ಧಾರವಾಡ 07: ಪ್ರಾಯೋಗಿಕವಾಗಿ ಜೀವನವನ್ನು ನೋಡಬೇಕು. ಅದು ಹಿತವಚನಗಳಿಂದ ರೂಪಿತವಾಗುವುದಿಲ್ಲ. ಜವಾಬ್ದಾರಿ ಇದ್ದಾಗ ಮಾತ್ರ ನಮ್ಮ ಸಾಮಥ್ರ್ಯದ ಅರಿವೂ ನಮಗಾಗುವುದು. ಎಂದು ಮುಖ್ಯ ಅತಿಥಿಗಳಾದ ಖ್ಯಾತ ಕೊಳಲು ವಾದಕ ಹರೀಶ ಕುಲಕರ್ಣಿಹೇಳಿದರು.
ಕವಿವಿಯಲ್ಲಿನ ಸೆನೆಟ್ ಸಭಾಂಗಣದಲ್ಲಿ ನಡೆದ ಐದನೇ ವಲಯದ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಜವಾಬ್ದಾರಿ ಜ್ಯೋತಿ ಸ್ವರೂಪವಾದದ್ದು. ಅದು ಬೇರೆಯವರಿಗೆ ಬೆಳಕಾಗುವಂತಿರಬೇಕು. ಗುರುವನ್ನು ಪ್ರತಿಯೊಬ್ಬರಲ್ಲಿಯೂ ಕಾಣುವುದೆಂದರೇ ಅವರಲ್ಲಿನ ಒಂದೊಂದು ಒಳ್ಳೆಯ ಆಂಶವನ್ನು ತೆಗೆದುಕೊಳ್ಳಬೇಕು ಎಂದರ್ಥ.
ಕವಿವಿಯ ಐದನೇ ವಲಯದ ಯುವಜನೋತ್ಸವ ಅವಕಾಶಗಳ ಮಹಾಪೂರವೇ ಸರಿ. ಕವಿವಿಯ ವಿದ್ಯಾರ್ಥಿ ಯುವಜನೋತ್ಸವ ಮತ್ತು ಫೆಬ್ರುವರಿ 3 ರಿಂದ 7ರವರೆೆಗೆ ರಾಷ್ಟ್ರೀಯ ಯುವಜನೋತ್ಸವ ಉತ್ತರ ಪ್ರದೇಶದ ನೋಯ್ಡಾದ ಆಮ್ಟಿ ವಿವಿಯಲ್ಲಿ ನಡೆಯಲಿದೆ ಎಂದು ಕವಿವಿಯ ವಿದ್ಯಾರ್ಥಿ ಕಲ್ಯಾಣ ನಿದರ್ೆಶನಾಲಯದ ನಿದೇಶಕ ಪ್ರೊ. ಆರ್.ಆರ್ ನಾಯ್ಕ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಾ ನಿಖಾಯ ವಿಭಾಗದ ಮುಖ್ಯಸ್ಥ ಪ್ರೊ. ಟಿ. ಎಂ ಭಾಸ್ಕರ್ ಸ್ಪರ್ಧಾರ್ಥಿ ಗಳು ಕಾಯ, ವಾಚ, ಮನಸಾ ತಮ್ಮ ಕೌಶಲ್ಯಗಳನ್ನು ಅಳವಡಿಸಿಕೊಂಡು ಸ್ಪಧರ್ೆಯಲ್ಲಿ ಭಾಗವಹಿಸಿದಾಗ ಮಾತ್ರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದವರೆಗೂ ಸಾಧನೆ ಮಾಡಬಹುದು ಎಂದರು. ಕಾರ್ಯಕ್ರಮದಲ್ಲಿ ಜಿಮ್ಖಾನ ವಿಭಾಗದ ಅಧ್ಯಕ್ಷ ಪ್ರೊ. ಷಣ್ಮುಖ ಕಾಂಬಳೆ, ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ. ಎ.ಎಂ ಕಡಕೋಳ, ಸಾಂಸ್ಕೃತಿಕ ವಿಭಾಗದ ಉಪಾಧ್ಯಕ್ಷೆ ಡಾ. ತ್ರಿವೇಣಿ ಎಸ್ ಮತ್ತು ಕವಿವಿಯ ಜಿಮ್ಖಾನ ವಿದ್ಯಾಥರ್ಿ ಪ್ರಧಾನ ಕಾರ್ಯದಶರ್ಿ ಮಂಜುಳಾ ಕುಂಬಾರ ಉಪಸ್ಥಿತರಿದ್ದರು.
2019-20 ನೇ ಸಾಲಿನ ಜಿಮ್ಖಾನದ ವಿವಿಧ ವಿಭಾಗದ ವಿದ್ಯಾರ್ಥಿ ಕಾರ್ಯದರ್ಶಿ ಗಳಿಗೆ ಜಿಮ್ಖಾನ ವಿಭಾಗದ ಅಧ್ಯಕ್ಷ ಪ್ರೊ. ಷಣ್ಮುಖ ಕಾಂಬಳೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಸ್ವಾಗತ ಮತ್ತು ಅತಿಥಿ ಪರಿಚಯವನ್ನು ಸಾಂಸ್ಕ್ರೃತಿಕ ವಿಭಾಗದ ಉಪಾದ್ಯಕ್ಷೆ ಡಾ. ತ್ರಿವೇಣಿ ಎಸ್ ಮಾಡಿದರು.