ಜಯಲಲಿತಾ ಆಗುವುದು ಒಂದು ಸವಾಲು : ಕಂಗನಾ

ಮುಂಬೈ, ಫೆ 4 : ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನಾಧಾರಿತ ಚಿತ್ರದಲ್ಲಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟಿಸುತ್ತಿದ್ದು, ಜಯಲಲಿತಾ ಅವರ ಪಾತ್ರ ನಿರ್ವಹಿಸುವುದು ತಮಗೆ ಸವಾಲು  ಎಂದು ಹೇಳಿದ್ದಾರೆ.

ಕಂಗನಾ ರಣಾವತ್ ಶೀಘ್ರವೇ ತಲೈವಿ ಚಿತ್ರದಲ್ಲಿ ಜಯಲಲಿತಾ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ, ಜಯಲಲಿತಾ ಅವರ ಎಲ್ಲಾ ವಯಸ್ಸಿನ ಪಾತ್ರಗಳಿಗೂ ಬಣ್ಣ ಹಚ್ಚಲಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಕಂಗನಾ ಮಾತನಾಡಿದ ಅವರು, ಜಯಲಲಿತಾ ಅವರು ನನ್ನಂತೆ ಇರಲಿಲ್ಲ. ಬಾಲಿವುಡ್ ನಟಿ ಐಶ್ವರ್ಯ ರೈ ಅವರಂತೆ ಗ್ಲಾಮರ್ಸ್ ಸ್ಟಾರ್ ಆಗಿದ್ದರು. ಅವರ ಪಾತ್ರದಲ್ಲಿ ಒಳಹೊಕ್ಕುವುದು ನನಗೊಂದು ಸವಾಲಾಗಿತ್ತು. ಏಕೆಂದರೆ ಗ್ಲಾಮರ್ಸ್ ಗಾಗಿ ನಾನು ಹೆಚ್ಚಾಗಿ ಪ್ರಸಿದ್ಧಿ ಪಡೆದಿಲ್ಲ. ಆದರೆ, ಇಬ್ಬರಲ್ಲಿಯೂ ಒಂದು ಸಾಮ್ಯತೆಯಿದ್ದು, ಜಯಲಲಿತಾ ಅವರು ತಮ್ಮ ಸಿನಿವೃತ್ತಿ ಯಲ್ಲಿ ಸಂತುಷ್ಟವಾಗಿರಲಿಲ್ಲ. ಅವರಂತೆ ಈ ವಿಷಯದಲ್ಲಿ ನನಗೂ ತೃಪ್ತಿ ಇಲ್ಲ ಎಂದರು. 

ಎಎಲ್ ವಿಜಯ್ ಅವರ ನಿರ್ದೇಶನದಲ್ಲಿ ತಲೈವಿ ಚಿತ್ರ ಹೊರಬರಲಿದ್ದು, ಕಂಗನಾ ಅವರ ಪಾತ್ರವನ್ನು ಥೇಟ್ ಜಯಲಲಿತಾ ಅವರಂತೆ ಸೆರೆಹಿಡಿಯಲಾಗುತ್ತಿದೆ. ಅಲ್ಲದೇ  ಬಟ್ಟೆ ವಿನ್ಯಾಸಕ್ಕೂ ಹೆಚ್ಚು ಮಹತ್ವ ನೀಡಲಾಗುತ್ತಿದೆ.