ಬಳ್ಳಾರಿ: ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ದಿನಾಚರಣೆ ಸಮಾರಂಭ ಸೃಜನಶೀಲತೆ, ಉದ್ಯಮಶೀಲತೆ ಮೈಗೂಡಿಸಿಕೊಳ್ಳಿ: ಬಸವರಾಜ್

ಲೋಕದರ್ಶನ ವರದಿ

ಬಳ್ಳಾರಿ 21: (ಹೋಸಪೇಟೆ) "ಯುವಕರಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ, ಇದನ್ನು ಸದ್ಬಳಕೆ ಮಾಡಿಕೊಂಡು ದೇಶಕ್ಕೆ ಯುವಕರು ತಮ್ಮದೇ ಆದ ಕೊಡುಗೆ ನೀಡಬೇಕು. ಕೇವಲ ಪದವಿ ಪಡೆಯುವುದು ಮಾತ್ರವಲ್ಲ, ಜೊತೆಗೆ ಸೃಜನಶೀಲತೆ ಹಾಗೂ ಉದ್ಯಮಶೀಲತೆಗಳನ್ನು ಮೈಗೂಡಿಸಿಕೊಳ್ಳಬೇಕು" ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್ ತಾಂತ್ರಿಕ ವಿದ್ಯಾರ್ಥಿಗಳಿಗೆ  ಕರೆ ನೀಡಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಪದವಿ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. 

"ವಿದ್ಯಾರ್ಥಿಗಳು ಶ್ರಮ ಪಡಬೇಕು. ಪ್ರರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಹೊಸಪೇಟೆಯ ಸುತ್ತ ಮುತ್ತಲಿನ ಗ್ರಾಮೀಣ ವಿದ್ಯಾರ್ಥಿಗಳಿಗೆ  ಶಿಕ್ಷಣ ನೀಡುವಲ್ಲಿ ವೀ.ವಿ. ಸಂಘದ ಪಿಡಿಐಟಿಯು ಮಹತ್ವದ ಪಾತ್ರ ವಹಿಸಿದೆ" ಎಂದು ಹೇಳಿದರು. 

ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಎಂ. ಮಹೇಶ್ವರಸ್ವಾಮಿ ಮಾತನಾಡಿ "ವಿಶ್ವದ ಆಥರ್ಿಕ ಬೇಳವಣಿಗೆಯ ಜೊತೆ ಜೊತೆಗೆ ನಮ್ಮ ದೇಶವು ಹೆಜ್ಜೆ ಹಾಕಬೇಕಾಗಿದೆ. ಅದಕ್ಕಾಗಿ ಉತ್ತಮ ತಾಂತ್ರಿಕ ಪರಿಣಿತರ ಅವಶ್ಯಕತೆ ಇದೆ. ನಮ್ಮ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲಿಯೂ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳನ್ನು ಬಳಸಿಕೊಂಡು ದೇಶದ ಪ್ರಗತಿಗೆ ಕೈ ಜೋಡಿಸಬೇಕು, ಇಂದು ಜಗತ್ತು ಹಿಂದೆಂದಿಗಿಂತ ಹೆಚ್ಚು ಸ್ಫಧರ್ಾತ್ಮಕವಾಗಿದೆ" ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಪ್ರೌಢದೇವರಾಯ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಸ್.ಎಂ. ಶಶಿಧರ್ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. "ಕೇಂದ್ರ ಸರ್ಕಾರದ  ಸ್ಮಾರ್ಟಪ್ ಯೋಜನೆಯನ್ನು ಯುವ ತಂತ್ರಜ್ಞರು ಬಳಸಿಕೊಳ್ಳಬೇಕಿದೆ. ವಿಮಾನಯಾನ, ಜಲಸಾರಿಗೆ, ನವೀಕರಿಸಬಹುದಾದ ಇಂಧನ ಮುಂತಾದ ಕ್ಷೇತ್ರಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಪದವಿ ಪಡೆದ ನಂತರ ವಿದ್ಯಾಥರ್ಿಗಳು ಈ ಕ್ಷೇತ್ರಗಳಲ್ಲಿ ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು' ಎಂದು ಹೇಳಿದರು.

ಪಿಡಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಜಾನೆಕುಂಟೆ ಬಸವರಾಜ್ ಸಮಾರಂಭದ ಆರಂಭ ಹಾಗೂ ಸಮಾಪ್ತಿಯ ಘೋಷಣೆ ಮಾಡಿದರು. ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳಾದ ಎಚ್.ಎಂ. ವೀರಭದ್ರ ಶರ್ಮಾ, ಉಪಾಧ್ಯಕ್ಷರಾದ ಕೆ. ವೀರೆಶ್ಗೌಡ ಸಮಾರಂಭದಲ್ಲಿ ಭಾಗವಹಿಸಿದ್ದರು. ಪಿ.ಡಿ.ಐ.ಟಿ ಆಡಳಿತ ಮಂಡಳಿ ಸದಸ್ಯ ಏಕಾಮರೇಶ ತಾಂಡೂರ ಹಾಗೂ ವಿವಿಧ ತಾಂತ್ರಿಕ ವಿಭಾಗಗಳ ಮುಖ್ಯಸ್ಥರು, ಡೀನ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಈ ಕಾರ್ಯಕ್ರಮದ ಸಂಚಾಲಕರಾದ ಪ್ರೊ. ಮಾಲತೇಶ್ ಕೆ. ಉಪಸ್ಥಿತರಿದ್ದರು.

350ಕ್ಕೂ ಹೆಚ್ಚು ಬಿ.ಇ., ಎಂ.ಟೆಕ್., ಹಾಗೂ ಎಂ.ಬಿ.ಎ. ವಿದ್ಯಾಥರ್ಿಗಳು ಪದವಿ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು ಹಾಗೂ ಅವರ ಪೋಷಕರು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿಯರಾದ  ಸುಷ್ಮಾ, ಸ್ನೇಹಾ, ರೇಖಾ ಮತ್ತು ಅಕ್ಷತಾ ಅವರು ತಮ್ಮ ಶೈಕ್ಷಣಿಕ ಅನುಭವಗಳನ್ನು ಹಂಚಿಕೊಂಡರು. ವೈಷ್ಣವಿ ಪ್ರಾರ್ಥಿಸಿದ್ರು  ಡಾ. ಶಿವಕೇಶವ್ ಕುಮಾರ್ ವಂದಿಸಿದರು. ಎಂ.ಬಿ.ಎ. ವಿಭಾಗದ ಪ್ರೊ. ರವಿಕುಮಾರ ಹಾಗೂ ಪ್ರೊ. ಜೀವಿತಾ ಕಾರ್ಯಕ್ರಮವನ್ನು ನಿರೂಪಿಸಿದರು.