ಬಳ್ಳಾರಿ: ಕರ್ನಾಟಕ ಕಾರ್ಮಿಕರ ವೇದಿಕೆಗೆ ಜಿಲ್ಲಾ ಪದಾಧಿಕಾರಿಗಳ ನೇಮಕ

ಬಳ್ಳಾರಿ 18: ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಇಂದು ನಡೆದ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷರಾದ ನಾಗೇಶ್ ಇವರ ಸೂಚನೆ ಮೇರೆಗೆ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶರಣ್ ಎಂ.ಬಡಿಗೇರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಳ್ಳಾರಿ ಜಿಲ್ಲಾ ಘಟಕ, ನಗರ ಘಟಕ ಮತ್ತು ಹೊಸಪೇಟೆ ತಾಲೂಕು ಘಟಕಕ್ಕೆ ಅಧ್ಯಕ್ಷ ಸೇರಿದಂತೆ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಹಿತರಕ್ಷಣೆ ಮಾಡುವ ಸಲುವಾಗಿ ಈ ವೇದಿಕೆಯನ್ನು ಆರಂಭಿಸಲಾಗಿದ್ದು ಎಲ್ಲಾ ಪದಾಧಿಕಾರಿಗಳು ಸ್ವಾರ್ಥಬಿಟ್ಟು ಕಾಮರ್ಿಕರ ಹಿತ ಕಾಯಬೇಕೆಂದು ಎಲ್ಲಾ ಪದಾಧಿಕಾರಿಗಳಿಗೆ ಕಿವಿ ಮಾತನ್ನು ಹೇಳಿದರು. 

ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಎ.ಕೆ.ಈರಪ್ಪ, ಜಿಲ್ಲಾ ಉಪಾಧ್ಯಕ್ಷರನ್ನಾಗಿ ಬಾಪೂಜಿನಗರ ಗಂಗಣ್ಣ, ಪ್ರಧಾನಕಾರ್ಯದರ್ಶಿಗಳಾಗಿ ಸಂಗನಕಲ್ಲು ಬಸವರಾಜ, ಬಳ್ಳಾರಿ ನಗರ ಘಟಕದ ಅಧ್ಯಕ್ಷರನ್ನಾಗಿ ಬಿ.ಮಲ್ಲಿಕಾರ್ಜನ, ಹೊಸಪೇಟೆ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಪದ್ಮನಾಭ ಇವರುಗಳನ್ನು ನೇಮಕ ಮಾಡಿ ಆದೇಶಪತ್ರವನ್ನು ನೀಡಿದರು. ಈ ಸಂದರ್ಭದಲ್ಲಿ ಸುರೇಶ್ ಕರ್ಚೆಡು, ಚಿರುಮಣಿ, ರಾಜ, ಪಾಂಡು, ಮುಸ್ಥಾಫ್, ಹರೀಸ್ ತೋನಿ, ಸಂಚಾಲಕರಾದ ಗಾದಿಲಿಂಗಪ್ಪ ಸಿಂಧುವಾಳ, ಅಂಜಿ ಬಳ್ಳಾರಿ, ಶೇಖಣ್ಣ ಬಿ ಗೋನಾಳ್ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.