ಬೆಳಗಾವಿ ಜು.3: ಕ್ಯಾಂಪ್ ಪೊಲೀಸ್ ಠಾಣೆ ಆರೋಪಿಗೆ ಕೊರೊನಾ ಸೋಂಕು ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ದಂಡು ಮಂಡಳಿ ಸಿಇಓ ಬರ್ಚೇಸ್ವಾ ನೇತೃತ್ವದಲ್ಲಿ ಪೊಲೀಸ್ ಠಾಣೆಯನ್ನು ಸ್ಯಾನಿಟೈಸೇಶನ್ ಕಾರ್ಯ ಭರದಿಂದ ಸಾಗಿದೆ.
ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದ ದರೋಡೆಕೋರನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದ ಕ್ಯಾಂಪ್ ಪೊಲೀಸ್ ಠಾಣೆ ಸಿಬ್ಬಂದಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಆರೋಪಿ ಜೊತೆ ಸಂಪರ್ಕ ಹೊಂದಿದ್ದ ಪೊಲೀಸ ಸಿಬ್ಬಂದಿಗಳು ತೀವ್ರ ಆತಂಕಿತರಾಗಿದ್ದಾರೆ. ಇನ್ನು ಸೋಂಕಿನ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ದಂಡು ಮಂಡಳಿ ಸಿಇಓ ಬರ್ಚೇಸ್ವಾ ನೇತೃತ್ವದಲ್ಲಿ ಇಡೀ ಪೊಲೀಸ್ ಠಾಣೆಯನ್ನು ಸ್ಯಾನಿಟೈಸೇಶನ್ ಮಾಡಲಾಗಿದೆ.
ಈ ವೇಳೆ ದಂಡು ಮಂಡಳಿ ಸಿಇಓ ಬರ್ಚೇಸ್ವಾ, ಡಾ.ಆನಿಗೋಳ, ಸಚಿನ್ ಸುತಾರ್, ಕೊಂಡಯ್ಯ ದಾಸ್, ಸಂತೋಷ ಅಗಸಿಮನಿ, ಕುಲದೀಪ್ ಶರ್ಮಾ ಭಾಗಿಯಾಗಿದ್ದರು.