ಗಂಗಿಮಡಿ ವಸತಿ ಸಮುಚ್ಚಯ ಫಲಾನುಭವಿಗಳಿಗೆ ಮನೆ ನೀಡಿಕೆ ಆರಂಭಿಸಿ

ಗದಗ 02: ಬೆಟಗೇರಿ ನಗರದ ಗಂಗಿಮಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ  ನಿರ್ಮಿಸಲಾಗುತ್ತಿರುವ ಒಂದು ಮಹಡಿ ವಸತಿ ಸಮುಚ್ಛಯ ಪೂರ್ಣಗೊಳ್ಳುವವರೆಗೆ ಕಾಯದೇ ಮನೆಗಳು ಪೂರ್ಣವಾದಂತೆಲ್ಲ ಫಲಾನುಭವಿಗಳಿಗೆ ಹಂಚಿಕೆ ಮಾಡಿ ವಾಸಕ್ಕೆ ಅನುವು ಮಾಡಿಕೊಡಿ ಎಂದು  ರಾಜ್ಯ ಸಕರ್ಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.  ವಿಜಯಭಾಸ್ಕರ್  ನಿರ್ದೇಶನ ನೀಡಿದರು. 

         ಅವರಿಂದು ವಸತಿ ಸಮುಚ್ಛಯಕ್ಕೆ ಭೇಟಿ ನೀಡಿ ನಿಮರ್ಾಣ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳ ಹಾಗೂ ಗುತ್ತಿಗೆದಾರ ಪ್ರತಿನಿಧಿಗಳೊಂದಿಗೆ ಸಮಗ್ರ ಮಾಹಿತಿ ಪಡೆದರು.  ಕಟ್ಟಿದ ಮನೆಗಳು ವಾರಸುದಾರರಿಲ್ಲದೇ ಇಲ್ಲದಿದ್ದಲ್ಲಿ ಆ ಮನೆಗಳ ನಿರ್ವಹಣೆ ಹಾಗೂ  ಸುರಕ್ಷತೆ ಸಮಸ್ಯೆ ಆಗುತ್ತದೆ.  ಆದುದರಿಂದ ಪೂರ್ಣಗೊಳ್ಳುತ್ತಿದ್ದಂತೆ ಮನೆಗಳನ್ನು ವಿತರಿಸಬೇಕು.  ವಸತಿ ಸಮುಚ್ಛಯದ ಮೂಲಭೂತ ಸೌಕರ್ಯ  ಕೊರತೆ ಕಾಣುತ್ತಿದ್ದು ತಕ್ಷಣವೇ  ಸಂಪರ್ಕ ರಸ್ತೆ, ಗಟಾರು, ಒಳಚರಂಡಿ ವ್ಯವಸ್ಥೆಗೆ ಕ್ರಮ ಜರುಗಿಸಬೇಕು.  ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಯಬೇಕು ಎಂದು ಮುಖ್ಯ ಕಾರ್ಯದಶರ್ಿಗಳು ಸೂಚಿಸಿದರು. 

          ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ವಸತಿ ಸಮುಚ್ಛಯದ ಮಾಹಿತಿ ನೀಡಿ  ಒಟ್ಟಾರೆ  3630 ಮನೆಗಳ ನಿರ್ಮಾಣದ ಮೊದಲ ಹಂತದಲ್ಲಿ ಸೆಕ್ಟರ್ ಎ ದಲ್ಲಿ 1008 ಮನೆಗಲು ಪೂರ್ಣವಾಗುವ ಹಂತದಲ್ಲಿವೆ.  ಸರ್ಕಾರದಿಂದ ಈ ಯೋಜನೆಯಡಿ  15 ಕೋಟ ರೂ. ಬಿಡುಗಡೆ ಆಗಿದೆ ಎಂದು ತಿಳಿಸಿದರು.  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ , ಪೌರಾಯುಕ್ತ ಮನ್ಸೂರ ಅಲಿ , ಗುತ್ತಿಗೆದಾರ ಕಂಪನಿ   ಪ್ರತಿನಿಧಿಗಳು ಇದ್ದರು.