ಲೋಕದರ್ಶನ ವರದಿ
ಬಳ್ಳಾರಿ 12: ನಗರದ ಬಸವರಾಜೇಶ್ವರಿ ಪಬ್ಲಿಕ್ ಕಾಲೇಜಿನಲ್ಲಿ ಇಂದು ಬಳ್ಳಾರಿ ಜಿಲ್ಲಾ ಪೊಲೀಸ್, ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ಅಪರಾದ ತಡೆ ಮಾಸಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಬಿ.ಎನ್.ಲಾವಣ್ಯ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ ಇವರು ಸಸ್ಯಕ್ಕೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡಿ ಅಪರಾದಗಳು ಎಂದರೇನು? ಯಾಕೆ ಅಪರಾದಗಳು ಆಗುತ್ತಿವೆ? ಇದಕ್ಕೆ ಕಾರಣರು ಯಾರು? ಎನ್ನುವ ಕುರಿತು ಹೇಳುತ್ತಾ ಕಾನೂನಿನ ವಿರುದ್ದವಾಗಿ ನಡೆಯುವುದೇ ಅಪರಾದ. ಪೊಲೀಸ್ರು ಟ್ರಾಫಿಕ್ ನಿಯಮಗಳು ಹಾಕಿರುತ್ತಾರೆ ಈ ನಿಯಮಗಳಿರುವುದು ಸಾರ್ವಜನಿಕರ ಪ್ರಾಣ ಉಳಿಸುವುದಕ್ಕಾಗಿ ಆದರೆ ಸಾರ್ವಜನಿಕರು ಇದನ್ನು ಪಾಲಿಸುವಲ್ಲಿ ಹಿಂದೇಟು ಹಾಕಿ ವಾಮ ಮಾರ್ಗಗಳನ್ನು ಅನುಸರಿಸುತ್ರಾರೆ. ಜಿಲ್ಲೆಯ ಜನಸಂಖ್ಯೆ ಅತಿಹೆಚ್ಚು ಇದ್ದು ಎಲ್ಲರ ರಕ್ಷಣೆ ಮಾಡುವುದು ಕೇವಲ ಪೊಲೀಸರಿಂದಲೇ ಆಗಲ್ಲ ಸಾರ್ವಜನಿಕರೂ ತಮ್ಮ ಜವಾಬ್ದಾರಿ ಅರಿತು ಕಾನೂನು ಪಾಲಿಸುತ್ತಾ ತೊಂದರೆ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿನೀಡಿ ಸಹಕರಿಸಬೇಕು ಎಂದರು.
ಅರುಣ್ಕುಮಾರ್ ಜಿ.ಕೊಳೂರು, ಪೊಲೀಸ್ ಉಪ ಅದೀಕ್ಷಕರು, ಬಳ್ಳಾರಿ ಗ್ರಾಮೀಣ ಉಪ ವಿಭಾಗ, ಇವರು ಮಾತನಾಡುತ್ತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಗಳ್ಳತನ, ಮನೆಬೀಗ ಮುರಿದು ಕಳ್ಳತನ, ಮನೆಗಳಲ್ಲಿ ಬೆಲೆ ಬಾಳುವ ವಸ್ತುಗಳು ಹಾಗೂ ಹೆಚ್ಚು ಹಣವನ್ನು ಇಡದೆ ಬ್ಯಾಂಕ್ ಲಾಕರ್ಗಳನ್ನು ಬಳಕೆ ಮಾಡಬೇಕು ಎಂದು ತಿಳಿಸಿದರು.
ಅನುರಾಧ ಕಾನೂನು ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರು ಪೋಕ್ಸೊ ಕಾಯಿದೆ ಬಗ್ಗೆ ಮಾಹಿತಿ ನೀಡುತ್ತಾ, ಇದು 2012 ರಲ್ಲಿ ಜಾರಿಗೆ ಬಂದಿದ್ದರು ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಇರುವಂತರ ಕಾನೂನು ಇದಾಗಿದೆ, ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಹಾಗೂ ಮಕ್ಕಳ ಮೇಲೆ ಶೋಷಣೆ, ದೌರ್ಜನ್ಯ, 1098 ಮಕ್ಕಳ ರಕ್ಷಣಾ ಘಟಕದ ಸಹಾಯವನ್ನು ಪಡೆಯಬಹುದು ಎಂದು ಹೇಳಿ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ತಾವು ಕಾನೂನನ್ನು ತಿಳಿದು ಅದರ ಸದುಪಯೋಗ ಪಡೆದು ಮುಂದೆ ತಪ್ಪು ಮಾಡುವವರಿಗೆ ಇದೊಂದು ಎಚ್ಚರಿಕೆಯಾಗುವ ರೀತಿ ನಡೆದುಕೊಳ್ಳ ಬೇಕು ಎಂದು ಮಾಹಿತಿ ನೀಡಿದರು.
ಎಸ್.ಜೆ.ವಿ.ಮಹಿಪಾಲ್, ಬಸವರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಮಾತನಾಡಿ ನಮ್ಮ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಪೊಲೀಸ್ ಇಲಾಖೆ ಹಮ್ಮಿಕೊಂಡಿರುವುದು ಸಂತಸದ ವಿಚಾರ ಕಾನೂನುಗಳು ಇರುವುದು ಪಾಲಿಸಲು ಯುವಕರು ಹಾಗೂ ಸಾರ್ವಜನಿಕರೆಲ್ಲರೂ ನಿಯಮಗಳನ್ನು ಪಾಲಿಸಿದಲ್ಲಿ ಅಪರಾದಗಳನ್ನು ತಡೆಗಟ್ಟ ಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎ.ಎರ್ರಿಸ್ವಾಮಿ ಹಾಸ್ಯ ಕಲಾವಿದರು ತಮ್ಮ ಹಾಸ್ಯದ ಮಾತಿನ ಚಟಾಕಿಗಳ ಮುಖಾಂತರ ಎಲ್ಲರನ್ನು ನಕ್ಕು ನಲಿಸಿದರು, ತಮ್ಮ ಹಾಸ್ಯದಲ್ಲಿ ಅಪರಾದಗಳನ್ನು ತಡೆಗಟ್ಟುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿಯಾಗಿದೆ ಎನ್ನುವ ಸಂದೇಶವನ್ನು ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಎಂ.ಶ್ರೀನಿವಾಸ ವೃತ್ತ ನಿರೀಕ್ಷಕರು, ಗ್ರಾಮೀಣ ವೃತ್ತ ಇವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅಪರಾದ ತಡೆ ಮಾಸಾಚರಣೆ ಈ ತಿಂಗಳ ಪೂರ್ತಿ ಅರಿವನ್ನು ಮೂಡಿಸುವ ಕಾರ್ಯಕ್ರಮವನ್ನು ಮಾಡುವುದಾಗಿದೆ ಎಂದರು. ಕೊನೆಯಲ್ಲಿ ವೈ.ಎಸ್.ಹನುಮಂತಪ್ಪ, ಗ್ರಾಮೀಣ ಪಿ.ಎಸ್.ಐ. ಇವರು ವಂದಿಸಿದರು,
ಕಾರ್ಯಕ್ರಮದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್, ಎಸ್.ಸತ್ಯನಾರಾಯಣ, ಕೆ.ಬಸವರಾಜ್, ಲಕ್ಷ್ಮಣ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.