ಬಳ್ಳಾರಿ: ಬಿಜೆಪಿ ಸರಕಾರದಿಂದ ಅಭಿವೃದ್ಧಿಪರ್ವ ರಾಜ್ಯದಲ್ಲಿ ಆರಂಭ

ಲೋಕದರ್ಶನ ವರದಿ

ಬಳ್ಳಾರಿ 16: ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದ ನಂತರ ಅಭಿವೃದ್ಧಿ ಪರ್ವವೇ ಆರಂಭವಾಗಿದೆ. ಒಂದು ವರ್ಷದಲ್ಲಿ ಮಾಡುವ ಅಭಿವೃದ್ಧಿ ಕಾರ್ಯಗಳನ್ನು ಕೇವಲ 100 ದಿನಗಳಲ್ಲಿ ನಮ್ಮ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದಾರೆ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಹೇಳಿದ್ದಾರೆ.

ವಾರ್ತಾ  ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ರಾಜ್ಯ ಸರಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ನೆರೆಪ್ರವಾಹ ಸಂದರ್ಭದಲ್ಲಿ ಸರಕಾರ ಕೈಗೊಂಡ ಕಾರ್ಯಗಳ ಬೃಹತ್ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಭಿವೃದ್ಧಿಯೇ ಆಡಳಿತದ ಮಂತ್ರ ಎನ್ನುವ ಧ್ಯೈಯದಡಿ ನಮ್ಮ ಸರಕಾರ ಕಾರ್ಯಪ್ರವೃತ್ತವಾಗಿದೆ. ಬಳ್ಳಾರಿ ನಗರಕ್ಕೆ ನೂರಾರು ಕೋಟಿ ರೂ.ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಛಾಯಾಚಿತ್ರ ಪ್ರದರ್ಶನವೇ ಸಾಕ್ಷಿ ಎಂದರು.

ಶ್ರೀರಾಮುಲುಗೆ ಡಿಸಿಎಂ ಸ್ಥಾನ ನೀಡುವ ವಿಚಾರ ಈ ಭಾಗದ ಜನರ ಬೇಡಿಕೆಯಾಗಿದೆ. ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ಶ್ರೀರಾಮುಲು ಅವರಾಗಿದ್ದು, ಡಿಸಿಎಂ ವಿಷಯದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು.

ಬಳ್ಳಾರಿ ಜಿಲ್ಲೆ ಅಖಂಡವಾಗಿರಬೇಕೆಂಬುದು ನಮ್ಮ ನಿರ್ಧಾರವಾಗಿದೆ;  

ವಿಜಯನಗರ ಜಿಲ್ಲೆ ರಚನೆಗೆ ವಿರೋಧವಿದೆ. ಜಿಲ್ಲೆ ಒಡೆಯೋದು ಬೇಡವೆಂದು ಶಾಸಕ ಆನಂದಸಿಂಗ್ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಸಿಟಿ ಬಸ್ ಶೆಲ್ಟರ್ ಕಾಮಗಾರಿ ಪರಿಶೀಲನೆ:

ನಗರ ಕೇಂದ್ರ ಬಸ್ನಿಲ್ದಾಣದ ಆವರಣದೊಳಗೆ ನಿಮರ್ಿಸಲಾಗುತ್ತಿರುವ ಸಿಟಿ ಬಸ್ ಶೆಲ್ಟರ್ ಕಾಮಗಾರಿಯನ್ನು ಶಾಸಕ ಸೋಮಶೇಖರರೆಡ್ಡಿ ಪರಿಶೀಲಿಸಿದರು.

ಎನ್ಇಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ಕಾಮಗಾರಿ ಗುಣಮಟ್ಟದಿಂದ ಕೈಗೊಳ್ಳಲು ಅವರು ನಿರ್ದೇಶನ ನೀಡಿದರು. ಇನ್ನೊಂದು ಬಾರಿ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.