ಗದಗ 01: ಸ್ಪಧರ್ಾತ್ಮಕ ಯುಗದ ಈ ದಿನಮಾನಗಳಲ್ಲಿ ನಿರುದ್ಯೋಗ ಯುವಕ ಯುವತಿಯರು ಕೇವಲ ಸಕರ್ಾರಿ ಉದ್ಯೋಗವನ್ನು ನೆಚ್ಚದೆ ದೊರೆತಂತಹ ಅವಕಾಶಗಳನ್ನು ಬಳಸಿಕೊಂಡು ಸ್ವಾವಲಂಭಿಗಳಾಗುವಂತೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ನುಡಿದರು.
ಗದಗ ಜಿಲ್ಲಾ ಕ್ರೀಡಾಂಗಣದಲ್ಲಿಂದು ಜರುಗಿದ ಗದಗ ಜಿಲ್ಲಾ ಮಟ್ಟದ ಉದ್ಯೋಗ ಮೇಳದ ಸಮಾರೋಪ ಸಮಾರಂಭದಲ್ಲಿ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ಎರಡು ದಿನಗಳ ಕಾಲ ಜರುಗಿದ ಈ ಉದ್ಯೋಗ ಮೇಳದಲ್ಲಿ ಒಂದನೂರಾ ಇಪ್ಪತ್ತೋಂಭತ್ತು ಉದ್ಯೋಗದಾತರು ಭಾಗಹಿಸಿದ್ದರು. ಎರಡು ಸಾವಿರದ ಏಳನೂರಾ ನಲವತ್ತಕ್ಕೂ ಹೆಚ್ಚು ಅಭ್ಯಥರ್ಿಗಳು ಭಾಗವಹಿಸಿದ್ದ ಅಭ್ಯಥರ್ಿಗಳಲ್ಲಿ ಒಟ್ಟು ಐದನೂರಾ ಅರವತ್ತನಾಲ್ಕು ಅಭ್ಯಥರ್ಿಗಳು ಆಯ್ಕೆಯಾಗಿದ್ದು ಸಂತೋಷದ ಸಂಗತಿಯಾಗಿದೆ ಎಂದರು. ಮೇಳದಲ್ಲಿ ಭಾಗವಹಿಸಿದ ಉದ್ಯೋಗದಾತರರು ಉತ್ತಮ ಸಂಬಳದ ಭರವಸೆ ನೀಡಿದ್ದು ಆಯ್ಕೆಯಾದ ಅಭ್ಯಥರ್ಿಗಳು ಕೆಲಸಕ್ಕೆ ಹಾಜರಾಗಿ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಂಡು ಸ್ವಾವಲಂಭಿ ಬದುಕನ್ನು ಕಟ್ಟಿಕೊಳ್ಳಲು ಸಲಹೇ ನೀಡಿದರು. ಮೇಳದಲ್ಲಿ ಜಿಲ್ಲೆಯಿಂದ 5 ವಿಕಲಚೇತನರು ಆಯ್ಕೆಯಾಗಿದ್ದು ವಿಕಲಚೇತನರು ಯಾರಿಗೂ ಹೊರೆ ಆಗಬಾರದು ಎಂಬ ಉದ್ದೇಶದೊಂದಿಗೆ ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕೇವಲ ವಿಕಲಚೇತನರಿಗಾಗಿಯೇ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುವದು ಎಂದು ನುಡಿದ ಅವರು ಜಿಲ್ಲಾ ಮಟ್ಟದ ಉದ್ಯೋಗ ಮೇಳ ಯಶಸ್ವಿಯಾಗಲು ಸಹಕರಿಸಿದ ಎಲ್ಲ ಅಧಿಕಾರಿ ಸಿಬ್ಬಂದಿ ಹಾಗೂ ಉದ್ಯೋಗದಾತರಿಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ ತನುಜಾ ರಾಮಪುರೆ ಮಾತನಾಡಿ ಎರಡು ದಿನಗಳ ಈ ಉದ್ಯೋಗ ಮೇಳದಲ್ಲಿ ಒಟ್ಟು 129 ಉದ್ಯೋಗದಾತರು ಭಾಗವಹಿಸಿದ್ದರು. ಮೊದಲನೆ ದಿನ ಒಟ್ಟು 1677 ಅಭ್ಯಥರ್ಿಗಳಲ್ಲಿ 1069 ಪುರುಷ 608 ಮಹಿಳಾ ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದರು ಇದರಲ್ಲಿ 281 ಪುರುಷ 53 ಮಹಿಳಾ ಉದ್ಯೋಗಾಂಕ್ಷಿಗಳನ್ನು ಉದ್ಯೋಗದಾತರು ಆಯ್ಕೆ ಮಾಡಿದ್ದು 519 ಅಭ್ಯಥರ್ಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿರುತ್ತಾರೆ. ಎರಡನೇ ದಿನದ ಮೇಳದಲ್ಲಿ 62 ಉದ್ಯೋಗದಾತರರು ಭಾಗವಹಿಸಿದ್ದು ಒಟ್ಟು 1063 ಉದ್ಯೋಗಾಂಕ್ಷಿಗಳಲ್ಲಿ 763 ಪುರುಷ, 267 ಮಹಿಳಾ ಉದ್ಯೋಗಾಂಕ್ಷಿಗಳು ಭಾಗವಹಿಸಿದ್ದು ಇದರಲ್ಲಿ 170 ಪುರುಷ, 60 ಮಹಿಳಾ ಅಭ್ಯಥರ್ಿಗಳು ಆಯ್ಕೆಯಾಗಿದ್ದು 491 ಅಭ್ಯಥರ್ಿಗಳನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿರುತ್ತದೆ. ಒಟ್ಟಾರೆಯಾಗಿ ಎರಡು ದಿನಗಳ ಉದ್ಯೋಗಮೇಳದಲ್ಲಿ ಜಿಲ್ಲೆಯಿಂದ 113 ಮಹಿಳಾ, 451 ಪುರುಷ ಒಟ್ಟು 564 ಅಭ್ಯಥರ್ಿಗಳಿಗೆ ಉದ್ಯೋಗದಾತರು ನೇಮಕಾತಿ ಪತ್ರಗಳನ್ನು ವಿತರಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಲ್ಲೂರ ಬಸವರಾಜ, ವಿವಿಧ ಖಾಸಗಿ ಕಂಪನಿಗಳ ಉದ್ಯೋಗದಾತರು, ಉದ್ಯೋಗಾಕಾಂಕ್ಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.