಪಂದದಂತೆ ಜಮೀನು ಮಾರಾಟ ಪ್ರಕ್ರೀಯೆ ಮುಗಿಸಬೇಕೆಂದು ಆಗ್ರಹಿಸಿದರು.