ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ

ಬ್ಯಾಡಗಿ: ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸುಸಜ್ಜಿತವಾದ ಸ್ಮಶಾನದ ಅವಶ್ಯಕತೆಯಿದ್ದು, ನರೇಗಾ ಯೋಜನೆಯ ಅಡಿಯಲ್ಲಿ ಸ್ಮಶಾನ ಅಭಿವೃದ್ಧಿ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕೆಂದು ಗ್ರಾಮಸ್ಥರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯನ್ನು ಪಟ್ಟು ಹಿಡಿದು ಒತ್ತಾಯಿಸಿದ ಘಟನೆ ಹಿರೇಹಳ್ಳಿ ಗ್ರಾಮ ಸಭೆಯಲ್ಲಿ ಜರುಗಿತು. 

ಶನಿವಾರ ತಾಲೂಕಿನ ಹಿರೇಹಳ್ಳಿ  ಗ್ರಾಮದಲ್ಲಿ ಜರುಗಿದ ಪ್ರಸಕ್ತ ಸಾಲಿನ ನರೇಗಾ ಯೋಜನೆಯ 2 ನೇ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಮಾತನಾಡಿದ ಗ್ರಾಮಸ್ಥರಾದ ಗಣೇಶಪ್ಪ ಚಿಕ್ಕಳ್ಳಿ, ಗ್ರಾಮದಲ್ಲಿ ಬಹಳಷ್ಟು ವರ್ಷಗಳಿಂದ ಮೃತ ಜನರ ಅಂತ್ಯ ಸಂಸ್ಕಾರ ನಡೆಸಲು ಪರದಾಡುವಂತಾಗಿದೆ, ಕಾರಣ ನರೇಗಾ ಯೋಜನೆಯಲ್ಲಿ ಸ್ಮಶಾನದ ಅಭಿವೃದ್ದಿ ಕೈಗೊಳ್ಳಲು ಅವಕಾಶ ಕಲ್ಪಿಸಿದ್ದು, ಅದರಂತೆ ಗ್ರಾಮಕ್ಕೆ ಅವಶ್ಯಕತೆಯಿರುವ ಸ್ಮಶಾನ ಕಾಮಗಾರಿಯನ್ನು ತುತರ್ಾಗಿ ಅಭಿವೃದ್ಧಿ ಪಡಿಸಲು ಆಗ್ರಹಿಸಿದರು. 

ಈ ಕುರಿತು ಮಾಹಿತಿ ನೀಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಬಸವರಾಜ ಗೌಡ ಶಿಡ್ರಳ್ಳಿ, ಗ್ರಾಮದಲ್ಲಿರುವ ಸ್ಮಶಾನ ಜಾಗೆಯನ್ನು ಅಭಿವೃದ್ಧಿ ಪಡಿಸಲು 10 ಲಕ್ಷ ರೂಗಳ ಕ್ರಿಯಾಯೋಜನೆಯನ್ನು ತಯಾರಿಸಲಾಗಿದ್ದು ಅದಕ್ಕೆ ಮಂಜೂರಾತಿ ದೊರೆತ ನಂತರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ತಾಲೂಕಾ ಸಾಮಾಜಿಕ ಲೆಕ್ಕ ಪರಿಶೋಧನಾ ಸಂಯೋಜಕ ಬಸವರಾಜ ಅಮಾತಿ ಮಾತನಾಡಿ, ನರೇಗಾ ಯೋಜನೆಯಡಿ  ಗ್ರಾ.ಪಂ. ವತಿಯಿಂದ ಕಳೆದ ಆರು ತಿಂಗಳಲ್ಲಿ 150  ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಇದಕ್ಕಾಗಿ 58 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ. ಇದರಲ್ಲಿ ಕೂಲಿಗಾಗಿ 56.39  ಲಕ್ಷ ರೂ, ಹಾಗೂ ಸಾಮಗ್ರಿಗಾಗಿ 1.76  ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ ಎಂದರಲ್ಲದೇ ನರೇಗಾ ಯೋಜನೆಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಕಡತಗಳನ್ನು ನೀಡದಿರುವ ಸಾಮಾಜಿಕ ಅರಣ್ಯ ಇಲಾಖೆಯು ನೆಡುತೋಪು ನಿಮರ್ಾಣಕ್ಕೆ ಬಳಸಿದ 32 ಸಾವಿರ ರೂಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆಎಂದರು. 

ನರೇಗಾ ಯೋಜನೆಯ ಸಂಯೋಜಕ ಶಾನವಾಜ್ ಚಿಣಗಿ ಮಾತನಾಡಿ, ನರೇಗಾ ಯೋಜನೆಯಡಿ ಹೊಸದಾಗಿ  ಸೇರಿಸಲಾಗಿರುವ ಅಡಿಕೆ, ಗುಲಾಬಿ ತೋಟ, ಮಳೆ ಕೊಯ್ಲು, ಇಂಗುಗುಂಡಿಗಳ ನಿಮರ್ಿಸಿಕೊಳ್ಳಲು ದೊರಕುವ ಸಹಾಯ ಧನದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಕೂಲಿಕಾಮರ್ಿಕರಿಗೆ ಕೇಂದ್ರ ಸಕರ್ಾರ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆ ಬಗ್ಗೆ ವಿವರಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಿಡಿಪಿಓ ರಾಮಲಿಂಗಪ್ಪ ಅರಳಿಗುಪ್ಪಿ ವಹಿಸಿದ್ದರು. ಗ್ರಾ ಪಂ. ಅಧ್ಯಕ್ಷೆ  ರಹಮತಬಿ ಫತ್ತೆಗೌಡ್ರ, ಸದಸ್ಯ ಮಲ್ಲನಗೌಡ ಘಂಟಿಗೌಡ್ರ, ಮಾಜಿ ಅಧ್ಯಕ್ಷ ಗಣೇಶಪ್ಪ ಬಣಕಾರ, ಅಂಗನವಾಡಿ ಮೇಲ್ವಚಾರಕಿ ಸುವರ್ಣ ಜಡಿಮಠ, ತೋಟಗಾರಿಕೆ ಇಲಾಖೆಯ ನದಾಫ್, ಇಂಜನಿಯರ್ ಎಂ.ಸಿ. ಪ್ರಕಾಶ,  ನಾಗರಾಜ ತೆವರಿ ಸೇರಿದಂತೆ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.