ಬಳ್ಳಾರಿ: ಭ್ರೂಣಹತ್ಯೆಯಿಂದ ಲಿಂಗಾನುಪಾತ ಅಸಮತೋಲನ ಜಿಲ್ಲಾಧಿಕಾರಿ ನಕುಲ್ ಹೇಳಿಕೆ

ಲೋಕದರ್ಶನ ವರದಿ

ಬಳ್ಳಾರಿ 02: ಹೆಣ್ಣು ಮಕ್ಕಳನ್ನು ನಮ್ಮ ದೇಶದಲ್ಲಿ ದೇವತೆಯ ಸ್ಥಾನದಲ್ಲಿಟ್ಟು ಪೂಜಿಸುತ್ತೇವೆ. ಹೆಣ್ಣನ್ನು ಪೂಜ್ಯ ಭಾವದಿಂದ ಕಾಣುವ  ನಾವುಗಳೇ ಹೆಣ್ಣು ಮಕ್ಕಳು ಬೇಡ ಎಂದು ಭ್ರೂಣದಲ್ಲೆ ಹತ್ಯೆ ಮಾಡಿದರೆ, ಹೆಣ್ಣಿನ ಸಂತತಿಯು ಕುಸಿಯುತ್ತದೆ ಮತ್ತು ಅಸಮತೋಲನದಿಂದ ಲಿಂಗಾನುಪಾತ ಉಂಟಾಗಿ ಹೆಣ್ಣು ಸಂತತಿ ನಾಶವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕಾಶ್ರಯದಲ್ಲಿ  ಸರಕಾರಿ ಮತ್ತು ಖಾಸಗಿ ವೈದ್ಯರಿಗಾಗಿ ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರವಿಧಾನಗಳ 1994 ಕಾಯ್ದೆ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಸ್ಪತ್ರೆಗೆ ಭೇಟಿ ನೀಡುವ ಕೆಲರೋಗಿಗಳು ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ನೆಪವಾಗಿಸಿಕೊಂಡು ಭ್ರೂಣಪತ್ತೆಗೆ ಬೇಡಿಕೆ ಇಡಬಹುದು; ಅಂಥವರಿಗೆ ತಾವುಗಳು ಮನವೋಲಿಸಿ ಲಿಂಗಾನುಪಾತದಿಂದ ಆಗುವ  ದುಷ್ಪರಿಣಾಮಗಳ ಕುರಿತು ಮನವರಿಕೆ ಮಾಡಿಸಬೇಕು ಎಂದರು.

ಜಿಲ್ಲೆಯಲ್ಲಿ ಭ್ರೂಣಲಿಂಗಪತ್ತೆಯಂತ ಕಾನೂನುಬಾಹಿರ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಕೂಡದು ಎಂದು ಎಚ್ಚರಿಸಿದ ಡಿಸಿ ನಕುಲ್ ಅವರು ಈ ಕಾಯ್ದೆಯನ್ನು ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಎಲ್ಲರು ಕಾರ್ಯಪ್ರವೃತ್ತರಾಗಬೇಕು ಎಂದರು.

ತಮ್ಮ ತಮ್ಮ ಸ್ಕ್ಯಾನಿಂಗ್ ಸೆಂಟರ್/ಇಮೇಜಿಂಗ್ಸೆಂಟರ್ಗೆ ಬರುವ ರೋಗಿಗಳ ಸಂಪೂರ್ಣ ಮಾಹಿತಿಯನ್ನು ಅವರ ದಾಖಲಾತಿಗಳನ್ನು ಪಡೆಯುವುದರ ಜೊತೆಗೆ ಬಾಲಿಕಾ ಸಾಫ್ಟ್ವೇರ್ನಲ್ಲಿ ನೋಂದಾಯಿಸಿ ಪಾರಂ ಎಫ್ ಅನ್ನು ಸಹ ಕಡತದಲ್ಲಿ ಸೇರಿಸಿ ಆರೋಗ್ಯ ಇಲಾಖೆಗೆ ಸಲ್ಲಿಸಿ ಸ್ವೀಕೃತಿವನ್ನು ತಮ್ಮ ಸಂಸ್ಥೆಯಲ್ಲಿ ಸಂರಕ್ಷಿಸಿ ಇಡಬೇಕು ಎಂದರು.

ಕೆಲ ಜಿಲ್ಲೆಗಳಲ್ಲಿ ಲಿಂಗಪತ್ತೆ ಪ್ರಕರಣಗಳು ಕಂಡು ಬಂದಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಲಿಂಗಪತ್ತೆಯಂತಹ ಕಾನೂನು ಬಾಹಿರ ಪ್ರಕರಣಗಳು ದಾಖಲಾಗದಂತೆ ಎಚ್ಚರವಹಿಸಬೇಕು;ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು . 

ಕಾರ್ಯಗಾರದಲ್ಲಿ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಅನುಷ್ಟಾನ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಕಾಯ್ದೆ ಕುರಿತು ಕಾನೂನಿನ ಅರಿವು ಹಾಗೂ ಸಲಹೆ ಎಮ್.ಟಿ.ಪಿ ಕಾಯ್ದೆ ಕುರಿತು ಉಪನ್ಯಾಸ ಹಾಗೂ  ಬಾಲಿಕ ಸಾಫ್ಟ್ ವೇರ್ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ.ಆರ್.ವಿಜಯಲಕ್ಷ್ಮೀ, ಪಿಸಿ ಮತ್ತು ಪಿಎನ್ಡಿಟಿ ಕಾನೂನು ಸಲಹೆಗಾರರಾದ ಅಖಿಲಾ, ಸ್ತ್ರೀರೋಗ ತಜ್ಞೆ ಡಾ.ಜಯಪ್ರದಾ  ಹಾಗೂ ಬಾಲಿಕಾ ಸಾಪ್ಟವೇರ್ನ ವಿಶ್ವನಾಥ ಜಿ.ಕೆ. ಅವರು ಉಪನ್ಯಾಸ ನೀಡಿದರು.

ಇದೇ ವೇಳೇ ಕಾಯರ್ಾಗಾರಕ್ಕೆ ಆಗಮಿಸಿದ ವೈದ್ಯರು, ಸ್ಕ್ಯಾನಿಂಗ್ ಸೆಂಟರ್/ಇಮೇಜಿಂಗ್ ಸೆಂಟರ್ ಸಿಬ್ಬಂದಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಬಸರೆಡ್ಡಿ , ಭಾರತೀಯ ವೈದ್ಯಕೀಯ ಸಂಘ ಬಳ್ಳಾರಿ ಶಾಖೆಯ ಅಧ್ಯಕ್ಷರಾದ ಅರುಣ್ ಎಸ್.ಕೆ, ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷೆ ಎಸ್.ಪ್ರೇಮಾ, ಕಿರಿಯಪುರುಷ ಅರೋಗ್ಯ ಸಹಾಯಕರಾದ ಅರುಣ್ ಕುಮಾರ್, ಗೋಪಾಲ್ ಹೆಚ್.ಕೆ. ಸೇರಿದಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ ವೈದ್ಯರು ಹಾಗೂ ಸ್ಕ್ಯಾನಿಂಗ್ ಸೆಂಟರ್/ಇಮೇಜಿಂಗ್ ಸೆಂಟರ್ನ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.