ಸಪ್ತಶೀಲಗಳನ್ನು ಅಳಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ

ಇಳಕಲ್ಲ25: ಬಸವಣ್ಣನವರು ಹೇಳಿದ ಸಪ್ತಶೀಲಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಂಡು ಇಡೀ ಸಮಾಜಕ್ಕೆ ಮಾದರಿಯಾಗಿರಿ ಎಂದು ಕನ್ನಡ ಮಾಧ್ಯಮ ಪ್ರೌಢಶಾಲೆ ಚೇರಮನ್ನ ಕೆ.ಎಸ್.ಕಂದಿಕೊಂಡ ಹೇಳಿದರು.

ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಎ.ಸಿ.ಓ. ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾಥರ್ಿಗಳ ಬಿಳ್ಕೋಡಿಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.  

ವಿದ್ಯಾಥರ್ಿಗಳು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಬೇಕಾದರೆ ಮೊದಲು ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.  ಅಲ್ಲದೇ ಪರೀಕ್ಷೆಯನ್ನು ಎದುರಿಸಲು ಮಾನಸಿಕವಾಗಿ ಸಿಧ್ಧತೆ ಮಾಡಿಕೊಳ್ಳಬೇಕು.  ಜೊತೆಗೆ ತಮಗೆ ಸಿಕ್ಕಂತ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾಥರ್ಿಗಳಿಗೆ ಕಿವಿ ಮಾತು ಹೇಳಿದರು.

ಆಂಗ್ಲ ಮಾಧ್ಯಮ ಪ್ರೌಢಶಾಲಾ ಚೇರಮನ್ನ ಡಾ:ಡಿ.ಡಿ. ದೇಶಪಾಂಡೆ ಮಾತನಾಡಿ ಎಸ್.ಎಸ್.ಎಲ್.ಸಿ. ವಿದ್ಯಾಥರ್ಿಗಳ ಮೊದಲ ಹಂತ ಆದ್ದರಿಂದ ಟಿ.ವ್ಹಿ. ಮತ್ತು ಮೊಬೈಲ್ ಗಳಿಂದ ದೂರವಿದ್ದು, ಏಕಾಗ್ರತೆಯಿಂದ ವಿಷಯವನ್ನು ಅಭ್ಯಸಿಸಿ ಮನನ ಮಾಡಿಕೊಳ್ಳುವದರ ಜೊತೆಗೆ ಶಿಕ್ಷಕರ ಮಾರ್ಗದರ್ಶನ ಪಡೆದು ಎಲ್ಲರೂ ಉತ್ತಮ ಅಂಕಗಳನ್ನು ಗಳಿಸಿ ಎಂದು ವಿದ್ಯಾಥರ್ಿಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಡಗಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮತ್ತು ವಿದ್ಯಾಥರ್ಿಗಳು ಹಾಗೂ ಶಿಕ್ಷಕರು ತಮ್ಮ ಅನಿಸಿಕೆಯನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಎಂ. ಚೋಪದಾರ,  ಕಾರ್ಯದಶರ್ಿ ಬಿ.ಎಸ್.ಗೋಟೂರ, ಕೋಶಾಧ್ಯಕ್ಷ ಪಿ.ಡಿ. ಯರಡೋಣಿ, ಸಹ-ಕಾರ್ಯದಶರ್ಿ ವ್ಹಿ.ವಾಯ್. ರ್ಯಾವಣಿಕಿ , ಶಿಶುವಿಹಾರ ಚೇರಮನ್ನ ಪಿ.ಎನ್.ದರಕ, ಸದಸ್ಯರಾದ ಬಿ.ಎಂ.ಮುದಗಲ್ಲ  ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಿ.ಎಸ್.ಕವಡಿಮಟ್ಟಿ, ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ ವ್ಹಿ.ಎಸ್.ಗುಡೂರ , ಶಿಕ್ಷಕ /ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.  

ಕುಮಾರಿ ವೈಷ್ಣವಿ ಕುಂಟೋಜಿ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಎಸ್.ವಾಯ್. ಪತ್ತಾರ ಸ್ವಾಗತಿಸಿದರು ಮಿಸ್. ವ್ಹಿ.ಪಿ.ಸಜ್ಜನ ವಂದಿಸಿದರು . ಎಸ್.ಜಿ.ಗೋರ್ಕಲ್ ನಿರೂಪಿಸಿದರು.