ಬಳ್ಳಾರಿ: ಗ್ರಾಹಕರ ಕುಂದು ಕೊರತೆ ಸಭೆ

ಲೋಕದರ್ಶನ ವರದಿ

ಬಳ್ಳಾರಿ 17: ಕಲಬುರಗಿ ಜಿಲ್ಲೆಯ ಜೆಸ್ಕಾಂನ ನಿದರ್ೆಶಕ ಆರ್.ಜಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇತ್ತಿಚೆಗೆ ನಗರದ ಬುಡಾ ಕಚೇರಿಯ ಹಿಂಭಾಗದಲ್ಲಿರುವ ಜೆಸ್ಕಾಂ ಸಭಾಂಗಣದಲ್ಲಿ ಹೆಚ್.ಟಿ/ಇ.ಹೆಚ್.ಟಿ ಗ್ರಾಹಕರ ಕುಂದು ಕೊರತೆ ಸಭೆ ನಡೆಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಜೆಸ್ಕಾಂನ ನಿದರ್ೆಶಕ ಆರ್.ಜಯಕುಮಾರ್ ಅವರು ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವುದು ನಮ್ಮ ಕರ್ತವ್ಯವಾಗಿದೆ. ಯಾವುದೇ ವಿದ್ಯುತ್ ಸಮಸ್ಯೆಗಳು ಕಂಡು ಬಂದಲ್ಲಿ ಕಚೇರಿಗೆ ತಿಳಿಸಿ ಎಂದರು. 

ಈ ಸಭೆಯಲ್ಲಿ ಅನೇಕ ಹೆಚ್.ಟಿ/ಇ.ಹೆಚ್.ಟಿ ಗ್ರಾಹಕರ ಕುಂದು ಕೊರತೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಯಿತು. ಕೆಲ ಬೇಡಿಕೆಗಳನ್ನು ನಿಗಮ ಮತ್ತು ಕೆ.ಇ.ಆರ್.ಸಿ ಗಮಕ್ಕೆ ತಂದು ಪರಿಹಾರವನ್ನು ಕೊಡಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ಜೆಸ್ಕಾಂ ಅಧಿಕಾರಿಗಳು/ಸಿಬ್ಬಂದಿಗಳು, ವಿದ್ಯುತ್ ಗ್ರಾಹಕರು ಇದ್ದರು.