ಶಿಗ್ಗಾವಿ 02: ಸ್ಲಂಬೋರ್ಡ್ ನಿವಾಸಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಅಭಿವೃದ್ಧಿಗೆ ವಿಶೇಷ ಆದ್ಯತೆ ಕೊಡಬೇಕು ಎಂದು ಶಾಸಕ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.
ಪಟ್ಟಣದ 4ನೇ ವಾರ್ಡಿನಲ್ಲಿ ಪೌರಾಡಳಿತ ಇಲಾಖೆ, ಶಿಗ್ಗಾವಿ ಪುರಸಭೆ ಆಡಳಿತ ಮಂಡಳಿ ವತಿಯಿಂದ ನಡೆದ ಸ್ವಚ್ಛತಾ ಅಭಿಯಾನ ಹಾಗೂ ಸಾರ್ವಜನಿಕ ಆಹ್ವಾನ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸ್ಲಂವಾಸಿಗಳೆಂದರೆ ಅಧಿಕಾರಿ ವರ್ಗ ತಾತ್ಸಾರ ಮಾಡದೆ ಕುಡಿಯುವ ನೀರು, ಸ್ವಚ್ಚತೆ, ಆರೋಗ್ಯ ಸೇರಿದಂತೆ ವಿವಿಧ ಮೂಲಬೂತ ಸೌಲಭ್ಯಗಳನ್ನು ಒದಗಿಸುವಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಈ ಸ್ವತ್ತು ಊತಾರ ಹಾಗೂ ವಿವಿಧ ಪುರಸಭೆ ದಾಖಲಾತಿಗಳನ್ನು ಪಡೆಯುವಲ್ಲಿ ಇಲ್ಲಿನ ಅಧಿಕಾರಿಗಳು ಸರ್ಕಾರದ ನಿಗದಿತ ಪೀ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿದೆ ಅಧಿಕಾರಿಗಳು ಹೆಚ್ಚಿನ ಹಣಕ್ಕೆ ಬೇಡಿಕೆ ಇಡದೆ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು. ಜೊತೆಗೆ ಬಿ ಖಾತಾ ಇಲ್ಲದವರು ಪುರಸಭೆಗೆ ಅರ್ಜಿಸಲ್ಲಿಸಿ ಬಿ ಖಾತಾ ಪಡೆಯುವಂತೆ ತಿಳಿಸಿದರು.
ಪಟ್ಟಣ ವ್ಯಾಪ್ತಿಯ ಪಡಿತರ ವಿತರಣೆ ಸಮಸ್ಯೆ ನಿವಾರಿಸಲು ನ್ಯಾಯಬೆಲೆ ಅಂಗಡಿಗಳನ್ನ ಹೆಚ್ಚಿಗೆ ಮಾಡಲಾಗುತ್ತಿದ್ದು ಪಡಿತರ ಪಡೆಯಲು ಆಶ್ರಯಪ್ಲಾಟ್ ನಲ್ಲಿ ಒಂದು ನ್ಯಾಯಬೆಲೆ ಅಂಗಡಿ ತೆರೆಯುವ ಬರವಸೆ ನೀಡಿದರು. ಕಾರ್ಯಕ್ರಮದಲ್ಲಿ ತಹಸೀಲ್ದಾರ ರವಿ ಕೊರವರ, ತಾಪಂ ಇಓ ಕುಮಾರ ಮಣ್ಣವಡ್ಡರ, ಪುರಸಭೆ ಮುಖ್ಯಾಧಿಕಾರಿ ಮಲ್ಲೇಶ ಎಚ್, ಪುರಸಭೆ ಅದ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಸುಭಾಸ ಚೌಹಾಣ, ಜಾಫರಖಾನ್ ಪಠಾಣ, ರಮೇಶ ವನಹಳ್ಳಿ, ಪ್ರೇಮಾ ಪಾಟೀಲ, ಅನುರಾಧಾ ಮಾಳವಾದೆ, ವಸಂತಾ ಬಾಗೂರ, ಗೌಸಖಾನ ಮುನಶಿ, ಮುನ್ನಾ ಲಕ್ಷ್ಮೇಶ್ವರ, ಮಂಜುನಾಥ ಮಣ್ಣಣ್ಣವರ, ಗುಡ್ಡಪ್ಪ ಜಲದಿ, ಚಂದ್ರು ಕೊಡ್ಲಿವಾಡ, ಮಹಾಂತೇಶ ಸಾಲಿ, ಸಾಧಿಕ ಮಲ್ಲೂರ, ಸೇರಿದಂತೆ ಸಾರ್ವಜನಿಕರು ಇದ್ದರು.