ಲೋಕದರ್ಶನ ವರದಿ
ಬಳ್ಳಾರಿ 19: ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರನ್ನು ಗೆಲ್ಲಿಸುವಲ್ಲಿ ಶ್ರಮಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟೀಲ್ ಅವರ ನಿವಾಸದಲ್ಲಿ ಇದೀಗ ಹಬ್ಬದ ಸಡಗರ ಮನೆಮಾಡಿದೆ.
ಕೊಟ್ಟೂರು ತಾಲೂಕಿನ ತಿಮ್ಮಲಾಪುರದಲ್ಲಿರುವ ಅವರ ನಿವಾಸದಲ್ಲಿ ಇದೀಗ ಇಬ್ಬರು ಸದಸ್ಯರ ಉದಯವಾಗಿದೆ. ಗೌಡರ ನಿವಾಸದಲ್ಲಿರುವ ತಾಯಿ ಗೌರಿ ಮುದ್ದು ಮುದ್ದಾದ ಎರಡು ಕರುಗಳಿಗೆ ಜನ್ಮ ನೀಡುವ ಮೂಲಕ ಡಬಲ್ ಧಮಾಕಾ ಕೊಡುಗೆ ನೀಡಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಜನಿಸಿದ ಕರುಗಳಿಗೆ ತುಂಗಾ ಮತ್ತು ಭದ್ರಾ ಎಂದು ನಾಮಾವಳಿ ಉದ್ಗರಿಸಿ ಮುಖದರ್ಶನ ಮಾಡಿದ ಗೌಡರು ಸಖತ್ ಖುಷಿ ಆಗಿದ್ದಾರೆ.