ಡಿ.16ಕ್ಕೆ ಬಸವೇಶ್ವರ ಕಾರ್ತಿಕೋತ್ಸವ
ರಾಣೇಬೆನ್ನೂರ 11 : ಡಿ 11ಸ್ಥಳೀಯ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿಯ ವತಿಯಿಂದ ಡಿ. 16 ರಂದು ರಾತ್ರಿ 7.30 ಕ್ಕೆ ಬಸವೇಶ್ವರ ದೇವರ ಕಾರ್ತಿಕೋತ್ಸವವು ಜರುಗಲಿದೆ. ಇದಕ್ಕೂ ಮುನ್ನ ಮುಂಜಾನೆಯಿಂದ ದೇವರ ಮೂರ್ತಿಗೆ ಅಭಿಷೇಕ, ಮಂಗಳಾರತಿ ಸೇರಿದಂತೆ ಪೂಜಾ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಅಜಯ್ ಜಂಬಗಿ ತಿಳಿಸಿದ್ದಾರೆ.