ಲೋಕದರ್ಶನ ವರದಿ
ಶಿರಹಟ್ಟಿ 25: ಪ್ರತೀಯೊಂದು ಪ್ರಗತಿ ಪರಿಶೀಲನಾ ಸಭೆಗಳಿಗೆ ಮುಂಚಿತವಾಗಿಯೇ ಸಭೆಗೆ ಹಾಜರಿರುವಂತೆ ಪ್ರತೀಯೊಂದು ಇಲಾಖೆಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚನಾ ಪತ್ರವನ್ನು ನೀಡಿದ್ದರೂ ಸಹ ನೀಡಿದ ನೋಟೀಸ್ಗೆ ನಿರ್ಲಕ್ಷ್ಯ ವಹಿಸಿ ಗೈರು ಹಾಜರಾಗುವ ಅಧಿಕಾರಿಗಳೀಗೆ ಹಾಗೂ ತಡವಾಗಿ ಬೇಕು ಬೇಡವೆಂದು ಹಾಜರಾಗುವ ಅಧಿಕಾರಿಗಳಿಗೆ ನಿದರ್ಾಕ್ಷಿಣ್ಯವಾಗಿ ನೋಟೀಸ್ ಜಾರಿ ಮಾಡಿ ಕಾನೂನು ಕ್ರಮ ಜರುಗಿಸಿ ಎಂದು ಇಓ ನಿಂಗಪ್ಪ ಓಲೇಕಾರ ಅವರು ಸಭೆಯ ಕಾರ್ಯದಶರ್ಿ ಎಸ್ ಬಿ ಹರ್ತಿ ಅವರಿಗೆ ಆದೇಶ ಮಾಡಿದರು.
ಅವರು ತಾಲೂಕ ಪಂಚಾಯ್ತಿ ಸಭಾ ಭವನದಲ್ಲಿ ನಡೆದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡುತ್ತಾ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯ ಅಡಿಯಲ್ಲಿ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡಿಸಿಕೊಂಡು ಮತ್ತು ಅನುದಾನ ಮರಳಿ ಹೋಗದಂತೆ ಶೇ 100 ರಷ್ಟು ಗುರಿ ಸಾಧಿಸಬೇಕೆಂದು ತಾಕೀತು ಮಾಡಿದರು.
ಅಂಬೇಡ್ಕರ ನಿಗಮದಿಂದ ತಾಲ್ಲೂಕಿಗೆ 75ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅಜ್ಞಾತ ಸ್ಥಳದಲ್ಲಿರುವ ಕಚೇರಿಯಲ್ಲಿ ಇದ್ದು ಕಾರ್ಯನಿರ್ವಹಿಸಿದರೆ ಸಂಬಂದಪಟ್ಟವರಿಗೆ ಯಾವುದೇ ರೀತಿಯ ಮಾಹಿತಿ ಸಿಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಯೊಂದು ಗ್ರಾಮ ಪಂಚಾಯ್ತಿಗೆ ಹೋಗಿ ಇಲಾಖೆಯಲ್ಲಿರುವ ಯೋಜನೆಗಳ ಕುರಿತು ಪ್ರಚಾರ ಮಾಡಬೇಕು ಎಂದು ತಾಲ್ಲೂಕ ಅಧಿಕಾರಿ ವಿಕಾಸ ನಾಯಕ ನಿದರ್ೇಶಿಸಿದರು.
ಜಿಲ್ಲಾ ಪಂಚಾಯ್ತಿ ಸದಸ್ಯ ದೇವಕ್ಕ ಲಮಾಣಿ ಲೋಕೋಪಯೋಗಿ ಇಲಾಖೆ ತಾಲ್ಲೂಕಿನಾದ್ಯಂತ ನಡೆಯುವ ಕಾಮಗಾರಿಗಳ ಕುರಿತು ಯಾವುದೇ ರೀತಿಯ ಮಾಹಿತಿ ಲಭಿಸುವುದಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆಸಿದ ತಾಪಂ ಇಓ ನಿಂಗಪ್ಪ ಓಲೇಕಾರ ತಾಲ್ಲೂಕಿನಲ್ಲಿ ನಡೆಯುವ ಪ್ರತಿ ಕಾಮಗರಿಗಳನ್ನು ಆಯಾ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ತಾಲ್ಲೂಕ ಪಂಚಾಯ್ತಿ ಸದಸ್ಯರ ಗಮನಕ್ಕೆ ತರಬೇಕೇಂದು ಆದೇಶಿಸಿದರು.
ಪಿ.ಎಮ್.ಜಿ.ಎಸ್.ವಾಯ್ ಇಲಾಖೆಯಿಂದ ತಾಲ್ಲೂಕಿಗೆ 2017-18ರಲ್ಲಿ ಒಟ್ಟು ಎಸ್.ಸಿ.ಪಿ 674.01ಲಕ್ಷ ಬಿಡುಗಡೆಗೊಂಡಿದ್ದು ಅದರಲ್ಲಿ 618ಲಕ್ಷ ಬಳಸಿಕೊಳ್ಳಲಾಗಿದೆ. ಟಿ.ಎಸ್.ಪಿ ಒಟ್ಟು 255ಲಕ್ಷ ಬಿಡುಗಡೆಗೊಂಡಿದ್ದು, ಅದರಲ್ಲಿ 211.83ಲಕ್ಷ ಖಚರ್ಾಗಿದೆ ಎಂದು ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಎಮ್.ಎಸ್.ದಿವಟರ ಮಾಹಿತಿ ನೀಡಿದರು. ಸಭೆಗೆ ತಡವಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಾಪಂ ಇಓ ನಿಂಗಪ್ಪ ಓಲೇಕಾರ ತಿಳಿಸಿದರು.
ನಂತರ ತಾಪಂ ಸದಸ್ಯೆ ಹುಸೇನಬಿ ಅತ್ತೀಗೇರಿ ಅವರು, ದಿನಂಪ್ರತಿ ಸಾವಿರಾರು ಜನ ವೃದ್ಧರು, ಅಂಗವಿಕಲರು, ಗಭರ್ಿಣಿಯರು ಹಾಗೂ ಸಾರ್ವಜನಿಕರು ಬಂದು ಹೋಗುತ್ತಿದ್ದು ಮೊದಲು ತಾಲೂಕಾ ಪಂಚಾಯಿತಿಗೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ನಿದರ್ೇಶಕ ಎಸ್.ಬಿ.ಹತರ್ಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಗಿರಿಜವ್ವ ಲಮಾಣಿ, ಉಪಾಧ್ಯಕ್ಷೆ ಹುಸೇನಬಿ ಅತ್ತೀಗೇರಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ದೇವಕ್ಕ ಲಮಾಣಿ, ತಾಪಂ ಸದಸ್ಯೆ ಪವಿತ್ರಾ ಶಂಕೀನದಾಸರ ಇದ್ದರು.