ಲೋಕದರ್ಶನ ವರದಿ
ಬಳ್ಳಾರಿ 06: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆಯು ಬಳ್ಳಾರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಸ್ಟ್ರಾಂಗ್ ರೂಂಗಳು ಇರಿಸಲಾಗಿರುವ ಕಾಲೇಜಿನ ಸುತ್ತಲೂ ಪೊಲೀಸ್ ಬಿಗಿಬಂದೋಬಸ್ತ್ ಕಲ್ಪಿಸಲಾಗಿದೆ.
ವಿಜಯನಗರ ವಿಧಾನಸಭಾ ಕ್ಷೇತ್ರದ 247 ಮತಗಟ್ಟೆಗಳ ಮತಯಂತ್ರಗಳನ್ನು ಈ ಕಾಲೇಜಿನಲ್ಲಿ ಭದ್ರವಾಗಿಡಲಾಗಿದ್ದು, ಭದ್ರತಾ ಕೊಠಡಿ ಸುತ್ತ ವ್ಯಾಪಕ ಪೊಲೀಸ್ ಬಂದೊಬಸ್ತ್ ಮಾಡಲಾಗಿದೆ.
ಉಪ ಚುನಾವಣೆಯಲ್ಲಿ ಒಟ್ಟು ಶೇಕಡಾ 64.94 ರಷ್ಟು ಮತದಾನವಾಗಿದ್ದು ಚುನಾವಣಾ ಕಣದಲ್ಲಿದ್ದ ಬಿಜೆಪಿಯ ಆನಂದಸಿಂಗ್, ಕಾಂಗ್ರೆಸ್ ಪಕ್ಷದ ವೆಂಕಟರಾವ್ ಘೋರ್ಪಡೆ, ಜೆಡಿಎಸ್ ನ ಎನ್.ಎಂ.ನಭಿ ಸೇರಿದಂತೆ13 ಅಭ್ಯಥರ್ಿಗಳ ಭವಿಷ್ಯ ಡಿಸೆಂಬರ್ 9ರಂದು ಫಲಿತಾಂಶದ ಮೂಲಕ ಹೊರಬೀಳಲಿದೆ.
ಮತ ಎಣಿಕೆಗೆ ಸಂಬಂಧಿಸಿದ ಅಂತಿಮ ಹಂತದ ಸಿದ್ಧತೆಗಳನ್ನು ಹಾಗೂ ಮಾಧ್ಯಮ ಗ್ಯಾಲರಿ ನಿಮರ್ಾಣ, ಪಾಕಿರ್ಂಗ್ ವ್ಯವಸ್ಥೆ ಸೇರಿದಂತೆ ಇನ್ನೀತರ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಕುಲ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಆಯುಕ್ತರಾದ ಶೇಖ್ ತನ್ವೀರ್ ಅಸೀಫ್ ಹಾಗೂ ಅಧಿಕಾರಿಗಳು ಪರಿಶೀಲಿಸಿದರು.
ಮತ ಎಣಿಕೆ ನಡೆಯುವ ಡಿ.09 ರಂದು ನಗರ ವ್ಯಾಪ್ತಿಯಲ್ಲಿ ಕಲಂ 144ರಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ನಕುಲ್ ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆಯು ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಕನರ್ಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 35, ದಂಡ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 144 ಮತ್ತು ದಂಡ ಪ್ರಕ್ರಿಯಾ ಸಂಹಿತೆ (ತಿದ್ದುಪಡಿ) 2005ರ ಸೆಕ್ಷನ್ 144 (ಎ)ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಗರ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಅವಧಿಯಲ್ಲಿ ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಪಟಾಕಿ ಸಿಡಿಸುವುದು, ವಿಜಯೋತ್ಸವ, ಮೆರವಣಿಗೆ, ರಾಜಕೀಯ ಸಭೆ, ಸಮಾರಂಭ, ವಾಹನ ಜಾಥಾ/ಯರ್ಾಲಿ ಮುಂತಾದ ಯಾವುದೇ ಚಟುವಟಿಕೆ ನಡೆಸುವುದು, ಸ್ಪೋಟಕ/ದಹನ ವಸ್ತುಗಳು, ಮಾರಕ ಆಯುಧಗಳನ್ನು ಹೊಂದಿರುವು ಅಥವಾ ಹಿಡಿದು ಓಡಾಡುವುದು ಮುಂತಾದವುಗಳನ್ನು ನಿಷೇಧಿಸಲಾಗಿದೆ. ಮತ ಎಣಿಕಾ ಕೇಂದ್ರವಾದ ಸಕರ್ಾರಿ ಪಾಲಿಟೇಕ್ನಿಕ್ ಕಾಲೇಜು ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯ ಪ್ರದೇಶ ಸಂಪೂರ್ಣ ನಿಬರ್ಂಧಿತ ಪ್ರದೇಶವಾಗಿರುತ್ತದೆ. ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ತಂಗುವಿಕೆ, ಧ್ವನಿವರ್ಧಕ ಬಳೆಯನ್ನು ನಿಷೇಧಿಸಲಾಗಿದೆ.
ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಐಪಿಸಿ 188ರ ಅಡಿ ಹಾಗೂ ಇತರೆ ಕಾನೂನು ಕಾಯ್ದೆ ಅಡಿ ಕ್ರಮಕೈಗೊಳ್ಳಲಾಗುವುದು.
ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು153951ಜನರು ಮತದಾನ ಚಲಾಯಿಸಿದ್ದಾರೆ(ಪುರುಷ- 116080ರಲ್ಲಿ 76043,ಮಹಿಳಾ-120909ರಲ್ಲಿ 77902 , ಇತರೇ 62ರಲ್ಲಿ 6ಜನರು ಮತ ಚಲಾಯಿಸಿದ್ದಾರೆ). ಒಟ್ಟು ಶೇಕಡಾ 64.94 ರಷ್ಟು ಮತದಾನವಾಗಿದೆ.
ಸೋಮವಾರದ ಫಲಿತಾಂಶಕ್ಕೆ ಜಿಲ್ಲೆಯ ಜನರು ಕಾತುರರಾಗಿದ್ದು, ವಿಜಯಲಕ್ಷ್ಮೀ ಯಾರಿಗೆ ಒಲಿಯಲಿದ್ದಾಳೆ ಎಂಬುದು ಕಾದು ನೋಡಬೇಕಿದೆ.