ಬಳ್ಳಾರಿ: ಮೌಢ್ಯತೆಗೆ ಮೊರೆಹೋಗದೇ ಸೂರ್ಯಗ್ರಹಣ ವೀಕ್ಷಿಸಿ: ಯರ್ರಿಸ್ವಾಮಿ

ಲೋಕದರ್ಶನ ವರದಿ

ಬಳ್ಳಾರಿ 17: ಕಂಕಣ ಸೂರ್ಯಗ್ರಹಣ ನೈಸರ್ಗಿಕ ಸಹಜ, ಗ್ರಹಣದಿಂದ ಮನುಷ್ಯನಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸೂರ್ಯಗ್ರಹಣ  ವೀಕ್ಷಣೆ ಮಾಡುವುದರಿಂದ ವಿಜ್ಞಾನ ವಿಕಾಸವಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲೆಯ ತಾರಾಮಂಡಲದ ನಿರ್ದೇಶಕರಾದ ಚಳ್ಳಿಕೆರೆ ಯರ್ರಿಸ್ವಾಮಿ ಹೇಳಿದರು. 

ನಗರದ ನಲ್ಲಚೆರವು ಪ್ರದೇಶದಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಸಂಬಂಧಿಸಿದಂತೆ ವಿಜ್ಞಾನ ಶಿಕ್ಷಕರಿಗೆ ಆಯೋಜಿಸಿದ್ದ ಪೂರ್ವಭಾವಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಡಿ.26 ರಂದು ಬೆಳಿಗ್ಗೆ 8.05 ನಿಮಿಷದಿಂದ 11.05 ನಿಮಿಷಗಳ ಕಾಲ ಸೂರ್ಯಗ್ರಹಣವಾಗುತ್ತದೆ. ಕನರ್ಾಟಕದ ದಕ್ಷಿಣ ಜಿಲ್ಲೆಗಳಾದ ಮಡಿಕೇರಿ, ಮಂಗಳೂರು ಹಾಗೂ ತಮಿಳುನಾಡು ರಾಜ್ಯದ ಊಟಿ, ಕೋಯಮತ್ತೂರು ಜಿಲ್ಲೆಗಳಲ್ಲಿ ಕಂಕಣ ಸೂರ್ಯಗ್ರಹಣ ಸಮಯದಲ್ಲಿ ಸೂರ್ಯನು ಬಳೆ ಆಕಾರದಲ್ಲಿ ಬಿಂಬಿಸುತ್ತದೆ. ಈ ವೀಕ್ಷಣೆಯನ್ನು ಮುಖ್ಯವಾಗಿ ಎಲ್ಲಾ ಶಾಲಾ ಮಕ್ಕಳು ವೀಕ್ಷಣೆ ಮಾಡಬೇಕು. ಬಳ್ಳಾರಿ ಜಿಲ್ಲೆಯಲ್ಲಿ  ಶೇ.75 ರಷ್ಟು ಸೂರ್ಯಗ್ರಹಣ ಕಾಣುತ್ತದೆ. ಸಾರ್ವಜನಿಕರು ಮೂಡ ನಂಬಿಕೆಗಳಿಗೆ ಕಿವಿ ಕೊಡದೇ ಟ್ರಾಸ್ಪೆರೆಂಟ್ ಶೀಟ್ಗಳ ಮೂಲಕ ಸೂರ್ಯಗ್ರಹಣ ವೀಕ್ಷಣೆ ಮಾಡಿ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಹೆಚ್.ಎಂ.ಬಸವರಾಜ್ ಮಾತನಾಡಿ, ಗ್ರಹಣಗಳ ವೀಕ್ಷಣೆಯಿಂದ ಮನುಷ್ಯನಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಎಲ್ಲಾ ಶಾಲಾ ಮಕ್ಕಳು ತಮ್ಮ ಶಾಲೆಯಲ್ಲಿ ಟ್ರಾಸ್ಪೆರೆಂಟ್ ಶೀಟ್, ಎಕ್ಸ್-ರೇ ಮೂಲಕ ನೋಡಿ ವೈಜ್ಞಾನಿಕ ಹಾಗೂ ಖಗೋಳ ವಿಜ್ಞಾನದ ಜ್ಞಾನವನ್ನು ಬೆಳಸಿಕೊಳ್ಳಿ ಎಂದರು. 

ನಂತರ ಚಿತ್ರದುರ್ಗ ಜಿಲ್ಲೆಯ ಹವ್ಯಾಸಿ ಖಗೋಳ ವೀಕ್ಷಕರ ಘಟಕದ ಹೆಚ್.ಎಸ್.ಟಿ. ಸ್ವಾಮಿ ಅವರು ಗ್ರಹಣ ವೀಕ್ಷಣೆಯ ತರಬೇತಿಯನ್ನು ನೀಡಿದರು.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ರಾದ ಜಿ.ವಿ.ಶಿವರಾಜ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು, ಶಿಕ್ಷಕ-ಶಿಕ್ಷಕಿಯರು ಇದ್ದರು.