ಲೋಕದರ್ಶನ ವರದಿ
ಶಿರಹಟ್ಟಿ 27: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೇ ಗುಣಮಟ್ಟದ ಶಿಕ್ಷಣ ಪಡೆದರು, ಸರ್ಕಾರಿ ಉದ್ಯೋಗ ಸಿಗುವುದು ವಿರಳ. ಹೀಗಾಗಿ ಯುವ ಸಮೋಹವು ಸ್ವ ಉದ್ಯಮದತ್ತ ಮುಖ ಮಾಡುವುದರ ಮೂಲಕ ಸಮೃದ್ಧ ಬದುಕಿಗೆ ಮುನ್ನುಡಿ ಬರೆಯಬೇಕು ಹಾಗೂ ವಿವಿಧ ಕೌಶಲ್ಯಗಳ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ನಿರ್ಮಿಸಿಕೊಳ್ಳಿ ಎಂದು ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶಶಿಧರ ಶಿರಸಂಗಿ ಹೇಳಿದರು.
ಅವರು ಸ್ಥಳೀಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯಲ್ಲಿ ನಡೆದ 3 ದಿನಗಳ ಕೌಶಲ್ಯ ಉದ್ಯೋಗ ಔಟ್ರೀಚ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಉದ್ಯಮಶೀಲತೆ ಬಹು ಮುಖ್ಯ ಪಾತ್ರವಹಿಸುತ್ತದೆ. ಹೀಗಾಗಿ ಸರ್ವರೂ ಸ್ವ ಉದ್ಯೋಗದತ್ತ ಆಸಕ್ತಿ ಬೆಳಸಿಕೊಳ್ಳುವುದರ ಮೂಲಕ ಸ್ವಾವಲಂಬಿಗಳಾಗಿ ಬದುಕು ಸಾಗಿಸಬೇಕು. ಅಲ್ಲದೇ ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಏನನ್ನಾರೂ ಸಾಧಿಸಬೇಕು ಎಂಬ ಛಲ, ಕನಸ್ಸು, ನಂಬಿಕೆ ಹಾಗೂ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಆತ್ಮಸ್ಥೈರ್ಯ ಹಾಗೂ ಕಠಿಣ ಪರಿಶ್ರಮದ ಮೂಲಕ ಕೆಲಸ ಮಾಡಿದರೆ ಮಾತ್ರ ಜೀವನದಲ್ಲಿ ಉನ್ನತ ಸ್ಥಾನ ಹಾಗೂ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಶಿಬಿರಾಥರ್ಿಗಳು ಸ್ವ ಉದ್ಯಮದಲ್ಲಿ ಸಹನೆ, ತಾಳ್ಮೆ ಹಾಗೂ ಸೇವಾ ಮನೋಭಾವವನ್ನು ಬೆಳಸಿಕೊಳ್ಳುವುದರ ಮೂಲಕ ಒಬ್ಬ ಯಶಸ್ವಿ ಉದ್ಯಮಿಯಾಗಿ ಬೆಳೆದು ಇತರರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಮುಂದಾಗಬೇಕು ಎಂದು ಸಲಹೆ ನೀಡಿದರು.
ನಂತರ ಕೌಶಲ್ಯ ಉದ್ಯೋಗ ಔಟ್ರೀಚ್ ತರಬೇತಿಯ ಸಂಯೋಜಕ ಪಿ.ಎನ್. ವದರಿ, ಮಾತನಾಡಿ. ದೇಶ ಆಥರ್ಿಕವಾಗಿ ಸದೃಡವಾಗಬೇಕಾದರೆ ಉದ್ಯಮಶೀಲತೆ ಬಹಳ ಅವಶ್ಯ ಹೀಗಾಗಿ ಯುವ ಜನಾಂಗ ಶಿಕ್ಷಣದ ಜೊತೆಗೆ ಸ್ವ ಉದ್ಯೋಗ ಮಾಡುವ ಹವ್ಯಾಸ ಬೆಳಸಿಕೊಳ್ಳಬೇಕು. ಸ್ವ ಉದ್ಯಮದಲ್ಲಿ ಲಾಭ-ನಷ್ಟಗಳು ಸಾಮಾನ್ಯ. ಆದ್ರಿಂದ ತರಬೇತಿ ಸಂಸ್ಥೆಗಳ ಮೂಲಕ ಹೆಚ್ಚಿನ ಜ್ಞಾನ ಪಡೆದು, ಒಬ್ಬ ಯಶಸ್ವಿ ಉದ್ಯಮಿಯಾಗಿ, ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ಕಲ್ಪಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿಡಾಕ್ ಸಂಸ್ಥೆಯ ಮಂಜುನಾಥ ಮುಳಗುಂದ, ಲಾಲ್ಸಾಬ್ ನದಾಫ್, ಪ್ರಕಾಶ ಮೇಟಿ, ಪ್ರದೀಪ ಗೊಡಚಪ್ಪನವರ, ಸಂತೋಷ, ಬಸವರಾಜ ಸಂಗಪ್ಪಶೆಟ್ಟರ, ಸುಜಾತ ದೊಡ್ಡುರ, ಸಿದ್ದಪ್ಪ ಹೂಗಾರ, ಹಸನಸಾಬ ಕಿಲ್ಲೇದಾರ ಸೇರಿದಂತೆ ನೂರಾರು ವಿದ್ಯಾಥರ್ಿಗಳು ಉಪಸ್ಥಿತರಿದ್ದರು.