ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿ: ಬೀರಪ್ಪ

ಬಾಗಲಕೋಟೆ : ಪ್ರತಿಯೊಬ್ಬರು ಕೂಡಾ ತಮ್ಮ ಪಾಲಿನ ಜಬಾಬ್ದಾರಿಯನ್ನು ಅರಿತು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ನಗರ ಬಿ.ಆರ್.ಸಿ.ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಚಿಕ್ಕೋಡಿಯ ಉಪನಿದರ್ೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಎಂ.ಜಿ.ದಾಸರ ಅವರಿಗೆ ಮತ್ತು ಸರಕಾರಿ ನೌಕರರ ಸಂಘದ ನಿದರ್ೇನಿರ್ದೇಶಕ ರಾಗಿ ಆಯ್ಕೆಯಾದ ವಿಕಲಚೇತನ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ತುಕರಾಮ.ಎಸ್.ಲಮಾನಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

    ನಗರ ಬಿ.ಆರ್.ಸಿ.ಕಚೇರಿಯಲ್ಲಿ ವಿಕಲಚೇತನ ನೌಕರರ ಸಂಘದ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಚಿಕ್ಕೋಡಿಯ ಉಪನಿದರ್ೇಶಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾದ ಎಂ.ಜಿ.ದಾಸರ ಅವರಿಗೆ ಮತ್ತು ಸರಕಾರಿ ನೌಕರರ ಸಂಘದ ನಿದರ್ೇನಿರ್ದೇಶಕ ರಾಗಿ ಆಯ್ಕೆಯಾದ ವಿಕಲಚೇತನ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ತುಕರಾಮ.ಎಸ್.ಲಮಾನಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ತಮಗೆ ವಹಿಸಲಾದ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ಅರಿತು ಮಾಡಿದಾಗ ಮಾತ್ರ ಮಾಡಿದ ಕಾರ್ಯ ಶಾಶ್ವತವಾಗಿ ನೆನಪಿನಲ್ಲಿ ಇರಲು ಸಾಧ್ಯವಾಗುತ್ತದೆ.ಸಾರ್ವಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿಕೊಟ್ಟಾಗ ಮಾತ್ರ ಉತ್ತಮ ಅಧಿಕಾರಿಯಾಗಲು ಸಾಧ್ಯವಾಗುತ್ತದೆ.ಎಂ.ಜಿ.ದಾಸರ ಅವರು ಪ್ರೌಢ ಶಾಲೆಯ ಶಿಕ್ಷಕರ ಹುದ್ದೆಯಿಂದ ಉಪನಿದರ್ೇಶಕರ ಹುದ್ದೆಯ ತನಕ ಕಾರ್ಯನಿರ್ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. 

        ಎಂ.ಜಿ.ದಾಸರ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಶೈಕ್ಷಣಿಕ ಪ್ರಗತಿಯನ್ನು ಉಂಟು ಮಾಡಿದರಿಂದ ಶಿಕ್ಷಕರ ಹೃದಯದಲ್ಲಿ ನೆಲೆಸಿದ್ದಾರೆ.ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುವ ಇಂತಹ ಪ್ರಮಾಣಿಕ ಅಧಿಕಾರಿಗಳು ಅಗತ್ಯ ಶಿಕ್ಷಣ ಇಲಾಖೆಗೆ ಅಗತ್ಯವಿದೆ.ಅಲ್ಲದೇ ಸರಕಾರಿ ನೌಕರರ ಸಂಘಕ್ಕೆ ಆಯ್ಕೆಯಾದ ಪ್ರತಿನಿಧಿಗಳು ಕೂಡಾ ನೌಕರರ ಹಿತವನ್ನು ಕಾಯಲು ಬದ್ಧರಾಗಿರಬೇಕುಎಂದು ಹೇಳಿದರು.

    ಸನ್ಮಾನ ಸ್ವೀಕರಿಸಿ ನಿವೃತ್ತ ಉಪನಿದರ್ೇಶಕರಾದ ಎಂ.ಜಿ.ದಾಸರ ಅವರು ಮಾತನಾಡುತ್ತ,ಶಿಕ್ಷಕರ ವೃತ್ತಿಯು ಎಲ್ಲಾ ವೃತ್ತಿಗಿಂತ ಪವಿತ್ರವಾದ ವೃತ್ತಿಯಾಗಿದೆ.ವೃತ್ತಿಯ ಪಾವಿತ್ರತೆಯನ್ನು ಪ್ರತಿಯೊಬ್ಬ ಶಿಕ್ಷಕರು ಕಾಪಾಡಿಕೊಳ್ಳಬೇಕು.

     ದೇಶದ ಭವಿಷ್ಯಯು ನಾಲ್ಕು ವರ್ಗ ಕೋಣೆಗಳಲ್ಲಿ ಅಡಗಿರುವುದರಿಂದ ಶಿಕ್ಷಕರ ಪಾತ್ರ ಬಹಳ ಮಹತ್ವದಾಗಿದೆ.ಶಿಕ್ಷಣ ಕ್ಷೇತ್ರವು ಸದಾ ಬದಲಾವಣೆಯಾಗುವ ಕ್ಷೇತ್ರವಾಗಿದೆ.

 ಬದಲಾವಣೆಗೆ ತಕ್ಕಂತೆ ಬೋಧನೆಯನ್ನು ಮಾಡಬೇಕಾದರೇ ಶಿಕ್ಷಕರು ಕೂಡಾ ಅಧ್ಯಯನಶೀಲ ಪ್ರವೃತ್ತಿಯನ್ನು ಬೆಳಿಸಿಕೊಳ್ಳಬೇಕು. 

ನಿವೃತ್ತಿಯಾದರು ಕೂಡಾ ಶಿಕ್ಷಣ ಇಲಾಖೆಯಲ್ಲಿ ಸೇವೆ ಮಾಡಲು ಸದಾ ಸಿದ್ದರಿರುವುದಾಗಿ ತಿಳಿಸಿದರು.

    ವಿಕಲಚೇತನ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದಶರ್ಿ ತುಕರಾಮ.ಎಸ್.ಲಮಾಣಿ ಮಾತನಾಡಿ,ಸರಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮತ್ತು ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರಾದ ಮಂಜುನಾಥ ಪರೀಟ ಮಾತನಾಡಿದರು.

        ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಕಲಚೇತನ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರಕಾಶ ಬೆಳಗಲಿ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ವಿಕಲಚೇತನ ನೌಕರರ ಸಂಘದ ರಾಜ್ಯ ಖಜಾಂಚಿ ಮಂಜುನಾಥ ಹಿಂಡಿಹುಳಿ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಇದ್ಲಿ, ಸಂಘದ ನಿದರ್ೇಶಕರಾದ ಅಶೋಕ ಕಂಚಗಾರ,  ಜಾನಪದ ಪರಿಷತ್ತಿನ ಅಧ್ಯಕ್ಷರಾದ ಆನಂದ ಪೂಜಾರಿ, ಶಿಕ್ಷಕರಾದ ದೇವಪ್ಪ ಒಂಟಿಗಾರ, ನೂತನ ಪಿಂಚಣಿ ಯೋಜನೆಗೆ ಒಳಪಡುವ ಸರಕಾರಿ ನೌಕರರ ಸಂಘದ ತಾಲೂಕ ಪ್ರಧಾನ ಕಾರ್ಯದಶರ್ಿ ಮಲ್ಲಿಕಾಜರ್ುನ ಹುಲಸೂರ, ಹೊಳಿಬಸು ಚಿತ್ತರಗಿ, ವಿಕಲಚೇತನ ನೌಕರರ ಸಂಘದ ತಾಲೂಕ ಖಜಾಂಚಿ ಸುರೇಶ ಕಿಳ್ಯಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

  ವಿಕಲಚೇತನ ನೌಕರರ ಸಂಘದ ತಾಲೂಕ ಸಂಘಟನಾ ಕಾರ್ಯದಶರ್ಿ ಸಂಗಮೇಶ ಶಿರಗುಂಪಿ ಸ್ವಾಗತಿಸಿ, ಶಿಕ್ಷಕರಾದ ಡಿ.ಎಲ್.ರಾಠೋಡ ವಂದಿಸಿದರು. ಪೋಟೊ: ಸರಕಾರಿ ನೌಕರರ ಸಂಘದ ನೂತನ ನಿದರ್ೇಶಕರಾಗಿ ಆಯ್ಕೆಯಾದ ತುಕರಾಮ ಲಮಾಣಿ ಅವರನ್ನು ವಿಕಲಚೇತನ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.