ಲೋಕದರ್ಶನ ವರದಿ
ಬಳ್ಳಾರಿ 13: ಮಾಜಿ ಸಚಿವ, ಸಮಾಜ ಸೇವಕ ಗಾಲಿ ಜನಾರ್ಧನರೆಡ್ಡಿ ಅವರು ಸುಪ್ರೀಂಕೋರ್ಟ್ ಅನುಮತಿಮೇರೆಗೆ ಬಳ್ಳಾರಿ ನಗರಕ್ಕೆ ಎರಡು ವಾರಗಳ ಕಾಲ ಆಗಮಿಸಿದ್ದು ಈ ದಿನ ಗಂಗಾದಶಮಿಯಂದು ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರು.
ತಾಲೂಕಿನ ವೇಣಿವೀರಾಪುರ ಗ್ರಾಮದ ಬಳಿ ಇರುವ ಶಿವಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಅವರು ಹೋಮ, ಹವನ, ಯಜ್ಞ ಕಾರ್ಯಗಳನ್ನು ನೆರವೇರಿಸಿದರು. ಜೇಷ್ಠ ಮಾಸದ ಅಂಗವಾಗಿ ಶಿವನಿಗೆ ಸಹಸ್ರನಾಮಾರ್ಚನೆ ನೆರವೇರಿಸುವ ಮೂಲಕ ವಿಶೇಷ ಪ್ರಾರ್ಥನೆ ಮಾಡಿದರು. ಶಿವನಿಗೆ ಬಿಲ್ವಪತ್ರ ಸಮರ್ಪಣೆ, ಅಭಿಷೇಕಾದಿಗಳನ್ನು ಸಲ್ಲಿಸಿ ಭಕ್ತಿಯಿಂದ ಶಿವನಿಗೆ ಪ್ರಾಥರ್ಿಸಿದರು. ನಾಡಿನಲ್ಲಿ ಬರ ನೀಗಿ ಎಲ್ಲೆಡೆ ವರುಣನ ಪ್ರಾಪ್ತಿಯಾಗಲಿ. ರೈತಾಪಿ ವರ್ಗ, ದುಡಿಯುವ ವರ್ಗದವರಿಗೆ ಶಿವನ ಅನುಗ್ರಹ ದೊರೆತು ಸುಖ, ಶಾಂತಿ, ಸಮೃದ್ಧಿ ದೊರೆಯಲಿ ಎಂದು ಪ್ರಾರ್ಥಿಸಿದರು
ಈ ವೇಳೆ ತಮ್ಮ ಅನುಯಾಯಿಗಳೊಂದಿಗೆ ಶಿವ ತತ್ವದ ಕುರಿತು ಧಾಮರ್ಿಕವಾಗಿ ಮಾತನಾಡಿದ ರೆಡ್ಡಿ ಅವರು, ಶಿವ ಎಂಬ ಎರಡಕ್ಷರ ಮೋಕ್ಷಕ್ಕೆ ದಾರಿ. ಸದಾ ಧ್ಯಾನಾಸಕ್ತನಾಗಿರುವ ಶಿವನನ್ನು ಪೂಜಿಸಿದರೆ ರೋಗ ರುಜಿನ, ಕೇಡು, ದುಃಖ, ಭಯ, ದಾರಿದ್ರ್ಯ ಭೂತ ಪ್ರೇತಗಳ ಕಾಟ ದೂರವಾಗುತ್ತವೆ ಎಂದು ಶರಣರು ಸಾರಿದ್ದಾರೆ. ಶಿವನನ್ನು ಸ್ತುತಿಸಿ ಭಜಿಸಿದರೆ ಅಪಮೃತ್ಯು ಪರಿಹಾರವಾಗಿ, ಅಶಾಂತಿ ದೂರವಾಗಿ ಜೀವನದಲ್ಲಿ ಯಾರು ಬೇಕಾದರೂ ಆಯುಷ್ಯ, ಆರೋಗ್ಯ, ಐಶ್ವರ್ಯ, ಜೀವನ್ಮುಕ್ತಿ ಹೊಂದಬಹುದೆಂದು ಅನುಭಾವಿಗಳು ಹೇಳಿದ್ದಾರೆ ಎಂದು ಭಾವುಕರಾಗಿ ನುಡಿದರು.
ಈ ವೇಳೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬಿಜೆಪಿ ಮುಖಂಡರಾದ ಕೃಷ್ಣಾರೆಡ್ಡಿ, ಶಿವಾಲಯದ ಅರ್ಚಕರು, ಭಕ್ತ ವೃಂದ ಸೇರಿದಂತೆ ಹಲವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.