ಲೋಕದರ್ಶನ ವರದಿ
ಬಳ್ಳಾರಿ 22: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿದರ್ೇಶಕ ರಾಮೇಶ್ವರಪ್ಪ ನೇತೃತ್ವದಲ್ಲಿ ಆಹಾರ ಇಲಾಖೆಯ ಅಧಿಕಾರಿಗಳ ತಂಡ ಬಳ್ಳಾರಿಯಲ್ಲಿ ಸೋಮವಾರ ವಿವಿಧೆಡೆ ಆಹಾರ ಅದಾಲತ್ ನಡೆಸಲಾಯಿತು. ಪಡಿತರ ಚೀಟಿದಾರರ ಅಹವಾಲುಗಳನ್ನು ಇದೇ ಸಂದರ್ಭದಲ್ಲಿ ಆಲಿಸಲಾಯಿತು. ಅನೇಕ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಾಯಿತು.
ನಗರದ ಸತ್ಯನಾರಾಯಣ ಪೇಟೆಯ 17ನೇ ಕ್ರಾಸ್ನ ಸಹಕಾರ ಸಂಘ ನ್ಯಾಯಬೆಲೆ ಅಂಗಡಿ ಸಂಖ್ಯೆ 175ರಲ್ಲಿ ಆಹಾರ ಅದಾಲತ್ ನಡೆಸಿ ಪಡಿತರ ಚೀಟಿದಾರರ ಸಮಸ್ಯೆಗಳನ್ನು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಹಿರಿಯ ಉಪನಿದರ್ೇಶಕ ರಾಮೇಶ್ವರಪ್ಪ ಆಲಿಸಿದರು. ಈ ನ್ಯಾಯಬೆಲೆ ಅಂಗಡಿಯಲ್ಲಿ ಮೆಕ್ಯಾನಿಕಲ್ ತೂಕ ಮಾಪಕ ಬಳಸುತ್ತಿದ್ದುದನ್ನು ಸ್ಥಳದಿಂದ ತೆಗೆಸಿ ತಕ್ಷಣದಿಂದ ಎಲೆಕ್ಟ್ರಾನಿಕ್ ತೂಕ ಯಂತ್ರ ಬಳಸಲು ಸೂಚನೆ ನೀಡಿದರು.
ತದನಂತರ ರಾಮೇಶ್ವರಪ್ಪ ಅವರು ಆ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಬರುವ ಸತ್ಯನಾರಾಯಣ ಪೇಟೆ, ಕೊಟಾಲಪಲ್ಲಿ, ಹುಸೇನ್ನಗರಗಳ ಕೆಲವು ಮನೆಗಳಿಗೆ ಭೇಟಿ ನೀಡಿ ಪಡಿತರ ಕುರಿತ ಅಹವಾಲು ಆಲಿಸಿದರು.
ಈ ಸಂದರ್ಭದಲ್ಲಿ ಕೊಟಾಲಪಲ್ಲಿ ಕೊಳಚೆಪ್ರದೇಶದ ಕೆಲವು ಕುಟುಂಬಗಳು ತಮಗೆ ಪಡಿತರ ಚೀಟಿ ಇಲ್ಲ. ಪಡಿತರ ಚೀಟಿಗಳಲ್ಲಿ ತಿದ್ದುಪಡಿ ಆಗಬೇಕು ಎಂಬುದು ಸೇರಿದಂತೆ ಪಡಿತರ ಸಂಬಂಧಿತ ಅನೇಕ ಸಮಸ್ಯೆಗಳನ್ನು ಆಲಿಸಿದ ಇಲಾಖೆಯ ಹಿರಿಯ ಉಪನಿದರ್ೇಶಕ ರಾಮೇಶ್ವರಪ್ಪ ಅವರು ಈ ಕೊಟಾಲಪಲ್ಲಿ ಕೊಳಚೆಪ್ರದೇಶದ ಜನರ ಪಡಿತರ ಸಂಬಂಧಿತ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಉದ್ದೇಶದಿಂದ ಜು.23ರಂದು(ಮಂಗಳವಾರ) ಬೆಳಗ್ಗೆ 9ಕ್ಕೆ ಕೊಟಾಲಪಲ್ಲಿ 4ನೇ ಕ್ರಾಸ್ನಲ್ಲಿ ಪಡಿತರ ಚೀಟಿ ಸಮಸ್ಯೆ ನಿವಾರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಡಿತರ ಚೀಟಿ ಇಲ್ಲದವರಿಂದ ಅರ್ಜಿ ಪಡೆದುಕೊಂಡು ಸ್ಥಳದಲ್ಲಿಯೇ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳಿದ್ದವರು ತಮ್ಮ ಕುಟುಂಬದ ಆದಾಯ ಪ್ರಮಾಣಪತ್ರದ ಜೊತೆ ಬಂದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಂತೆ ಅವರು ಇದೇ ಸಂದರ್ಭದಲ್ಲಿ ಕೋರಿದರು.
ಈ ಆಹಾರ ಅದಾಲತ್ನಲ್ಲಿ ಆಹಾರ ಇಲಾಖೆಯ ಸಹಾಯಕ ನಿದರ್ೇಶಕರಿ ಹಲೀಮಾ, ಆಹಾರ ನಿರೀಕ್ಷಕರುಗಳಾದ ರವಿ ರಾಠೋಡ, ಆದಿಶೇಷ ಅಂಬೇಡ್ಕರ್ ಸೇರಿದಂತೆ ಅನೇಕರು ಇದ್ದರು.