ಅಂಕೋಲಾ : ಇತ್ತೀಚೆಗೆ ದಾಂಡೇಲಿಯಲ್ಲಿ ಹತ್ಯೆಯಾದ ಮೂಲತಃ ಅಂಕೋಲಾ ತಾಲೂಕಿನ ಸೂವರ್ೆ ಗ್ರಾಮದ ಅಜೀತ ಎಂ.ನಾಯಕ ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸಂತಾಪ ಸೂಚಕ ಸಭೆಯನ್ನು ಆಯೋಜಿಸಿಲಾಗಿತ್ತು.
ಶಾಂತಿಪ್ರಿಯ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೊಲೆ, ಹತ್ಯೆಗಳಾ ಗುತ್ತಿರುವುದು ಖಂಡನೀಯ. ದ್ವೇಷಕ್ಕೆ ಕೊಲೆಯೇ ಉತ್ತರವಲ್ಲಾ. ಏನೇ ಸಮಸ್ಯೆ ಭಿನ್ನಾಭಿಪ್ರಾಯವಿದ್ದರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು. ಸಾಧ್ಯವಾಗದೇ ಇದ್ದಾಗ ಪೊಲೀಸ ಇಲಾಖೆ ಇಲ್ಲವೇ ನ್ಯಾಯಾ ಲಯದ ಮೂಲಕ ಪ್ರಕರಣವನ್ನು ಇತ್ಯರ್ಥ ಮಾಡಿಕೊಳ್ಳಬೇಕು. ರಾಕ್ಷಸಿ ವೃತ್ತಿಯ ಪಾಪಿಗಳು ಮಾತ್ರ ಕೊಲೆ ಯಂತಹ ಹೇಯ ಕೃತ್ಯ ನಡೆಸಿ ತಮ್ಮ ಹೇಡಿತನ ತೋರಿಸುತ್ತಾರೆ. ಕೊಲೆಗಡುಕರಿಗೆ ಕಠಿಣ ಶಿಕ್ಷೆಯಾಗಲಿ ಮತ್ತು ಅಜೀತ ನಾಯಕ ಕುಟುಂಬ ವರ್ಗದವರಿಗೆ ದೇವರು ದುಖಃವನ್ನು ಸಹಿಸುವ ಶಕ್ತಿ ನೀಡಲಿ ಎಂದು ಸಭೆಯಲ್ಲಿ ಉಪಸ್ಥಿತರಿದ್ದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಂಕೋಲಾ ತಾಲೂಕಿನವನಾಗಿದ್ದರೂ ದಾಂಡೇಲಿ ಯಲ್ಲಿ ತನ್ನ ಬದುಕು ಕಟ್ಟಿಕೊಂಡು ದಾಂಡೇಲಿಯ ಇತಿಹಾಸದ ಪುಟಗಳಲ್ಲಿ ಕೋಟರ್ು ಹಾಗೂ ತಾಲೂಕು ರಚನೆಗೆ ಶ್ರಮಿಸಿ ತನ್ನ ನಾಯಕತ್ವದ ಗುಣಗಳ ಮೂಲಕ ದಾಖಲೆಯಾದ ಅಜೀತ ನಾಯಕರು ಸದಾ ಚಿರಸ್ಮರಣೀಯರೆನಿಸಿದ್ದಾರೆ. ಅವರ ಹುಟ್ಟು- ಬಾಲ್ಯ ಶಾಲೆ ಕಾಲೇಜು ದಿನಗಳಿಂದ ಹಿಡಿದು ಸಾವಿನಂಚಿನವರೆಗಿನ ವಿವಿಧ ಘಟನೆಗಳನ್ನು ಆಪ್ತರು, ಗುರುಗಳು, ಹಿತೈಷಿಗಳು ಮತ್ತು ಕುಟುಂಬಸ್ಥರು ಸ್ಮರಿಸಿಕೊಂಡರು.
ಮಾದೇವ ಮಾಸ್ತರ ಸೂವರ್ೆ, ವಿಷ್ಣು ನಾಯ್ಕ ಅಂಬಾರಕೋಡ್ಲ, ದೇವಾನಂದ ಗಾಂವಕರ ಬಾಸಗೋಡ, ಎನ್. ಆರ್. ನಾಯಕ ಹೊನ್ನಾವರ, ಎನ್.ವಿ.ನಾಯಕ ಭಾವಿಕೇರಿ, ವಸಂತ ನಾಯಕ ಶೀಳ್ಯ, ಗೋವಿಂದ ನಾಯಕ ಲಕ್ಷ್ಮೇಶ್ವರ, ವಿನೋದ ನಾಯಕ ಬಾಸಗೋಡ, ಸುಜಾತ ಗಾಂವಕರ ಅಗ್ರಗೋಣ, ಅನಂತ ತಲಗೇರಿ, ಪಾಂಡುರಂಗ ಗೌಡ, ಮಹಾಂತೇಶ ರೆವಡಿ ಮತ್ತಿತರರು ಮಾತನಾಡಿ ಹತ್ಯೆಯನ್ನು ಖಂಡಿಸಿ ಸಂತಾಪ ಸೂಚಿಸಿದರು. ಸಭೆಯ ಪೂರ್ವದಲ್ಲಿ ಮೌನಾಚರಣೆ ಮೂಲಕ ಅಜೀತ ನಾಯಕರಿಗೆ ಶ್ರದ್ಧಾಂಜಲಿ ಸಲಿಸಲಾ ಯಿತು. ಜಗದೀಶ ನಾಯಕ ಹೊಸ್ಕೇರಿ ನಿರೂಪಿಸಿದರು. ಉಲ್ಲಾಸ
ಹುದ್ದಾರ ವಂದಿಸಿದರು.