ಜಲ, ನೆಲ ರಕ್ಷಣೆ ಸಂಸ್ಕೃತಿಯಾಗಲಿ: ಪರಶುರಾಮ

ಧಾರವಾಡ 26: ಪ್ರಸ್ತುತ ಜಲ ಮತ್ತು ನೆಲ ಹಲವು ಕಾರಣಗಳಿಂದ ಮಾಲಿನ್ಯಕ್ಕೆ ಒಳಗಾಗಿದ್ದು, ಇವುಗಳ ಸಂರಕ್ಷಣೆ ಜನರ ಸಂಸ್ಕೃತಿಯಾಗಬೇಕು ಎಂದು ಜೆ.ಎಸ್.ಎಸ್. ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಪರಶುರಾಮ ಡಿ. ಹೇಳಿದರು. 

ಜೆ.ಎಸ್.ಎಸ್. ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನರ್ಾಟಕ ಸರಕಾರದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಸಹಯೋಗದಲ್ಲಿ ಬಿ.ಇಡಿ. ಪ್ರಶಿಕ್ಷಣಾಥರ್ಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಸಮಗ್ರ ಜಲ ಮತ್ತು ನೆಲ ನಿರ್ವಹಣೆ ಸವಾಲುಗಳು ಮತ್ತು ಪರಿಹಾರಗಳು ಎಂಬ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾನವ ಪ್ರಕೃತಿಯ ಕೂಸು. ಮಾನವ ಇದ್ದರೂ ಇಲ್ಲದಿದ್ದರೂ ಪ್ರಕೃತಿ ಇರುತ್ತದೆ, ಆದರೆ ಪ್ರಕೃತಿಯಿಲ್ಲದೆ ಮಾನವ ಬದುಕುವುದು ಅಸಾಧ್ಯ. ಆದ್ದರಿಂದ ಇಂದು ಅತ್ಯಂತ ಅವಶ್ಯಕವಾದ ಜಲ ಹಾಗೂ ನೆಲ ಸಂರಕ್ಷಣೆ ಅತ್ಯಂತ ಅವಶ್ಯಕವಾಗಿದೆ ಎಂದರು.

ಪರಿಸರ ತಜ್ಞ ಪ್ರಕಾಶ ಗೌಡರ ಮಾತನಾಡಿ ಪರಿಸರ ಬೆಳವಣಿಗೆಗೆ ಪಕ್ಷಿ ಸಂಕುಲದ ಕೊಡುಗೆ ಹಾಗೂ ಪಕ್ಷಿ ಸಂಕುಲಗಳ ಸಂರಕ್ಷಣೆಗೆ ಎಲ್ಲರು ಕೈ ಜೋಡಿಸಬೇಕು ಎಂದರು. 

ಕ್ರಿಯಾಶೀಲ ಗೆಳೆಯ ಬಳಗದ ಮುಕುಂದ ಮೈಗೂರರವರು ಮಾತನಾಡಿ ಜಲವು ಜೀವಜಲವಾಗಿದ್ದು, ಪ್ರತಿಯೊಂದು ಜೀವಿಗೂ ಅಗತ್ಯವಾಗಿದೆ. ಅದರ ನಿರ್ವಹಣೆ ಪ್ರತಿಯೊಬ್ಬರ ಹೊಣೆ ಎಂದು ಹೇಳಿ, ಜಲ ನಿರ್ವಹಣೆ ಕಾರ್ಯಗಳ ಬಗ್ಗೆ ಅರಿವು ಮೂಡಿಸಿದರು. 

ವಾಲ್ಮಿ ಸಂಸ್ಥೆ ಉಪನ್ಯಾಸಕಿ ಶೈಲಜಾ ಹೊಸಮಠ ಇವರು ಜಲ ಮತ್ತು ನೆಲ ಸಂರಕ್ಷಣೆಗೆ ವಾಲ್ಮಿ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಕಿರು ಮಾಹಿತಿಯನ್ನು ನೀಡಿದರು. ಪ್ರಾಧ್ಯಾಪಕಿ ಡಾ. ಸುಕನ್ಯಾ ಅಪ್ಪೋಜಿ ನಿರೂಪಿಸಿದರು. ಶೈಲಜಾ ಹೊಸಮಠ ಸ್ವಾಗತಿಸಿದರು.