ಬಳ್ಳಾರಿ: ಡಿಪಿಟಿ-ಟಿಡಿ ಲಸಿಕಾ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 11: ರಾಜ್ಯದಲ್ಲಿ ಹೆಚ್ಚಾಗಿ ಮಕ್ಕಳಿಗೆ ಮಾರಣಾಂತಿಕವಾದ ಗಂಟಲುಮಾರಿ ರೋಗ ಕಂಡುಬರುತ್ತಿದ್ದು, ಇದರ ನಿವಾರಣೆಗೆ 5 ರಿಂದ 16 ವರ್ಷದ ಮಕ್ಕಳಿಗೆ ಡಿ.ಪಿ.ಟಿ ಹಾಗೂ ಟಿ.ಡಿ ಲಸಿಕೆಯನ್ನು ತಪ್ಪದೇ ಹಾಕಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ ಪಾಂಡೆ ಹೇಳಿದರು. 

ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಆಸ್ಪೆತ್ರೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಶಾಲಾ ಲಸಿಕಾ ಅಭಿಯಾನದಡಿಯಲ್ಲಿ ರಾಜ್ಯಮಟ್ಟದ ಡಿಪಿಟಿ/ಟಿಡಿ ಲಸಿಕಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಮೊದಲ ಬಾರಿಗೆ ಈ ಲಸಿಕೆಯನ್ನು ಮಕ್ಕಳಿಗೆ ಹಾಕಿಸಲಾಗಿತ್ತಿದ್ದು, ಈ ಮಾರಣಾಂತಿಕವಾದ ಡಿಫ್ತೀರಿಯಾ (ಗಂಟಲುಮಾರಿ) ರೊಗವನ್ನು ತಡೆಗಟ್ಟಲು ತಪ್ಪದೆ ಮಕ್ಕಳಲ್ಲಿ ಲಸಿಕೆ ಹಾಕಬೇಕು ಎಂದು ಹೇಳಿದ ಅವರು ಈ ಲಸಿಕೆಯನ್ನು ಹಾಕಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಿಸಬೇಕು ಎಂದರು. 

ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು ಮಾತನಾಡಿ, ಈ ಲಸಿಕಾ ಅಭಿಯಾನವು ಇಂದಿನಿಂದ ಡಿ.31 ರವರೆಗೆ ಎಲ್ಲಾ ಮಕ್ಕಳಿಗೆ ಗಂಟಲು ಮಾರಿ ಲಸಿಕೆಯನ್ನು ಹಾಕಿಸಬೇಕು. 5 ರಿಂದ 6 ವರ್ಷದ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಹಾಗೂ 15 ರಿಂದ 16 ವರ್ಷದ ಮಕ್ಕಳಿಗೆ ಟಿ.ಡಿ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದರು. 

ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಮಾತನಾಡಿ, ರಾಜ್ಯಮಟ್ಟದ ಈ   ಲಸಿಕಾ ಅಭಿಯಾನದ ಕಾರ್ಯಕ್ರಮ ನಮ್ಮ ಬಳ್ಳಾರಿಯಲ್ಲಿ ಮಾಡಿರುವುದು ಸಂತೋಷ ವಿಷಯ ಎಂದು ಹೇಳಿದ ಅವರು ರಾಜ್ಯದಲ್ಲಿ 500ಕ್ಕೂ ಹೆಚ್ಚು ಶಂಕಿತ ಡಿಫ್ತೀರಿಯಾ ಪ್ರಕರಣಗಳು ವರದಿಯಾಗಿದ್ದು, ಈ ಪ್ರಕರಣದಲ್ಲಿ ಶೇ.70 ರಷ್ಟು ಪ್ರಕರಣಗಳು 5 ರಿಂದ 16 ವರ್ಷ ವಯಸ್ಸಿನಲ್ಲಿ ಕಂಡುಬಂದಿವೆ. ಈ ಮಾರಣಾಂತಿಕರೋಗವು ಅತಿಯಾಗಿ 9 ಜಿಲ್ಲೆಗಳಾದ ಕೊಪ್ಪಳ, ಚಿತ್ರದುರ್ಗ, ಬಾಗಲಕೋಟೆ, ವಿಜಯಪುರ, ಕಲ್ಬುರ್ಗೆ, ರಾಯಚೂರು, ಬೀದರ್, ಯಾದಗಿರಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ 370ಕ್ಕೂ ಹೆಚ್ಚು ಪ್ರಕರಣಗಳು ಕಂಡಿಬಂದಿವೆ ಎಂದರು.  

ಗಂಟಲುಮಾರಿ ರೋಗ ಮುಕ್ತ ಮಾಡಲು ಸಾಂಕೇತಿಕವಾಗಿ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಅವರು ಸ್ವಾಗತಿಸಿದರು. ಆರೋಗ್ಯ ಶಿಕ್ಷಣ ಅಧಿಕಾರಿ ಈಶ್ವರ ಹೆಚ್ ದಾಸಪ್ಪನವರ ಅವರು ವಂದಿಸಿದರು. 

ಈ ಸಂದರ್ಭದಲ್ಲಿ ಬೆಂಗಳೂರಿನ ಕನರ್ಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಯೋಜನಾ ನಿದರ್ೆಶಕ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಪಂ ಸಿಇಒ ನಿತೀಶ್.ಕೆ, ಬೆಂಗಳೂರಿನ ಎನ್.ಹೆಚ್.ಎಮ್ ಅಪರ ನಿರ್ದೇಶಕ ಡಾ.ಬಿ.ಎಸ್. ಪಾಟೀಲ್, ಡಬ್ಲ್ಯೂಹೆಚ್ಒ ಕನರ್ಾಟಕ ಉಪಕ್ಷೇತ್ರ ಅಧಿಕಾರಿ ಡಾ.ಲೋಕೇಶ್ ಅಲಹರಿ, ಬೆಂಗಳೂರಿನ ಲಸಿಕಾ ಕಾರ್ಯಕ್ರಮ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಉಪನಿದರ್ೇಶಕಿ ಬಿ.ಎನ್.ರಜನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹೆಚ್.ಎಲ್ ಜನಾರ್ಧನ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಎಸ್.ಎಮ್.ಒ ಡಬ್ಲ್ಯೂಹೆಚ್ಒ ಡಾ.ಆರ್.ಎಸ್. ಶ್ರೀಧರ್, ಡಿಡಿಪಿಐ ಶ್ರೀಧರನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಉಪನಿದರ್ೆಶಕಿ ಉಷಾ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿದರ್ೆಶಕ ನಾಗರಾಜ, ಕಾರ್ಯಕ್ರಮ ಅನುಷ್ಟಾನ ಅಧಿಕಾರಿಗಳಾದ ಡಾ.ರಾಜಶೇಖರರೆಡ್ಡಿ, ಡಾ.ವಿಜಯಲಕ್ಷ್ಮಿ, ಡಾ. ಅಬ್ದುಲ್ಲಾ, ಡಾ.ಇಂದ್ರಾಣಿ, ಡಾ.ಮರಿಯಂಬಿ ಸೇರಿದಂತೆ ಆಶಾ ಕಾರ್ಯಕತರ್ೆಯರು, ಶಾಲಾ ವಿದ್ಯಾಥರ್ಿಗಳು ಇದ್ದರು.