ಲೋಕದರ್ಶನವರದಿ
ಶಿಗ್ಗಾವಿ :ತಾಲೂಕಿನ ಹುಲಗೂರ ಗ್ರಾಮಕ್ಕೆ ನೂತನ ಪೊಲೀಸ್ ಠಾಣೆಯನ್ನು ಮಾಡುವಂತೆ ಪತ್ರಿಕಾ ಹೇಳಿಕೆಯ ಮೂಲಕ ಕಾಂಗ್ರೇಸ್ ಮುಖಂಡ ಹಾಗೂ ವಾಲ್ಮೀಕಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರನಗೌಡ ಪಾಟೀಲ್ ಮನವಿ ಮಾಡಿದ್ದಾರೆ.
ಹುಲಗೂರ ಗ್ರಾಮ ದೊಡ್ಡ ಗ್ರಾಮ ಪಂಚಾಯತ ಸಮೂಹವನ್ನು ಹೊಂದಿದ್ದು ಒಟ್ಟು 29 ಗ್ರಾಮ ಪಂಚಾಯತಿ ಸದಸ್ಯರನ್ನು ಹೊಂದಿದೆ ಹುಲಗೂರ ಪಟ್ಟಣದಲ್ಲಿ ಹಜರೇಶಾ ಖಾದ್ರಿಯವರ ಉರುಸು ನಡೆಯುವ ಸಂದರ್ಭದಲ್ಲಿ 3 ಲಕ್ಷಕ್ಕೂ ಹೆಚ್ಚು ಭಕ್ತ ಸಮೂಹವನ್ನು ಒಳಗೊಂಡಿರುತ್ತದೆ ಜೊತೆಗೆ ಪಕ್ಕದ ಗ್ರಾಮವಾದ ಶಿಶುವಿನಾಳ ಷರೀಫರ ಹಾಗೂ ಗುರು ಗೋವಿಂದ ಭಟ್ಟರ ಜಾತ್ರೆ ಪ್ರತಿ ವರ್ಷ ಲಕ್ಷಾಂತರ ಜನಸ್ತೋಮವನ್ನು ಹೊಂದಿರುತ್ತದೆ, ಹುಲಗೂರ ಅಕ್ಕಪಕ್ಕದ 20 ರಿಂದ 30 ಹಳ್ಳಿಗಳು ಹುಲಗೂರ ಗ್ರಾಮಕ್ಕೆ ಸಂಪರ್ಕವನ್ನು ಹೊಂದಿರುತ್ತವೆ ಸಹಾ ಜನಜಂಗುಳಿಯಿಂದ ಕೂಡಿದ ಪ್ರದೇಶವೂ ಇದಾಗಿದ್ದು ರೈತರ, ವಿದ್ಯಾಥರ್ಿಗಳ ಹಾಗೂ ಸಾರ್ವಜನಿಕರಿಗೆ ಭದ್ರತೆಯ ದೃಷ್ಟಿಯಿಂದ ಅತಿ ಅವಶ್ಯವಾಗಿದೆ ಜೊತೆಗೆ ಈ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಠಾಣೆ ಅವಶ್ಯವಾಗಿದೆ ಈ ಕುರಿತು 30 ವರ್ಷಗಳ ಹಿಂದೆ ಈ ಭಾಗದ ಚುನಾಯಿತ ಜನಪ್ರತಿನಿಧಿಗಳು ಮಂಜೂರಾತಿಗಾಗಿ ಪ್ರಯತ್ನ ಮಾಡಿದ್ದನ್ನು ಸ್ಮರಿಸಿರುವ ಅವರು ಗೃಹ ಸಚಿವರು ಸಹಿತ ನಮ್ಮ ಕ್ಷೇತ್ರದವರೇ ಇರುವದರಿಂದ ಕೂಡಲೇ ಮಂಜೂರಾತಿ ಮಾಡಿಕೊಡಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ.