ಕಾವಿಧಾರಿಗಳಲ್ಲಿ ದೇವರನ್ನು ಕಾಣುವ ದೇಶವಿದು. ಸ್ವಾಮೀಜಿಗಳನ್ನು ನಡೆದಾಡುವ ದೇವರು ಅಂತ ಸಂಭೋದಿಸುತ್ತಾರೆ. ‘ಹರ ಮುನಿದರೆ ಗುರು ಕಾಯುವನು, ಗುರು ಮುನಿದರೆ ಹರ ಕಾಯಲಾರ’ ಎಂಬ ಮಾತಿದೆ. ಅಂತಹ ಗುರುಗಳಿಗೆ ದೇವರ ಸ್ಥಾನ ಕೊಟ್ಟು ಅವರನ್ನು ಪೂಜಿಸುತ್ತೇವೆ.
ಶ್ರೀಗಳೆಂದರೆ ಸಾಕ್ಷಾತ್ ಪರಮಾತ್ಮನ ಸ್ವರೂಪ ಅಂತ ನಂಬಿ ಅವರು ಹಾಕಿ ಕೊಟ್ಟಂತಹ ಮಾರ್ಗದಲ್ಲಿ ನಡೆಯುತ್ತಾರೆ ಜನ. ಈ ದೇಶದ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಎಲ್ಲರೂ ಕೂಡಾ ಶ್ರೀಗಳ ಮುಂದೆ ತಲೆ ಬಾಗುತ್ತಾರೆ. ‘ಕಾವಿ ತೊಟ್ಟವರು ಸರ್ವಶ್ರೇಷ್ಠ ತ್ರಿಗುಣಾತೀತ, ಅರಿಷಡ್ವರ್ಗಗಳನ್ನೂ ತ್ಯಜಿಸಿದವರು ಅನ್ನೊ ಮಾತಿದೆ. ಕಾಮ, ಕ್ರೋಧ, ಮಧ, ಲೋಭ, ಮೋಹ, ಮಾತ್ಸರ್ಯ ಇವೆಲ್ಲವನ್ನೂ ತ್ಯಜಿಸಿದ ಬಳಿಕವೇ ಆತ ಈ ಶ್ರೇಷ್ಠ ಗುರು ಪೀಠವನ್ನು ಎರಿರುತ್ತಾನೆ.
ಹಾಗಂತ ಜನರು, ಇವರು ಕೇವಲ ಕಾವಿ ಹಾಕಿಕೊಂಡಿದ್ದಾರೆಂಬ ಕಾರಣಕ್ಕೆ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಬದಲಾಗಿ ಆ ಸ್ವಾಮೀಜಿಯ ಸನ್ನಡತೆ, ಸರ್ವ ಸಂಘ ಪರಿತ್ಯಾಗದ ಗುಣಗಳು, ಅವರ ಪ್ರಾಮಾನಿಕ ಸೇವೆ, ಪ್ರಮುಖವಾಗಿ ತಾವು ಹಾಕಿದ ಕಾವಿಯನ್ನು ತಾವೆಷ್ಟು ಗೌರವಿಸುತ್ತಾರೆ! ಎಂಬಿತ್ಯಾದಿಯನ್ನೆಲ್ಲ ಗಮನಿಸಿಯೇ ಆ ಸ್ವಾಮಿಗಳಿಗೆ ಗೌರವವನ್ನು ಸಮರ್ಿಸುತ್ತಾರೆ.ನಾಡಿನ ಉದ್ದಾರಕ್ಕಾಗಿ, ಲೋಕ ಕಲ್ಯಾಣಕ್ಕೋಸ್ಕರ ಸಿದ್ದಗಂಗಾ ಮಠದ ಶಿವಕುಮಾರಂತ ಯತಿಶ್ರೇಷ್ಠರು ಆಕಾಶದಲ್ಲಿನ ಚುಕ್ಕಿಯಂತೆ ಪ್ರತಿಬಿಂಬಿಸಿದ್ದ ಉದಾಹರಣೆ ನಮ್ಮ ಕಣ್ಮುಂದೆ ಇದೆ. ಸಧ್ಯಕ್ಕೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯನ್ನು ಅವರ ಪ್ರತಿರೂಪದಂತೆ ಜನ ಅವರನ್ನು ಆರಾಧಿಸುತ್ತಿದ್ದಾರೆ. ಈ ಪ್ರಕರಣ ದಾಖಲಾಗುತ್ತಿದ್ದಂತೆ, ಯಾರೊ ಒಬ್ಬರು ಮಾಡುವ ತಪ್ಪಿನಿಂದ, ಇಡೀ ಸನ್ಯಾಸ ಕುಲಕ್ಕೆ ಅವಮಾನ ಆಗಿಬಿಟ್ಟಿತಲ್ಲ ಎಂಬ ನೋವನ್ನು ತಾಳಲಾರದೆ ಕಣ್ಣಿರು ಹಾಕಿದ ಗವಿಸಿದ್ದೇಶ್ವರ ಸ್ವಾಮೀಜಿಗಳ ಸಾಮಾಜಿಕ ಕಳಕಳಿಯನ್ನು ಸ್ಮರಿಸಲೇಬೇಕು. ಆದರೆ ದುರಂತವೊ ದುರಾದೃಷ್ಟವೊ ನನಗಂತೂ ಗೊತ್ತಿಲ್ಲ!
ಇವತ್ತು ಆ ಪವಿತ್ರ ಕಾವಿಯ ಹಿಂದೆ ಕಾಮದ ವಾಸನೆ ಆಡ್ತಿದೆ. ಇದೀಗ, ಕಾವಿಯು ಬೇಡದ ವಿಚಾರಗಳಿಗೆ ಹೆಚ್ಚೆಚ್ಚು ಸದ್ದು ಮಾಡ್ತಾ ಇದೆ.ಶತ ಶತಮಾನಗಳ ಇತಿಹಾಸ ಹಾಗೂ ಪರಂಪರೆಯನ್ನು ಹೊಂದಿದ ಚಿತ್ರದುರ್ಗದ ಈ ಮಠವು ಬಹಳ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಾ ಬಂದಿದೆ. ಸಾವಿರಾರು ಮಕ್ಕಳು ಶಿಕ್ಷಣದ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಮುರುಘಾ ಶರಣರು ಹೆಚ್ಚು ವೈಚಾರಿಕ ವಾದಿ. ಇವರು ಸಾಕಷ್ಟು ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಇವರ ಪ್ರವಚನ ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಯಾಕಂದ್ರೆ ಇವರು ಯಾವತ್ತೂ ಡಾಂಬಿಕತೆ, ಮೌಡ್ಯತೆಗಳ ಬಗ್ಗೆ ಮಾತನಾಡಿದವರಲ್ಲ. ಜನರನ್ನು ಸರಿಯಾದ ಮಾರ್ಗದಲ್ಲಿ ನಡೆಸುತ್ತ, ಅವರನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಮಾತನಾಡಿಸುತ್ತ ಬಂದಿದ್ದರು ಮತ್ತು ಆ ಭಾವನೆ ಜನರಲ್ಲೂ ಇತ್ತು. ಶ್ರೀಗಳು ಹಾಕಿದ ಗೆರೆಯನ್ನು ಯಾರೊಬ್ಬರೂ ದಾಟುವಂತಿರಲಿಲ್ಲ, ಅಷ್ಟೊಂದು ದೊಡ್ಡ ಭಕ್ತ ಗಣ ಇವರಿಗಿತ್ತು.
ಆದರೆ ಇದೀಗ ಅಲ್ಲಿ ಕಾಮದ ವಾಸನೆ ಬರುತ್ತಿದೆ. ಅದು ಕೆದಕಿದಷ್ಟು ಇನ್ನೂ ಹೆಚ್ಚಾಗುತ್ತಲೇ ಹೊರಟಿದೆ. ಶಿಕ್ಷಣಕ್ಕೋಸ್ಕರ ಅಲ್ಲಿಗೆ ಬರುವ ಕಕ್ಕಳಮೇಲೆ ಶ್ರೀಗಳು ಕಾಮದ ಕಣ್ಣು ಹಾಕಿದ್ದಾರೆಂಬ ಲೈಂಗಿಕ ಆರೋಪದ ಮೇಲೆ ಇವರನ್ನು ಅರೆಷ್ಟ್ ಮಾಡಲಾಗಿದೆ. ಆದರೆ ಆ ಆರೋಪವನ್ನು ಯಾರೊ ತಿಳಿದಂತವರು ಮಾಡಿದ್ದಲ್ಲ, ಬದಲಾಗಿ ಏನೂ ಅರಿಯದ ಅಪ್ರಾಪ್ತ ಮುಗ್ದ ಬಾಲಕಿಯರು ಮಾಡಿದ್ದಾರೆ. ಹೀಗಾಗಿ ಈ ಪ್ರಕರಣ ಬಹಳಷ್ಟು ಗಂಭೀರ ಸ್ವರೂಪವನ್ನ ಪಡೆದುಕೊಂಡು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಇವರ ಮೇಲೆ ಕೇಸ್ ದಾಖಲಾಗಿದೆ.
ಮೈಸೂರಿನ ಒಡನಾಡಿ ಸಂಸ್ಥೆಗಳು ಆ ವಿದ್ಯಾರ್ಥಿನಿಯರನ್ನು ಕೌನ್ಸಲಿಂಗ್ ನಡೆಸಿದಾಗ ಆ ಮಠದಲ್ಲಿ ನಡೆಯುತ್ತಿದ್ದ ಲೈಂಗಿಕ ಚಟುವಟಿಕೆಗಳನ್ನೆಲ್ಲವನ್ನೂ ಸ್ವತಃ ಆ ಮಕ್ಕಳು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು. ಇಲ್ಲಿ ಯಾವುದೋ ಒಬ್ಬ ಪ್ರಬುದ್ಧ ಮಹಿಳೆ ಆರೋಪ ಮಾಡಿದ್ದರೆ, ಅಲ್ಲೆಲ್ಲೊ ರಾಜಕೀಯ ಅಥವಾ ಹಣಕಾಸಿನ ವ್ಯವಹಾರದ ಲಾಭಕ್ಕಾಗಿ ಅಂತ ಬಾವಿಸಬಹುದಿತ್ತಿನೊ ಗೊತ್ತಿಲ್ಲ. ಆದರೆ ಆರೋಪ ಮಾಡಿದ್ದು ಮಕ್ಕಳು. ಹಾಗಂತ ಬೆಂಕಿ ಇಲ್ಲದೆ ಹೊಗೆ ಆಡಲಿಕ್ಕಾದರೂ ಹೇಗೆ ಸಾಧ್ಯವಿದೆ ನಿವೇ ಹೇಳಿ! ಇದೀಗ ಅದೆಷ್ಟೋ ಜನರು ಸ್ವಾಮಿಗಳ ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಿದ್ದಾರೆ, ಕಾರಣ ಸ್ವಾಮೀಜಿ ಹೊತ್ತ ಆರೋಪದ ಸರಮಾಲೆಗಳು.
ಯಾಕಂದ್ರೆ ಹಿಂದೆ ನೂರಾರು ಸ್ವಾಮಿಗಳ ಪೈಕಿ ಯಾರೊ ಒಬ್ಬರಲ್ಲಿ ಹುಳುಕು ಇರುತ್ತಿತ್ತು. ಆದರೆ ಇವತ್ತು ನೂರು ಸ್ವಾಮಿಗಳ ಪೈಕಿ ಒಬ್ಬರಾದರೂ ಪರಿಶುದ್ದವಾಗಿದ್ದಾರೆಯೇ ಎಂದು ಹುಡುಕುವ ವಾತಾವರಣ ಉಂಟಾಗುತ್ತಿದೆ. ಮಠಗಳಲ್ಲಿ ಈ ರೀತಿಯ ವಾತಾವರಣದಿಂದ ಶ್ರೀ ಸಾಮಾನ್ಯನ ಮನಸ್ಸಿನೊಳಗೆ ಸ್ವಾಮಿಗಳೆಂದರೆ, ಲೈಂಗಿಕ ದೌರ್ಜನ್ಯ ಎಸಗುವವರು, ರಾಜಕಾರಣಿಗಳ ಹಿಂಬಾಲಕರು, ಅವರಿಗೆ ಬಕೇಟ್ ಹಿಡಿಯುವವರು, ತುಂಬಿದ ಸಭೆ ಸಮಾರಂಭಗಳಲ್ಲಿ ರಾಜಕಾರಣಿಗಳಿಗೆ ಸಚಿವ ಸ್ಥಾನ ಕೊಡಿಸಲು ಮುಖ್ಯಮಂತ್ರಿಗಳಿಗೆ ಧಮ್ಕಿ ಹಾಕುವಂತ ಭಯಾನಕ ಪ್ರವೃತ್ತಿಯವರು ಅಂತಲೇ ಭಾಸವಾಗುತ್ತಿದೆ. ಇದು ವಾಸ್ತವ ಸತ್ಯ ಕೂಡಾ ಹೌದು. ಇತ್ತೀಚಿಗಂತು ಬಹುತೇಕ ಸ್ವಾಮಿಗಳು ತಮ್ಮ ಜಾತಿಗೊಂದು ಪೀಠಗಳನ್ನು ನಿರ್ಮಿಸಿಕೊಂಡು, ತಮ್ಮ ತಮ್ಮ ಸಮುದಾಯದ ರಾಜಕಾರಣಿಗಳನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡು, ಎಲ್ಲರಿಗಿಂತ ತಾವೇ ಶ್ರೇಷ್ಠರು ಎಂಬ ದುರಹಂಕಾರದಲ್ಲಿ ಕೆಲವರು ಮೆರೆಯುತ್ತಿದ್ದಾರೆ. ಅವರ ಬಗ್ಗೆ, ಒಬ್ಬ ಸಾಮಾನ್ಯನಿಗೆ ಯಾಕೆ ಹೀಗೆ ಅನಿಸುತ್ತದೆ ಗೊತ್ತಾ? ತಪ್ಪು, ಅನ್ಯಾಯವನ್ನು ಮಾಡಿರುವವನು ಅದು ಸ್ವಾಮಿಯೇ ಆಗಿರಲಿ, ರಾಜಕಾರಣಿಯೇ ಆಗಿರಲಿ, ಅಥವಾ ಇನ್ಯಾರೋ ಪ್ರಭಾವಿಯೇ ಆಗಿರಲಿ, ಮೊದಲು ಅವರ ವಿರುದ್ದ ಧ್ವನಿ ಎತ್ತಬೇಕು. ಅವರು ನಮ್ಮ ಸಮುದಾಯದವರೆನ್ನುವ ವ್ಯಾಮೋಹದಲ್ಲಿ, ಆತ ಮಾಡಿದ ತಪ್ಪನ್ನು ಮುಚ್ಚಿಹಾಕುವ ಪ್ರಯತ್ನದೊಂದಿಗೆ, ಅವರನ್ನ ಸಮರ್ಥಿಸಿಕೊಳ್ಳುವ ಪ್ರವೃತಿ ದಿದೆಯಲ್ಲ, ಅದೇ ಸಮಾಜದ ಕೊಪಕ್ಕೂ ಮತ್ತು ಸಾಮಾನ್ಯರ ಅಗೌರವಕ್ಕೆ ಕಾರಣವಾಗುತ್ತದೆ.
ಒಬ್ಬ ಬಡ ಕುಟುಂಬದ ವಿದ್ಯಾರ್ಥಿನಿಗೆ ಆದಂತಹ ಅನ್ಯಾಯವನ್ನು ಖಂಡಿಸಬೇಕಿದ್ದ ಸ್ವಾಮಿಗಳು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿದ್ದ ಮುರುಘಾ ಸ್ವಾಮಿಯ ಸಮರ್ಥನೆಗೆ ಇಡೀ ತಮ್ಮ ತಂಡದೊಂದಿಗೆ ನಿಲ್ಲುತ್ತಾರೆ. ಹಾಗಾದರೆ ಇವರನ್ನೇನು ಲೋಕೋದ್ದಾರಕರೆನ್ನಬೇಕಾ? ಅಥವಾ ಇವರೆಲ್ಲರೂ ಅವರೇ ಅಂತ ಬಾವಿಸಬೇಕೊ ನನಗಂತೂ ಗೊತ್ತಿಲ್ಲ! ಆದರೆ ಒಂದತೂ ಸತ್ಯ, ತಪ್ಪು ಮಾಡಿದವನನ್ನಾಗಲಿ, ಆರೋಪಿ ಸ್ಥಾನದಲ್ಲಿ ಇರುವವರನ್ನಾಗಲಿ ಸಮರ್ಥಿಸಿಕೊಳ್ಳುವುದೆಂದೆ, ಅದು ತಪ್ಪು ಮಾಡಿದವನಿಗಿಂತಲೂ ಮಾಹಾ ಅಪರಾಧವಾಗುತ್ತದೆ ಅಂತ ನಮ್ಮ ಹಿರಿಯರು ಹೇಳಿದ ಮಾತಿದು. ಬೇಕಿದ್ದರೆ, ಮುರುಘಾ ಶ್ರೀಗಳು ತಮ್ಮ ಆರೋಪಿ ಸ್ಥಾನದಿಂದ ನಿರಪರಾಧಿ ಅಂತ ಸಾಬೀತಾದ ಬಳಿಕ ಅವರಿಗೆ ಜೈಕಾರ ಹಾಕಿ ತಮ್ಮ ತಲೆಯ ಮೇಲೆ ಹೊತ್ತುಕೊಂಡು ಉರೆಲ್ಲ ಮೆರಿಸಲಿ, ಇದಕ್ಕೆ ಯಾರ ವಿರೋಧವು ಇರುವುದಿಲ್ಲ. ಸ್ವಾಮಿಗಳ ವಿರುದ್ದ ಈ ರೀತಿಯ ಲೈಂಗಿಕ ಕಿರುಕುಳದ ಆರೋಪಗಳು ಕೇಳಿ ಬಂದ ಆ ಕ್ಷಣವೇ ಅವರು ಆ ಪೀಠದಿಂದ ಕೆಳಗಿಳಿದು, ‘ತಾವು ನಿರಪರಾಧಿ ಅಂತ ಸಾಬೀತಾಗುವತನಕ ನಾನು ಈ ಶ್ರೇಷ್ಠ ಗುರುಪೀಠವನ್ನು ಏರುವುದಿಲ್ಲ ಅಂತ, ತಾವಾಗಿಯೇ ಈ ಕಾನೂನಿಗೆ ಶರಣಾಗಿದ್ದರೆ ತಕ್ಕ ಮಟ್ಟಿಗೆ ಮರಿಯಾದೆ ಆದರೂ ಉಳಿಯುತ್ತಿತ್ತಲ್ಲವೇ? ಅದನ್ನು ಬಿಟ್ಟು ’ನಾವು ಸಂಧಾನಕ್ಕೂ ಸಿದ್ದ, ಸಂಗ್ರಾಮಕ್ಕೂ ಸಿದ್ದ’! ಅನ್ನೋ ಹೇಳಿಕೆ ಕೊಟ್ಟರಲ್ಲ, ಒಬ್ಬ ಸಾಮಾನ್ಯನಿಗೆ ಅದು ಮೂರ್ಖತನದ ಪರಮಾವಧಿ ಅಂತ ಅನಿಸುತ್ತದಲ್ಲವೆ? ಅಷ್ಟಕ್ಕೂ, ಇವರದ್ದು ಯಾವ ವಿಷಯದಲ್ಲಿ ಸಂಧಾನ? ಮತ್ತು ಯಾರ ಜೊತೆಗೆ ಸಂಧಾನ ನೀವೆ ಯೋಚಿಸಿ. ಇಲ್ಲಿ ಸಂಧಾನ-ಸಂಗ್ರಾಮ ಮಾಡೊದಕ್ಕೆ ಇದು ಆಸ್ತಿ, ಮನೆ, ಹೊಲ, ಅಧಿಕಾರದ ವಿವಾಧವೇನು? ಅಲ್ಲ. ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ಕಿರುಕುಳ ಆರೋಪದ ಮೇಲೆ ಪೋಕ್ಸೊ ಕಾಯ್ದೆ ಅಡಿಯಲ್ಲಿ ದಾಖಲಾದ ದೂರು. ಅಂಬೇಡ್ಕರ್ ಸಂವಿಧಾನದ ಮೂಲಕ ರಚನೆಯಾದ ಕಾನೂನು ಎಲ್ಲರಿಗೂ ಒಂದೆ. ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತ ಆಗಿದ್ದರೂ, ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅವರ ಚರ್ಮ ಹಾಗೂ ಬಟ್ಟೆಯ ಬಣ್ಣ ಯಾವುದೇ ಆಗಿದ್ದರೂ, ಎಲ್ಲರೂ ಸರಿಸಮಾನರು. ಇದ್ಯಾವುದೂ ಕೂಡಾ ಕಾನೂನಿಗೆ ಅಣ್ವಯವಾಗುವುದಿಲ್ಲ. ಈ ರೀತಿ ಪ್ರಕರಣಗಳು ದಾಖಲೆಯಾದ ಸಂದರ್ಭದಲ್ಲಿ ಅಖಕಅ ಖಜಛಿಣಠ 164ರ ಅಡಿಯಲ್ಲಿ ಆ ಸಂತ್ರಸ್ತರನ್ನು ಮ್ಯಾಜಿಸ್ಟ್ರೇಟ್ ಮುಂದೆ ಕರೆದೊಯ್ದು ಸ್ಟೇಟ್ಮೆಂಟ್ ಒಂದನ್ನು ಕೊಡಿಸಬೇಕಾಗುತ್ತದೆ.
‘ ಖಠರಟಿ ಛಿ ಣಜ ಛಿಡಿಟಜ ಛಡಿಠರಣ ಣಠ ಣಜ ಞಟಿಠಟಜಜರಜ ಠ ಣಜ ಠಿಠಛಿಜ ಠಜಿಛಿಜಡಿ ಜ ಜಣಣಥಿ ಛಠಟಿ ಣಠ ಣಚಿಞಜ ಣಜ ತಛಿಣಟ ಣಠ ಣಜ ಟಿಜಚಿಡಿಣ ರಿಣಜಛಿಚಿಟ ಟಚಿರಣಡಿಚಿಣಜ ಜಿಠ ಡಿಜಛಿಠಜಟಿರ ಜಡಿ ಣಚಿಣಜಟಜಟಿಣ ಅಂತ 164 ಸೆಕ್ಷನ್ ಹೇಳುತ್ತದೆ. ಹಾಗೆ ಛಿಡಿಟಟಿಚಿಟ ಚಿಟಜಟಿಜಟಜಟಿಣ ಂಛಿಣ-2013ರ ಪ್ರಕಾರ, ಹೊಸ ಪ್ರೊವಿಜನ್ ಒಂದನ್ನು ರೂವಿಸಲಾಗಿದೆ. ಇದರ ಪ್ರಕಾರ ಖಜಛಿಣಠ 164 ಛಿಡಿಠಿಛಿ ಕಡ್ಡಾಯ ಅಂತ ಮಾಡಲಾಗಿದೆ. ‘ಖಿಜ ಛಿಡಿಟಟಿಚಿಟ ಚಿಟಜಟಿಜಟಜಟಿಣ ಚಿಛಿಣ 2013 ಚಿಟಠರ ತಚಿಡಿಠ ತಿಜಜಠಿಟಿರ ಛಿಚಿಟಿರ ಟಿ ಛಿಡಿಣಜಜ ಚಿ ಟಿಜತಿ ಠಿಡಿಠಠ ಠಿ ಚಿ ಟಿ ಣಠ ಣಜ ಜಛಿಣಠ 164 ಠ ಛಿಡಿಠಿಛಿ ಟಚಿಞಟಿರ ಣ ಟಚಿಟಿಜಚಿಣಠಥಿ ಣಚಿಣ ತಿಜಟಿ ಚಿಟಿ ಠಜಿಜಠಿಜ ಠ ಡಿಚಿಠಿಜ ಛಿಠಟಣಣಜಜ ಚಿಟಿಜ ಣಜ ಚಿಟಜ ಛಡಿಠರಣ ಣಠ ಣಜ ಞಟಿಠಟಜಜರಜ ಠ ಣಜ ಠಿಠಛಿಜ ಠಜಿಛಿಜಡಿ ಜ ಛಠಟಿಜ ಣಠ ಣಚಿಞಜ ಣಜ ಠಿಠಛಿಜ ಠಜಿಛಿಜಡಿ ಜ ಛಠಟಿಜ ಣಠ ಣಚಿಞಜ ಣಜ ತಛಿಣಟ ಣಠ ಣಜ ಟಿಜಚಿಡಿಣ ರಿಣಜಛಿಚಿಟ ಟಚಿರಣಡಿಚಿಣಜ’ ಅಂತ ಕಾನೂನು ಇಲ್ಲಿ ಬಹಳ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಅಂದು ಪೋಲಿಸರು ಹೀಗೆ ಮಾಡಿದ್ದರಾ? ಇಲ್ಲ. ಮೈಸೂರಿನಲ್ಲಿ ದೂರು ದಾಖಲಾಗಿ ಅದು ಚಿತ್ರದುರ್ಗಕ್ಕೆ ವರ್ಗಾವಣೆ ಆಗುತ್ತದೆ. ನಂತರವೂ ಆ ಕೇಸಿನಲ್ಲಿ ರಾಜಕೀಯ ಒತ್ತಡಕ್ಕೆ ಸಿಲುಕಿದ ಪೋಲಿಸರು ಬಹಳಷ್ಟು ವಿಳಂಬ ಮಾಡಿದ್ದರು. ಯಾಕೆ ಹಾಗೆ? ಅದೆ, ಅಂದು ನಿತ್ಯಾನಂದನ ಸಿಡಿ ಹೊರ ಬರುತ್ತಿದ್ದಂತೆ ಪೋಲಿಸರು ಸೀಳು ನಾಯಿಗಳಂತೆ ಆತನನ್ನು ಮುಗಿಬಿದ್ದು, ತಮ್ಮನ್ನು ತಾವು ವೀರರು, ಶೂರರು ಅಂತ ಕರೆಸಿಕೊಂಡಿದ್ದರಲ್ಲ, ಈಗೇನಾಯಿತು? ಪೋಲಿಸರ ಕಥೆ ಇದಾದರೆ ಇನ್ನು ಅಧಿಕಾರದಲ್ಲಿರುವ ಬೊಮ್ಮಾಯಿ ಸರಕಾರದ ನಾಯಕರಾಗಲಿ, ವಿರೋಧ ಪಕ್ಷಗಳ ಮುಖಂಡರಾಗಲಿ, ಈ ವಿಷಯದಲ್ಲಿ ಯಾರೊಬ್ಬರೂ ತುಟಿ ಪಿಟಕ್ ಅನ್ನದೆ ಬಾಯಿ ಮುಚ್ಚಿಕೊಂಡು ತೆಪ್ಪಗೆ ಕುಳಿತಿದ್ಯಾಕೆ? ಲೈಂಗಿಕ ಆರೋಪದಲ್ಲಿ ಸಿಲುಕಿದ ಸ್ವಾಮಿಗಳು ಒಂದು ಪ್ರಬಲ ಸಮುದಾಯದವರೆಂಬ ಕಾರಣಕ್ಕಾ? ತಪ್ಪು ಯಾರೆ ಮಾಡಿದರೂ ಅವರನ್ನು ಒದ್ದು ಒಳಗಡೆ ಹಾಕುತ್ತೆವೆ, ಅಂತ ಹೇಳುವ ಗಡ್ಸು ನಮ್ಮ ಗೃಹ ಸಚಿವ ಹಾಗೂ ಮುಖ್ಯಮಂತ್ರಿಗಳಿಗೆ ಯಾಕಿಲ್ಲ? ತನಿಖೆಗೂ ಮೊದಲೆ ಸ್ವಾಮಿಗಳು ಕ್ಲೀನ್ ಸೀಟ್ ತೆಗುದುಕೊಳ್ಳುತ್ತಾರೆಂಬ ದಾಟಿಯಲ್ಲಿ ಗೃಹಸಚಿವರು ಕೊಟ್ಟ ಹೇಳಿಕೆಯನ್ನು ಗಮನಿಸಿದರೆ, ಅವರದ್ದೇ ಪೋಲಿಸರಿಂದ ಪಾರದರ್ಶಕ ತನಿಖೆಯನ್ನು ನೀರೀಕ್ಷಿಸಲು ಹೇಗೆ ಸಾಧ್ಯ? ಈ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಹಿಂದೇಟು ಹಾಕುತ್ತಿರುವುದು ಯಾಕೆ ಗೊತ್ತೆ! ರಾಜ್ಯ ವಿಧಾನಸಭೆ ಚುನಾವಣೆಗಳು ಬಹಳ ಹತ್ತಿರದಲ್ಲಿವೆ. ಸದ್ಯಕ್ಕೆ ಆರೋಪ ಕೇಳಿಬಂದಿದ್ದು, ಈ ರಾಜ್ಯದ ಬಲಿಷ್ಠ ಸಮುದಾಯದ ಪ್ರಭಾವಿ ಸ್ವಾಮಿಜಿಯ ವಿರುದ್ದ! ಅದರಲ್ಲೂ, ಸಧ್ಯಕ್ಕೆ ಅದೇ ಸಮುದಾಯದಿಂದ ಅತಿ ಹೆಚ್ಚು ಮತ ಪಡೆದುಕೊಂಡು ಅಧಿಕಾರದ ಗದ್ದುಗೆಯನ್ನೆರಿ, ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿದ್ದಾರೆ ಬಸವರಾಜ ಬೊಮ್ಮಾಯಿ. ಈ ಹಿಂದೆ ಕಾಂಗ್ರೆಸ್ ಪಕ್ಷ ಕೂಡಾ ಲಿಂಗಾಯತ ಸಮುದಾಯವನ್ನು ಧರ್ಮದ ಹೆಸರಿನಲ್ಲಿ ಇಬ್ಬಾಗ ಮಾಡಲು ಹೋಗಿ ತನ್ನ ಕೈ ಸುಟ್ಟುಕೊಂಡು, ಚುನಾವಣೆಯಲ್ಲಿ ಸೋತು ಸುನ್ನದಂತಾಗಿತ್ತು.
ಹಾಗಾಗಿ ಇದೀಗ ಕಾಂಗ್ರಸ್ ಮಾತ್ರ ಲಿಂಗಾಯತ ಸಮುದಾಯದ ವಿರುದ್ದ ಯಾವುದೇ ರಿಸ್ಕ್ ತೆಗೆದುಕೊಳ್ಳಲಿಕ್ಕೆ ಅವರು ತಯಾರಿಲ್ಲ. ಇನ್ನು ಜೆಡಿಎಸ್, ನವರಂತೂ ’ಅತ್ತ ಹಾವು ಸಾಯಬಾರದು ಇತ್ತ ಕೊಲೂ ಮುರಿಯಬಾರದೆಂಬ ಮನಸ್ಥಿತಿಯವರು. ರಾಜಕೀಯ ಎಲ್ಲಾ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಆ ಸಮುದಾಯದ ಮತಗಳು ಕೈ ತಪ್ಪಿ ಹೊಗಬಾರದೆಂಬ ದುರಾಸೆಯಿಂದ ಈ ಪ್ರಕರಣಕ್ಕೂ ನಮಗೂ ಏನೇನು ಸಂಬಂಧವೇ ಇಲ್ಲ ಅನ್ನೋ ರೀತಿಯಲ್ಲಿ ತಂತ್ರ ಪ್ರತಿತಂತ್ರದ ನಾಟಕವಾಡುತ್ತಿವೆ.ಆದರೆ ಇಲ್ಲಿ ಮಾತ್ರ ನ್ಯಾಯಾಂಗ ವ್ಯವಸ್ಥೆ ತನ್ನ ಕೆಲಸವನ್ನು ಬಹಳ ಅಚ್ಚುಕಟ್ಟಾಗಿಯೇ ಮಾಡುತ್ತಿದೆ. ಮುರುಘಾ ಶ್ರೀಗಳನ್ನು ಈ ಪ್ರಕರಣದಿಂದ ಬಚಾವ್ ಮಾಡಲಿಕ್ಕಾಗಿ ಸಕಲ ಸಿದ್ಧತೆಗಳು ನಡೆದಿದ್ದವು. ಆ ಅಂಶವನ್ನು ನ್ಯಾಯಾಲಯ ಬಹಳ ಸೂಕ್ಷ್ಮವಾಗಿ ಗಮನಿಸಿತ್ತು. ಶ್ರೀಗಳ ಆರೋಗ್ಯದ ಸ್ಥಿತಿ ಬಹಳ ಗಂಭೀರದಲ್ಲಿದೆ ಅನ್ನೊ ಗೊಡ್ಡು ನೆಪದಿಂದ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯುವ ಕಸರತ್ತು ನಡೆದಿತ್ತು. ಆಗ ಸ್ವಾಮೀಜಿಯ ಆರೋಗ್ಯದ ಎಲ್ಲಾ ರಿಪೋಟ್9ಗಳನ್ನು ಗಮನಿಸಿದ್ದ ನ್ಯಾಯಾಧೀಶೆ ಕೋಮಲಾ ಅವರು ಪೋಲಿಸರನ್ನು ಹಿಗ್ಗಾಮುಗ್ಗಾ ಜಾಡಿಸಿ ಆ ಸ್ವಾಮಿಗಳನ್ನು ಕೋಟ್9 ಕಟಕಟೆಗೆ ಕರೆತರಲು ಖಡಕ್ ಆದೇಶ ಮಾಡುತ್ತಾರೆ. ಇಲ್ಲಿ ಬಹಳ ಮಜಬೂತಾದ ಸಂಗತಿ ಎಂದರೆ, ಈ ಮೊದಲು ಶ್ರೀಗಳ ಆರೋಗ್ಯಸ್ಥಿತಿ ಬಹಳ ಗಂಭೀರ, ಅವರಿಗೆ ನಡೆಯಲಾಗುತ್ತಿಲ್ಲ ಅಂತ ನಾಟಕವಾಡಿ ಅವರನ್ನು ವ್ಹೀಲ್ ಚೇರ್ ಮೇಲೆ ಕುಡಿಸಿಕೊಂಡು ಆ ಕಡೆ ಈಕಡೆಯೊಬ್ಬರಂತೆ ಒಡಾಡುತ್ತಿದ್ದರು. ಯಾವಾಗ ಆತನನ್ನು ಕರೆತರಲು ನ್ಯಾಯಾಧೀಶರು ಆದೇಶ ಹೊರಡಿಸಿದ್ದರೊ ಆ ಕ್ಷಣವೇ ಕಂಗಾಲಾದ ಶ್ರೀಗಳು, ಮೊದಲ ಮಹಡಿಯಲ್ಲಿನ ಕೋರ್ಟಿಗೆ ಯಾರೊಬ್ಬರ ಸಹಾಯವಿಲ್ಲದೆ ಆರಾಮಾಗಿ ಒಬ್ಬರೆ ನಡೆದುಕೊಂಡು ಹೋಗುತ್ತಾರೆ. ನ್ಯಾಯಾಧೀಶರು, ‘ನೀವು ಆರೋಪಿ ಸ್ಥಾನದಲ್ಲಿದ್ದಿರಿ! ಕಟಕಟೆಗೆ ಬಂದು ನಿಲ್ಲಲೂ ಆದಿಶಿಸುತ್ತಾರೆ. ಆ ಒಂದು ಕ್ಷಣದಲ್ಲಿ ಶ್ರೀಗಳಿಗೆ ನಮ್ಮ ಕಾನೂನಿನ ತಾಕತ್ತು ಹೇಗಿದೆ ಎಂಬುದರ ಅರಿವಾಗಿಬಿಡುತ್ತದೆ. ತಮಗೆ ರಾಜ್ಯದ ಸಚಿವರುಗಳು, ಮುಖ್ಯಮಂತ್ರಿಗಳಿಂದ ಹಿಡಿದು ಈ ದೇಶದ ಪ್ರಧಾನ ಮಂತ್ರಿಗಳ ವರೆಗೆ ಎಲ್ಲರ ಸಂಪರ್ಕವೂ ಇದೆ. ಆದರೂ ನಾನು ಈ ಕೋರ್ಟಿಗೆ ತಲೆಬಾಗಲೇಬೆಕಲ್ಲ ಎಂಬ ವಾಸ್ತವ ಸತ್ಯದ ಅರಿವಾಗಿತ್ತೇನೊ ಗೊತ್ತಿಲ್ಲ. ಆದರೆ ಇಲ್ಲಿ ಶ್ರೀ ಸಾಮಾನ್ಯನಿಗೆ ಅನಿಸಿದ್ದು ಮಾತ್ರ, ಅಲ್ಲಿನ ಮಕ್ಕಳೆಲ್ಲರೂ ಅವರಿಗೆ ಅಪ್ಪಾಜಿ ಅಂತ ಕರೆಯುತ್ತಿದ್ದರು, ಕಾವಿದಾರಿಗಳೆಂದರೆ ದೇವರಿಗೆ ಸಮ ಅಂತ ಭಾವಿಸಿದ ಜನರು ಅವರ ಕಾಲಿಗೆ ಬಿಳುತ್ತಿದ್ದರು. ಅವರ ಮೇಲೆ ಬಹಳ ದೊಡ್ಡ ನಂಬಿಕೆ, ಪ್ರೀತಿ ವಿಶ್ವಾಸವನ್ನಿಟ್ಟಿದ್ದರು, ಆದರೆ ಅವರಷ್ಟು ನಾಟಕವಾಡಲೂ ಒಬ್ಬ ಸಾಮಾನ್ಯ ಮನುಷ್ಯನಿಗೆ ಬರಲಿಲ್ಲವಲ್ಲ ಅನ್ನೋದೆ ನೋವಿನ ಸಂಗತಿ. ನಮ್ಮ ಕಾನೂನು ಮಾತ್ರ ಬಹಳ ಬಲಿಷ್ಟವಾಗಿದೆ. ಅದರ ಮೇಲೆ ಸಾಮಾನ್ಯನಿಗೆ ನಂಬಿಕೆ ಇದೆ. ಈ ಪ್ರಕರಣ ಸರಿಯಾಗಿ ತನಿಕೆಗೊಂಡು ತಪ್ಪಿಸ್ಥರಿಗೆ ತಕ್ಕ ಶಿಕ್ಷೆಯಾಗಿ, ಸಂತ್ರಸ್ತರಿಗೆ ನ್ಯಾಯ ಸಿಗಲಿ.
- * * * -