ಲೋಕದರ್ಶನ ವರದಿ
ಬಳ್ಳಾರಿ 11: ರಾಘವ ಮೆಮೋರಿಯಲ್ ಅಸೋಸಿಯೇಷನ್ ವತಿಯಿಂದ ರಾಘವ ಕಲಾ ಮಂದಿರದಲ್ಲಿ ಡಾ. ಜೋಳದರಾಶಿ ದೊಡ್ಡನಗೌಡರ 25ನೇ ಪುಣ್ಯತಿಥಿ ಸ್ಮರಣೆ ಅಂಗವಾಗಿ ಅನ್ನಮಾಚಾರ್ಯರ ಕಾರ್ಯಕ್ರಮ ಆಚರಣೆ ಮಾಡಲಾಯಿತು.
ಬಳ್ಳಾರಿ ರಾಘವರವರ ಶಿಷ್ಯರಾಗಿ ಅವರೊಂದಿಗೆ ಕನ್ನಡ-ತೆಲುಗು ನಾಟಕಗಳಲ್ಲಿ ಅಭಿನಯಸಿ, ರಾಘವರಿಂದ ಮೆಚ್ಚುಗೆ ಗಳಿಸಿದ ದೊಡ್ಡನಗೌಡರು ಗಮಕ ಕಲಾನಿಧಿಯಾಗಿ, ನಾಟಕ ಕಲೆಯಿಂದ ಬಳ್ಳಾರಿಗೆ ಕೀತರ್ಿಯನ್ನು ತಂದಿದ್ದಾರೆ.
ಅವರು ಬರೆದ ನಾಟಕಗಳಲ್ಲಿ ತಾವೇ ಅಭಿನಯಿಸಿ ನಾಟಕಗಳು ಅಭ0ು, ಸಾಯದವನ ಸಮಾಧಿ, ಕಬೀರದಾಸ, ಕನಕದಾಸ ಮುಂತಾದವು ನಟಿಸಿದರು. ಅವರು ಕನ್ನಡದಲ್ಲಿ ಬರೆದ ಶೂನ್ಯ ಸಂಪಾದನೆ ಗ್ರಂಥವನ್ನು ಅಂದ್ರ ವಿಶ್ವ ವಿದ್ಯಾನಿಲಯ ತೆಲುಗು ಭಾಷೆಗೆ ಅನುವಾದಿಸಿದೆ. ಗುಲ್ಬರ್ಗ ವಿಶ್ವ ವಿದ್ಯಾನಿಲಯ ಗೌಡರಿಗೆ ಡಾಕ್ಟರೆಟ್ ನೀಡಿ ಗೌರವಿಸಿದೆ. ಗೌಡರು ರಂಗಭೂಮಿಯ ಶಾಶ್ವತ ಸಂಪದವೆಂದು ಸಂಸ್ಥೆಯ ಕಾರ್ಯದರ್ಶಿ ಏನ್.ಬಸವರಾಜ ರವರು ನುಡಿದರು. ಆರಂಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಕೆ.ಚನ್ನಪ್ಪ, ಅಧ್ಯಕ್ಷ ಕೆ. ಕೋಟೆಶ್ವರಾವು, ಉಪಾದ್ಯಕ್ಷ ರಮೇಶಗೌಡ ಪಾಟೀಲ, ಕಾರ್ಯದಶರ್ಿ ಏನ್.ಬಸವರಾಜ, ಖಜಾಂಚಿ ಪಿ.ಧನುಂಜಯ, ಸಹ ಕಾರ್ಯದಶರ್ಿ ಕೆ.ಪಂಪನಗೌಡ, ಜಿ.ಅರ್.ವೆಂಕಟೆಶುಲು, ಕೆ.ಕ್ರಿಷ್ಣ,ಕೆ. ಶ್ಯಾಮ ಸುಂದರ, ಟಿ.ಜಿ.ವಿಠಲ,ನರ್ಸಿಪಲ್ಲೆ ನಾಗರಾಜ, ವಿ.ಕೆ. ನಾಯ್ಡು, ಸಿ.ಎ.ಚೌದರಿ, ಕೆ. ಚಂದ್ರಶೇಖರ, ಎಂ.ರಾಮಾಂಜಿನೇಯಲು ಮತ್ತು ಗೌಡರ ಕುಂಟಬದವರಿಂದ ಗೌಡರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಮರ್ಪವಾಯಿತು
ತದನಂತರ ಅನ್ನಮಾಚಾರ್ಯ ಕೀರ್ತನೆಗಳನ್ನು ಶ್ರೇಷ್ಟ ಗಾಯಕಿ ಪದ್ಮಾವತಿ ಬಸವರಾಜ, ಸುದ ಮಂಜುನಾಥ, ಭಾರತಿ, ಭ್ರಮರಾಂಬ, ವಿದ್ಯಾ, ನಾಗಲಕ್ಷ್ಮಿ, ವೀಣಾ ಅದೋನಿ, ಎಲ್ಲರು ಸೇರಿ ಹಾಡಿದ ಕೀರ್ತನೆಗಳು ಸಬಿಕರನ್ನು ರಂಜಿಸಿದವು. ಈ ಕೀತರ್ಿನೆಗಳಿಗೆ ಟಿ.ಟಿ.ಡಿ.ಯ ಬಿ.ಕೆ. ಸುಧಾಕರ್ ಮೃದಂಗ,ಬಿ,ರಮಣಯ್ಯ ವಾಯಿಲೀನ್ ಹಾಗೂ ಸಾಯಿಚರಣ ಘಟಂ ವಾದ್ಯಗಳನ್ನು ನುಡಿಸಿದರು.