ಬೆಳಗಾವಿ: ರಹಿತ ವ್ಯವಹಾರದಿಂದ ಸಾಮಾಜಿಕ ಅಭಿವೃದ್ದಿಗೆ ನೆರವು ಪ್ರೊ. ಏಕಾಂತಯ್ಯ ಹೇಳಿಕೆ

ಬೆಳಗಾವಿ 11:  ನಗರದ ಪ್ರತಿಷ್ಠಿತ ಕೆ.ಎಲ್.ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ (ಸ್ವಾಯತ್ತ)  ಎನ್.ಎಸ್.ಎಸ್  (ಓಖಖ)  ಘಟಕದ  ವಿಶೇಷ  ವಾಷರ್ಿಕ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವನ್ನು ದತ್ತು ಗ್ರಾಮವಾದ ಮಾರೀಹಾಳ  ಗ್ರಾಮದಲ್ಲಿ ದಿ. 08ರಂದು  ಆಯೋಜಿಸಲಾಗಿತ್ತು.

"ನಗದು ರಹಿತ ವ್ಯವಹಾರಗಳು ಮತ್ತು ಅದರ ಉಪಯೋಗ" ಗೋಷ್ಠಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್.ಎಲ್.ಎಸ್. ಕಾಲೇಜಿನ, ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಪ್ರೊ. ಏಕಾಂತಯ್ಯ ಸ್ವಾಮಿ,  ಅವರು ಮಾತನಾಡುತ್ತಾ, ನಾಗರಿಕರು ನಗದುರಹಿತ ವ್ಯವಹಾರ ಮಾಡುವುದನ್ನು ತಿಳಿದುಕೊಳ್ಳಬೇಕು.  ಡೆಬಿಟ್ ಕಾರ್ಡ ಮತ್ತು ಯು.ಪಿ.ಆಯ್ ಮುಖಾಂತರ ದಿನನಿತ್ಯದ ಹಣಕಾಸು ವ್ಯವಹಾರಗಳನ್ನು ರೂಢಿಸಿಕೊಳ್ಳಬೆಕು.  ನಗದು ರಹಿತ ವ್ಯವಸ್ಥೆಯ ತಂತ್ರಾಂಶದಲ್ಲಿ ಸಾಕಷ್ಟು ಅಭಿವೃದ್ದಿಯಾಗಿರುತ್ತದೆ.  ನಾಗರಿಕರು ನಗದುರಹಿತ ವ್ಯವಹಾರ ಅಳವಡಿಸಿಕೊಂಡರೆ ಕಪ್ಪುಹಣದ ಬಳಕೆ ಕಡಿಮೆಯಾಗುತ್ತದೆ.  ನಗದು ರಹಿತ ವ್ಯವಹಾರದಿಂದ ಸಾಮಾಜಿಕ ಅಭಿವೃದ್ದಿಗೆ ನೇರವಾಗುತ್ತದೆ ಎಂದು ನುಡಿದರು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾರಿಹಾಳ ಗ್ರಾಮ ಪಂಚಾಯತಿ ಸದಸ್ಯ ಸಂಜಯ ಚಾಟೆ ಅವರು ಮಾತನಾಡುತ್ತಾ,  ಸ್ವಯಂ ಸೇವಕರ ಸೇವೆಯನ್ನು ಗ್ರಾಮದ ಸಮಸ್ತ ಜನರು ಸ್ಮರಿಸುತ್ತಾರೆ.  ಶಿಬಿರಾಥರ್ಿಗಳಿಗೆ ಸಂಪೂರ್ಣ ಸಹಾಯ ಸಹಕಾರ ನೀಡುತ್ತೇವೆ ಎಂದು ನುಡಿದರು. ಕೀತರ್ಿ ಹಾಗೂ ಸಂಗಡಿಗರು ಎನ್.ಎಸ್.ಎಸ್. ಗೀತೆಹಾಡಿದರು. ಸೌಮ್ಯಾ ಪಾಟೀಲ ಸ್ವಾಗತಿಸಿದರು. ಕುಮಾರ ಸಚಿನ ವಂದಿಸಿದರು. ಕುಮಾರಿ. ಶೀಲ್ಪಾ ಕಾರ್ಯಕ್ರಮವನ್ನು ನಿರೂಪಿಸಿದರು.  ಈ ಸಮಾರಂಭದಲ್ಲಿ  ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಪ್ರೊ. ಎಸ್.ಎಸ್. ಅಬ್ಬಾಯಿ ಹಾಗೂ ಗ್ರಾಮದ ನಾಗರಿಕರು ಮತ್ತು ಶಿಬಿರದ ಸ್ವಯಂ ಸೇವಕರು ಉಪಸ್ಥಿತರಿದ್ದರು.