ಸಮಯಪ್ರಜ್ಞೆ ಇರಲಿ: ಶಾಸಕ ಜೆ ಟಿ ಪಾಟೀಲ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಧಿಕಾರಿಗಳ ನಡೆಗೆ ತೀವ್ರ ಶಾಸಕರು ಅಸಮಾಧಾನ
ಬೀಳಗಿ 26: ನಾವು ದೇಶದ ಪ್ರಜೆ, ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಗೌರವ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಇವೆಲ್ಲಕ್ಕೂ ನಮ್ಮಲ್ಲಿ ಸಮಯ ಪ್ರಜ್ಞೆ ಇರಬೇಕು ಎನ್ನುವ ಕನಿಷ್ಠ ಅರಿವು ತಾಲೂಕಿನ ಅಧಿಕಾರಿಗಳಲ್ಲಿ ಇಲ್ಲದೆ ಇರುವುದು ವಿಪರ್ಯಾಸದ ಸಂಗತಿ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ, ಶಾಸಕ ಜೆ ಟಿ ಪಾಟೀಲ ಹೇಳಿದರು.
ಪಟ್ಟಣದ ತಹಸೀಲ್ದಾರ ಕಾರ್ಯಾಲಯ ಆವರಣದಲ್ಲಿ ತಾಲೂಕಾಡಳಿತ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ 76 ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅವರು ಮುಂಜಾನೆ 7.45 ಗಂಟೆಗೆ ಸರಿಯಾಗಿ ಪಟ್ಟಣದ ಗ್ರಾಮ ಚಾವಡಿಯಲ್ಲಿ ದ್ವಜಾರೋಹನವಾಗುವ ಸಂದರ್ಭದಲ್ಲಿ ಕೇವಲ ಇಬ್ಬರು ಹಿರಿಯ ಅಧಿಕಾರಿಗಳು ಇದ್ದರು ಇನ್ನುಳಿದ ಯಾವುದೇ ಅಧಿಕಾರಿಗಳು ಬಾರದೆ ಇರುವುದಕ್ಕೆ ಶಾಸಕರು ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ತಡವಾಗಿ ಬಂದ ಅಧಿಕಾರಿಗಳನ್ನು ವೇದಿಕೆ ಮೇಲೆ ಬಾರದಂತೆ ಸೂಚಿಸಿದರು, ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ, ತಾಪಂ ಸೇರಿದಂತೆ ಕೆಲವು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ದ್ವಜಾರೋಹನಕ್ಕೆ ಬಾರದೇ ಇರುವುದು ಸರಿಯಾದ ಕ್ರಮವಲ್ಲ ಇದು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದಂತೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರು ನಮ್ಮಲ್ಲಿ ಸಮಯ ಪ್ರಜ್ಞೆ, ದೇಶಾಭಿಮಾನ ಬೆಳೆಯುತ್ತಿಲ್ಲ ಎಂದರೆ ಏನರ್ಥ, 12 ನೇ ಶತಮಾನದಲ್ಲಿ ಬಸವಣ್ಣನವರು ಸರಿಸಮಾನ ಸಮಾಜ ನಿರ್ಮಾಣ, ಮಹಾತ್ಮಾ ಗಾಂಧೀಜಿಯವರು ಅಹಿಂಸಾ ಮಾರ್ಗದಿಂದ ದೇಶದ ಸ್ವಾತಂತ್ರ್ಯ ಹೋರಾಟ, ಡಾ ಬಿ ಆರ್ ಅಂಬೇಡ್ಕರ ಅವರು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಂವಿಧಾನ ರಚಿಸಿದ್ದು ಜತೆಗೆ ಸರ್ಧಾರ ವಲ್ಲಭಾಯಿ ಪಟೇಲ ಅವರು ಅಂದು ಎಲ್ಲ ರಾಜ್ಯಗಳ ರಾಜ್ಯರುಗಳನ್ನು ಒಗ್ಗೂಡಿಸಿ ಪ್ರಜಾಪ್ರಭುತ್ವ ಚೌಕಟ್ಟಿಗೆ ತಂದಿದ್ದರ ಪರಿಣಾಮ ಇಂದು ಸ್ವಾತಂತ್ರ್ಯದಿಂದ ಎಲ್ಲರೂ ಬದುಕುತ್ತಿದ್ದೇವೆ, ದೇಶಕ್ಕಾಗಿ ಹೋರಾಡಿದ ಪ್ರತಿಯೋಬ್ಬರಲ್ಲಿಯೂ ದೇಶಾಭಿಮಾನ ಇತ್ತು, ಇವತ್ತು ಅಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಎಲ್ಲರು ಸೇರಿ ಮೊದಲು ದೇಶಾಭಿಮಾನ ಬೆಳಿಸಿಕೊಳ್ಳಬೇಕು ಮತ್ತು ಮಕ್ಕಳಲ್ಲಿಯೂ ದೇಶಾಭಿಮಾನ ಕಲಿಸುವ ಕೆಲಸವಾಗಬೇಕು, ಮೇಲು ಕೀಳು ಎನ್ನುವ ಬಾವನೆ ಎಲ್ಲರಲ್ಲಿಯೂ ಹೋಗಬೇಕು ನಾವೆಲ್ಲರು ಒಂದೇ ಎನ್ನುವ ಭಾವನೆ ಬಂದಾಗ ರಾಜ್ಯ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.
ಕ್ಷೇಮೆ ಕೇಳಿದ ತಹಸೀಲ್ದಾರ, ಬಿಇಓ ಹಿ
ತಾಲೂಕಾಡಳಿತ ಸರಿಯಾದ ಮಾರ್ಗ ಅನುಸರಿಸಿಲ್ಲ, ಶಿಕ್ಷಣ ಇಲಾಖೆ ಸಮಯಕ್ಕೆ ಸರಿಯಾಗಿ ಮಕ್ಕಳನ್ನು ದ್ವಜಾರೋಹನಕ್ಕೆ ಕರೆದುಕೊಂಡು ಬಂದಿಲ್ಲ ಮತ್ತು ತಾಲೂಕಿನ ವಿವಿಧ ಇಲಾಖೆಯ ಅಧೀಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿ ಗಣರಾಜ್ಯೋತ್ಸವ ಈ ಹಬ್ಬವನ್ನು ಆಚರಿಸಿಲ್ಲ ಎಂದು ಶಾಸಕರು ತರಾಟೆಗೆ ತಗೆದುಕೊಂಡ ನಂತರ ತಹಸೀಲ್ದಾರ ವಿನೋದ ಹತ್ತಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಎಸ್ ಆದಾಪೂರ ಅವರು ಮಾತನಾಡುವಾಗ ಕ್ಷೇಮೆ ಕೇಳಿ ಇನ್ನು ಮುಂದೆ ಹೀಗೆ ಆಗದಂತೆ ನಿಗಾವಹಿಸುಲಾಗುವುದು ಎಂದು ಇಬ್ಬರು ಅಧಿಕಾರಿಗಳು ವೇದಿಕೆ ಮೇಲೆ ಮಾತನಾಡುತ್ತ ತಿಳಿಸಿದರು.
ಕೋಟ್ಸ್-
ಕಂದಾಯ ಇಲಾಖೆ, ಪೋಲಿಸ್ ಇಲಾಖೆ, ಎಸ್.ಎಲ್.ಓ, ಆರ್ ಓ ಕಚೇರಿ ಸೇರಿದಂತೆ ಹಲವಾರು ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಾರ್ವಜನಿಕರ ಕೆಲಸ ಮಾಡಲು ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು ತಕ್ಷಣ ತಿದ್ದಿಕೊಂಡು ಪಾರದರ್ಶಕ ಆಡಳಿತ ನಡೆಸಬೇಕು ಇಲ್ಲದಿದ್ದಲ್ಲಿ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ.
-ಜೆ.ಟಿ.ಪಾಟೀಲ್ ಶಾಸಕ ಬೀಳಗಿ
ತಹಸೀಲ್ದಾರ ವಿನೋದ ಹತ್ತಳ್ಳಿ ಬಿಇಒ ಆರ ಎಸ್ ಆದಾಪೂರ ತಾಪಂ ಇಓ ಅಭಯಕುಮಾರ ಮೊರಬ ಇದ್ದರು