ಲೋಕದರ್ಶನ ವರದಿ
ಬಳ್ಳಾರಿ 12: ಜಿಲ್ಲೆಯಲ್ಲಿರುವ 237 ಗ್ರಾಪಂಗಳಲ್ಲಿ ಮುಂದಿನ ಒಂದು ವರ್ಷದೊಳಗೆ ನಗರದಲ್ಲಿದ್ದಂತೆ ಗ್ರಾಪಂಗಳಲ್ಲಿಯೂ ಮನೆ-ಮನೆ ಸಂಗ್ರಹಿಸುವ ಗುರಿಯನ್ನು ಬಳ್ಳಾರಿ ಜಿಪಂ ಹಾಕಿಕೊಂಡಿದೆ. ಮೊದಲ ಹಂತವಾಗಿ 16 ಗ್ರಾಪಂಗಳಲ್ಲಿ ಇದನ್ನು ಕಾರ್ಯಾರಂಭ ಮಾಡಲಾಗುತ್ತಿದ್ದು, ಎರಡನೇ ಹಂತದಲ್ಲಿ 54 ಗ್ರಾಪಂಗಳಲ್ಲಿ ಪ್ರಾರಂಭಿಸುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ಕೆ.ನಿತೀಶ್ ತಿಳಿಸಿದರು.
ನಗರದ ಜಿಪಂ ಕಚೇರಿ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ 16 ಗ್ರಾಪಂಗಳಿಗೆ ಘನತ್ಯಾಜ್ಯ ವಿಲೇವಾರಿ ವಾಹನಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಪಂ ಪ್ರದೇಶಗಳನ್ನು ಕಸಮುಕ್ತ ಮತ್ತು ವೈಜ್ಞಾನಿಕ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 16 ಗ್ರಾಪಂಗಳಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಜನರಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ಸಂಗ್ರಹಿಸಿ ವಾಹನಕ್ಕೆ ಹಾಕುವುದಕ್ಕಾಗಿ ಸ್ವಚ್ಛ ಭಾರತ ಮಿಶನ್ ಮುಖಾಂತರವೇ ಎರಡು ಡಬ್ಬಿಗಳನ್ನು ನೀಡಲಾಗುತ್ತಿದೆ ಎಂದರು.
ಈ ಹಿನ್ನೆಲೆಯಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ 20 ಲಕ್ಷ ರೂ.ಗಳನ್ನು ಪ್ರತಿಗ್ರಾಮ ಪಂಚಾಯತಿಗೆ ಸಕರ್ಾರದಿಂದ ನೀಡಲಾಗುತ್ತಿದ್ದು, ಅದರಲ್ಲಿ ಘನ ತ್ಯಾಜ್ಯ ನಿರ್ವಾಹಣ ಘಟಕ ನಿಮರ್ಾಣಕ್ಕೆ 10ಲಕ್ಷ ರೂ., ಸಂಗ್ರಹಣ ವಾಹನ ಖರೀದಿಗೆ ರೂ.5ಲಕ್ಷ, ಮನೆ ಮನೆ ಕಸ ಬುಟ್ಟಿ ವಿತರಣೆಗೆ, ಹಾಗೂ ಕಸ ಸಂಗ್ರಹಕರಿಗೆ ವಿವಿಧರೀತಿಯ ಸುರಕ್ಷೀತ ಪರಿಕರಗಳನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಜಾನಕಿರಾಮ್, ಜಿಪಂ ಮುಖ್ಯ ಯೋಜನಾ ನಿದರ್ೇಶಕ ಚಂದ್ರಶೇಖರ ಗುಡಿ, ತಾಪಂ ಇಒ ಎಂ.ಬಸಪ್ಪ ಸೇರಿದಂತೆ ಜಿಪಂನ ಅಧಿಕಾರಿಗಳು, ಗ್ರಾಪಂ ಅಧ್ಯಕ್ಷರುಗಳು ಗ್ರಾಪಂಗಳ ಪಿಡಿಒಗಳು ಇದ್ದರು.
ಮೊದಲ ಹಂತದಲ್ಲಿ ಘನತ್ಯಾಜ್ಯ ವಿಲೇವಾರಿ ವಾಹನಗಳು ಪಡೆದ ಗ್ರಾಪಂಗಳು: ಕೊರ್ಲಗುಂದಿ, ರೂಪನಗುಡಿ, ಹಗರನೂರು, ಹಿರೇಹಡಗಲಿ, ಅಲಬೂರು, ಹಂಪಸಾಗರ, ಹುರಳಿಹಳ್ಳ, ಹ್ಯಾಳ್ಯಾ, ತುಲಹಳ್ಳಿ, ಹೊಸೂರು, ನಾಗೇನಹಳ್ಳಿ, ಮಲಪನಗುಡಿ, ನಂ.10 ಮುದ್ದಾಪುರ, ಉಪ್ಪಾರ ಹೊಸಹಳ್ಳಿ, ಚೋರನೂರು.