ಬಳ್ಳಾರಿ: ಆರ್.ಟಿ.ಓ ಮೇಲೆ ಎಸಿಬಿ ದಾಳಿ ಪ್ರಕರಣ ದಾಖಲು

ಲೋಕದರ್ಶನ ವರದಿ

ಬಳ್ಳಾರಿ 27: ನಗರದ ಕಂಟೊನ್ಮೆಂಟ್ ಏರಿಯಾದಲ್ಲಿರುವ ಆರ್.ಟಿ.ಓ ಕಾಯರ್ಾಲಯದ ಮೇಲೆ ಎಸಿಬಿ ಅಧಿಕಾರಿಗಳು ಸೋಮುವಾರ 12 ಗಂಟೆಗೆ ದಾಳಿ ನಡೆಸಿದರು. ಮುಖ್ಯವಾಗಿ ಅಲ್ಲಿ ವ್ಯೆವಹಾರ ಮಾಡುತ್ತಿರುವ 33 ಏಜೆಂಟರ ಮೇಲೆಯೂ ದಾಳಿ ಮಾಡಿ ಅವರಿಂದ 3,94,310 ರೂಗಳನ್ನು ವಶ ಪಡಿಸಿಕೊಂಡಿದ್ದಾರೆ. 

ಅನಂತರ ಹಗರಿ ಚೆಕ್ಪೋಸ್ಟ್ನಲ್ಲಿಯೂ ಸಹ 1, ಲಕ್ಷ 96, ಸಾವಿರ ಹಣವನ್ನು ಹಾಗೂ ಆರ್.ಟಿ.ಓ ಕಾಯರ್ಾಲಯಕ್ಕೆ ಸಂಬಂಧಪಟ್ಟ ಹಣ 3 ಲಕ್ಷ 41 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದು ಅಲ್ಲಿ ವ್ಯೆವಹಾರ ನಡೆಸುತ್ತಿದ್ದ 33 ಏಜೆಂಟರ್ ಬಳಿ 50 ರಿಂದ 60 ಅನಧರ್ಿಕೃತ ಪರವಾಣಿಗೆಯನ್ನು ವಶಡಿಸಿಕೊಂಡು ಮುಖ್ಯ ಏಜೆಂಟರಾದ ಪ್ರಕಾಶ, ಖಾದರ್, ಅಬ್ದುಲ್, ಪಾಲಾಕ್ಷಿ, ಸುರೇಶ ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರ್.ಟಿ.ಓ ಇನ್ಸ್ಪೆಕ್ಟ್ರ್ ಹೆಮಂತಕುಮಾರ ಅವರ ಮೇಲೆಯೂ ಪ್ರಕರಣ ದಾಖಲಿಸಿ ಮುಂದಿನ ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.