ಬಳ್ಳಾರಿ: ಉಚಿತ ಅರೋಗ್ಯ ತಪಾಸಣೆ ಶಿಬಿರ

ಬಳ್ಳಾರಿ ಪೆ.21:ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಶಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಇಲಾಖೆ ಇವರ ವತಿಯಿಂದ "ಭಾರತೀಯ ರೆಡ್ ಕ್ರಾಸ್ ಸಂಸ್ತೆಯ 1920 ರಿಂದ 2020ರ ಶತಮಾನೋತ್ಸವ" ಪ್ರಯುಕ್ತ ಉತ್ತಮ ಆರೋಗ್ಯದ ನಿಮಿತ್ತ ಶಾಂತಿಧಾಮ, ಕಂಟೋನ್ಮೆಂಟ್, ಬಳ್ಳಾರಿಯಲ್ಲಿ "ಉಚಿತ ಅರೋಗ್ಯ ತಪಾಸಣೆ" ಶಿಬಿರವನ್ನು ನಡೆಸಲಾಯಿತು. 

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ನಾಗರಾಜ್ ರಾವ್, ಉಪ ಸಭಾಪತಿ, ಆರೋಗ್ಯ ಉಪ ಸಮಿತಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಬಳ್ಳಾರಿ ಇವರು ಶಾಂತಿಧಾಮದಲ್ಲಿ ಇರುವ ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಿದರು. ಇವರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಳಾಜಿ ವಹಿಸಿ ಶಾಂತಿಧಾಮದಲ್ಲಿ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಬೇಕೆಂದು ಸಲಹೆ ನೀಡಿದರು. ಈ ಕಾರ್ಯಕ್ರಮದಲ್ಲಿ ಚಾಂದ್ ಬಾಷಾ, ಬಳ್ಳಾರಿ ಇವರ ಮಾತನಾಡುತ್ತ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಲಾಜಿ ವಹಿಸಲು ಸಲಹೆ ನೀಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸುತ್ತ ಇದೇ ರೀತಿ ಮುಂದಿನ ದಿನಗಳಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಶಿಬಿರವನ್ನು ನಡೆಸಲು ಕೋರಿದ್ದರು. ಇದೇ ಸಂದರ್ಭದಲ್ಲಿ ಎಂ.ಎ.ಷಕೀಬ್, ಕಾರ್ಯದಶರ್ಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಮಂಜುನಾಥ್, ಕಛೇರಿ ಸಿಬ್ಬಂದಿ, ರೆಡ್ ಕ್ರಾಸ್ ಸಂಸ್ಥೆ ಇವರು ಉಪಸ್ಥಿತರಿದ್ದರು.